No menu items!
12.3 C
Munich
Thursday, April 30, 2026

ಮೆಟ್ರೊ ಸಿಬ್ಬಂದಿಯಿಂದ ಏನಿದು ಅಸಭ್ಯ ವರ್ತನೆ !

Must read

ಬೆಂಗಳೂರು: ಜಾಲಹಳ್ಳಿ ಮೆಟ್ರೋ ಪ್ಲ್ಯಾಟ್ಫಾರ್ಮ್ʼನಲ್ಲಿ ಮಹಿಳೆ ಮುಂದೆ ತನ್ನ ಖಾಸಗಿ ಅಂಗ ಸ್ಪರ್ಶಿಸಿಕೊಂಡು ನಮ್ಮ ಮೆಟ್ರೋ ಸಿಬ್ಬಂದಿಯಿಂದಲೇ ಅಸಭ್ಯ ವರ್ತನೆ ತೋರಿರುವಂತಹ ಘಟನೆ ಜರುಗಿದೆ.
ಈ ಹಿನ್ನೆಲೆ ಮಹಿಳೆ ಮೇಲಧಿಕಾರಿಗಳಿಗೆ ದೂರು ನೀಡಿದ್ದು, ಆದರೆ ಮೆಟ್ರೋ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಜಾಲಹಳ್ಳಿ ಮೆಟ್ರೋ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಮೆಟ್ರೋ ಸಿಬ್ಬಂದಿ ಓರ್ವ ಪ್ಲಾಟ್‌ಫಾರಂನ ಎದುರು ಭಾಗದಲ್ಲಿ ತನ್ನ ಖಾಸಗಿ ಅಂಗವನ್ನು ಸ್ಪರ್ಶಿಸಿಕೊಂಡು ದುರ್ವರ್ತನೆ ತೋರಿದ್ದಾನೆ. ಕೆಲವು ಸನ್ನೆಗಳನ್ನು ಮಾಡುತ್ತ ನಿರಂತರವಾಗಿ ನನ್ನನ್ನು ದಿಟ್ಟಿಸಿ ನೋಡುತ್ತಿರುವಂತಹ ಅನುಭವ ನನಗೆ ಇಂದು ಮಧ್ಯಾಹ್ನ 2:30 ರ ಸುಮಾರಿಗೆ ಉಂಟಾಗಿದೆ. ಹಗಲು ಹೊತ್ತಿನಲ್ಲಿಯೇ ಇಂತಹ ಘಟನೆ ತುಂಬಾ ಕೆಟ್ಟದಾಗಿತ್ತು.
ನಾನು ಆತನನ್ನು ಪ್ರಶ್ನೆ ಮಾಡಿದೆ. ಆದರೆ ಆತ ಕೆಲವು ಸನ್ನೆಗಳನ್ನು ಮಾಡುವ ಮೂಲಕ ನನ್ನನ್ನು ದಿಟ್ಟಿಸಿ ನೋಡುತ್ತಲೇ ಇದ್ದ. ಹಾಗಾಗಿ ನಾನು ವಿಡಿಯೋ ಮಾಡಲು ಆರಂಭಿಸಿದ ಬಳಿಕ ಅವನು ಅಲ್ಲಿಂದ ಹೊರಟು ಹೋದ ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article