No menu items!
16.3 C
Munich
Saturday, July 11, 2026

ಹೊಟ್ಟೆಗೆ ಅನ್ನ ತಿಂದವರು ಇಂಥದ್ದನ್ನು ಮಾಡುವುದಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

Must read

ಬೆಳಗಾವಿ: ದೇಶದ್ರೋಹಿಗಳನ್ನು ಅರಗಿಸಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೂವರ ಬಂಧನ ಆಗಿದೆ. ನಾನು ನನ್ನ ಪಿಆರ್ ಕಡೆಯಿಂದ ಮಾಹಿತಿ ಪಡೆದಿದ್ದೇನೆ. ಏನು ಹೇಳಿಕೆ ಕೊಡಬೇಕು ಎಂಬುದರ ಬಗ್ಗೆ ನಾನು ಹೋಮ್ ಮಿನಿಸ್ಟರ್ ಬಳಿ ಮಾತನಾಡುತ್ತೇನೆ ಎಂದರು.
ಒಂದಂತು ನಿಜ ಯಾರೇ ಆಗಿರಲಿ ನಮ್ಮ ದೇಶ ವಿರುದ್ಧವಾಗಿ ಹೇಳಿದರೆ ಅವರಿಗೆ ಕಠಿಣವಾಗಿ ಕ್ರಮ ಆಗಲೇ ಬೇಕು. ನಾನು ಅದಕ್ಕೆ ಸಹಮತವನ್ನು ವ್ಯಕ್ತಪಡಿಸುತ್ತೇವೆ‌. ಏಕೆಂದರೆ ದೇಶದ್ರೋಹಿಗಳನ್ನು ಅರಗಿಸಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಅನೇಕ ಬಲಿದಾನ ನೀಡಿದ ಪಕ್ಷ ನಮ್ಮದು. ಪಕ್ಷದ ಚೌಕಟ್ಟಿನಲ್ಲಿ ನಾವೆಲ್ಲರೂ ಬದ್ಧರಿದ್ದೇವೆ. ಹೊಟ್ಟೆಗೆ ಅನ್ನ ತಿಂದವರು ಇಂಥದ್ದನ್ನು ಮಾಡುವುದಿಲ್ಲ ಎಂದು ಸಚಿವೆ ಪುಣರುಚ್ಚರಿಸಿದ್ದಾರೆ

- Advertisement -spot_img

More articles

- Advertisement -spot_img

Latest article