No menu items!
18.9 C
Munich
Wednesday, May 6, 2026

ಮಧ್ಯಪ್ರದೇಶದಲ್ಲಿ ಬಸ್-ಟ್ರಕ್ ನಡುವೆ ಭೀಕರ ಅಪಘಾತ: 13 ಮಂದಿ ಸಜೀವ ದಹನ

Must read

ಭೋಪಾಲ್: ಬಸ್ಸೊಂದು ಟ್ರಕ್‍ʼಗೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ 13 ಜನ ಸಾವಿಗೀಡಾದ ಘಟನೆ ಮಧ್ಯಪ್ರದೇಶದ ಗುನ ಹಾಗೂ ಅರೋನ್ ನಡುವಿನ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ 14 ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ 5 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಬಸ್ ಗುನಾದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಅರೋನ್‍ಗೆ ತೆರಳುತ್ತಿತ್ತು ಈ ವೇಳೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತಕ್ಕೊಳಗಾದ ಬಸ್ ಬಿಜೆಪಿ ಮುಖಂಡ ಧರ್ಮೇಂದ್ರ ಸಿಕರ್ವಾರ್ ಅವರ ಒಡೆತನದ್ದು ಎಂದು ತಿಳಿದು ಬಂದಿದೆ. ಬಸ್‍ನ ವಿಮೆ ಪ್ರಮಾಣಪತ್ರಗಳ ಅವಧಿ ಮುಗಿದಿದ್ದು, 2021 ರಿಂದ ರಸ್ತೆ ತೆರಿಗೆ ಸಹ ಪಾವತಿಸಿಲ್ಲ. ಬಸ್‍ನ ಸುರಕ್ಷತಾ ಪ್ರಮಾಣ ಪತ್ರದ ಅವಧಿ ಸಹ ಮುಗಿದಿತ್ತು ಎಂದು ವರದಿಯಾಗಿದೆ.
ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ನೆರವು ಘೋಷಣೆ ಮಾಡಲಾಗಿದೆ. ಅಪಘಾತಕ್ಕೆ ಕಾರಣ ಹಾಗೂ ಬಸ್‍ನ ದಾಖಲೆಗಳ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article