ಕೆಟಿಎಂ ಸಿನಿಮಾ ಇದೊಂದು ಅದ್ಭುತ ಸಿನಿಮಾ ಅಂತಿದ್ದಾರೆ ಪ್ರೇಕ್ಷಕರು. ಈ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ನೋಡಿ ಕೆಟಿಎಂ ಸಿನಿಮಾದ ನಾಯಕ ದೀಕ್ಷಿತ್ ಶೆಟ್ಟಿ ಭಾವುಕರಾಗಿದ್ದಾರೆ. ಕೆಟಿಎಂ ಸಿನಮಾ ಹೌಸ್ ಫುಲ್ ಆಗಿದ್ದು, ಪ್ರೇಕ್ಷಕಪ್ರಭುವಿಗೆ ದೀಕ್ಷಿತ್ ಧನ್ಯವಾದ ತಿಳಿಸಿದರು.
ಅರುಣ್ ನಿರ್ದೇಶನದ ಕೆಟಿಎಂ ಸಿನಿಮಾಗೆ ಎಲ್ಲೆಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಗ್ತಾಯಿದೆ. ದೀಕ್ಷಿತ್ ಹಾಗೂ ಚಿತ್ರತಂಡ ಕೈ ಮುಗಿದು ಪ್ರೇಕ್ಷಕರಿಗೆ ಥ್ಯಾಂಕು ಹೇಳಿದರು. ಇಷ್ಟವಾದರೂ ಹಾಗೂ ಇಷ್ಟವಾಗದೇ ಇದ್ರೂ ರಿವ್ಯೂ ಬರೆಯಿರಿ ಎಂದ ದೀಕ್ಷಿತ ಈ ಸಂದರ್ಭದಲ್ಲಿ ಹೇಳಿದರು. ಈ ವೇಳೆ ಮಾತನಾಡಿದ ಅವರು “ನನ್ನದೂ ಇದು ಮೂರು ವರ್ಷದ ಕನಸು.ನಿಮ್ಮ ಪ್ರಾಮಾಣಿಕ ರಿವ್ಯೂ ಬರೆಯಿರಿ. ನಾನು ದಿಯಾ ಹಾಗೂ ದಸರಾದಂತಹ ಸಿನಿಮಾ ಮಾಡಿದರೂ ಫಸ್ಟ್ ಡೇ ಶೋಗಾಗಿ, ಟೈಮ್ ಗಾಗಿ ಹೋರಾಡಬೇಕು” ಎಂದರು. ನಿಮ್ಮ ಸಪೋರ್ಟ್ ನಮಗೆ ಬೇಕು ಎಂದ ದೀಕ್ಷಿತ್, ಹಾಲಲ್ಲಿಯಾದರೂ ಹಾಕಿ, ನೀರಲ್ಲಿಯಾದರೂ ಹಾಕಿ ಸೈಡ್ ಗೆ ಹಾಕಬೇಡಿ ಎಂದು ದೀಕ್ಷಿತ್ ಮನವಿ ಮಾಡಿದರು.
ಸಿನಿಮಾ ಬಗ್ಗೆ ನೋಡೊದಾದ್ರೆ
‘ಕೆಟಿಎಂ’ ಒಂದು ಯುವ ಮನಸ್ಸುಗಳ ಸುತ್ತ ಸಾಗುವ ಸಿನಿಮಾ. ಆರಂಭದಲ್ಲಿ ಎಲ್ಲಾ ಸಿನಿಮಾಗಳಂತೆ ಪ್ರೀತಿ, ಪ್ರೇಮ, ಸ್ನೇಹ ಎಂದೇ ಆರಂಭವಾಗುವ ಸಿನಿಮಾ, ನೋಡ ನೋಡುತ್ತಿದ್ದಂತೆ ಮಗ್ಗುಲು ಬದಲಿಸಿ, ಹೊಸ ಪಥ “ಸಂಚಲನ’ ಮಾಡುತ್ತದೆ. ಅದೇ ಕಾರಣದಿಂದ “ಕೆಟಿಎಂ’ ರೆಗ್ಯುಲರ್ ಲವ್ ಸ್ಟೋರಿಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಇಲ್ಲೂ ನಾಯಕ ಒಂದು ಹಂತಕ್ಕೆ ದೇವದಾಸನಾಗುತ್ತಾನೆ. ಆದರೆ, ನಿರ್ದೇಶಕರು ಅದನ್ನೇ ಮುಂದುವರೆಸದೇ, ಕಥೆಯಲ್ಲೊಂದು ಟ್ವಿಸ್ಟ್ ನೀಡಿ, ಮತ್ತೆ ಲವಲವಿಕೆಯಿಂದ ಸಾಗುವಂತೆ ಮಾಡಿದ್ದಾರೆ.
ತಾನು ಏನು ಹೇಳುತ್ತಿದ್ದೇನೆ ಮತ್ತು ಅದನ್ನು ಹೇಗೆ ಹೇಳಬೇಕು ಎಂಬ ಸ್ಪಷ್ಟ ಕಲ್ಪನೆ ನಿರ್ದೇಶಕರಿಗಿದ್ದ ಕಾರಣದಿಂದಲೇ “ಕೆಟಿಎಂ’ ಹಾದಿ ಸುಗಮ. ಚಿತ್ರದಲ್ಲಿ ಪ್ರೇಮಿಗಳಿಗೆ, ಸ್ನೇಹಿತರಿಗೆ ಹಾಗೂ ಪಾಲಕರಿಗೆ ಒಂದು ಸಣ್ಣ ಸಂದೇಶವನ್ನು ಕೂಡಾ ನೀಡಲಾಗಿದೆ.