ಟ್ರೇಡಿಂಗ್ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಪಡೆದು ವಂಚನೆ: ಆರೋಪಿ ಅರೆಸ್ಟ್

Date:

ಬೆಂಗಳೂರು: ಟ್ರೇಡಿಂಗ್ ಹೆಸರಿನಲ್ಲಿ ಅಮಾಯಕರಿಗೆ ಬಲೆ ಬೀಸಿ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚಕ ಕಿಶನ್ ಅಲಿಯಾಸ್ ಮಾಕಳಿ ಕಿಶನ್ ಬಂಧಿತ ಆರೋಪಿ. ಈ ಆರೋಪಿ ಟ್ರೇಡಿಂಗ್ ಹೆಸರಿನಲ್ಲಿ ಅಮಾಯಕರಿಗೆ ಬಲೆ ಬೀಸಿ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ. ನೂರಾರು ಜನ ಇತನನ್ನು ನಂಬಿ ಹಣ ಕಳೆದುಕೊಂಡಿದ್ದಾರೆ.
ವಂಚಕ ಕಿಶನ್ ಕಂತೆ ಕಂತೆ ಹಣದ ವಿಡಿಯೋ ಕಳಿಸಿ ನೀವು ಮಾಡಿದ ಹೂಡಿಕೆ ಹಣಕ್ಕೆ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಜನರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಬಳಿಕ ಅವರಿಂದ ಲಕ್ಷ ಲಕ್ಷ ಹಣ ಪಡೆದು ಮೋಸ ಮಾಡುತ್ತಿದ್ದ. ಸದ್ಯ ಗುಣನಿಧಿ ಎಂಬುವರ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 15.15 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ಗುಣನಿಧಿಯವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಬೆಂಗಳೂರು: ದುಬೈನಲ್ಲಿ...

ಬೆಂಗಳೂರುನಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ

ಬೆಂಗಳೂರುದಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ ಬೆಂಗಳೂರು: ನಗರದಲ್ಲಿ ಇಂದು...

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌ ಬೆಂಗಳೂರು: ಇಸ್ರೇಲ್–ಇರಾನ್ ನಡುವಿನ...

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್ ನಡೆಯಲಿದೆ. ಇದರ...