Home ಎಲ್ಲೆಲ್ಲಿ ಏನೇನು.? ರಾಜ್ಯಮಟ್ಟದಲ್ಲಿ ಒಂದಾದ್ರೂ ಕುಟುಂಬದಲ್ಲಿ ಒಂದಾಗದ ರೆಡ್ಡಿ ಸಹೋದರರು!

ರಾಜ್ಯಮಟ್ಟದಲ್ಲಿ ಒಂದಾದ್ರೂ ಕುಟುಂಬದಲ್ಲಿ ಒಂದಾಗದ ರೆಡ್ಡಿ ಸಹೋದರರು!

0
ರಾಜ್ಯಮಟ್ಟದಲ್ಲಿ ಒಂದಾದ್ರೂ ಕುಟುಂಬದಲ್ಲಿ ಒಂದಾಗದ ರೆಡ್ಡಿ ಸಹೋದರರು!

ಬಳ್ಳಾರಿ:- ರಾಜ್ಯಮಟ್ಟದಲ್ಲಿ ಒಂದಾದ್ರೂ ಕುಟುಂಬದಲ್ಲಿ ಮಾತ್ರ ರೆಡ್ಡಿ ಸಹೋದರರು ಒಂದಾಗಿಲ್ಲ. ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ರು ಸಹೋದರ ಸೋಮಶೇಖರ್ ರೆಡ್ಡಿ ಮುನಿಸು ಮಾತ್ರ ಕಡಿಮೆಯಾಗಿಲ್ಲ. ಹೌದು, ಬೆಂಗಳೂರಿನಲ್ಲಿ ಜನಾರ್ದನ ರೆಡ್ಡಿ ಪಕ್ಷ ವಿಲೀನ ಮಾಡಿದ್ದಾಯ್ತು, ಹೀಗಾಗಿ ಸ್ಥಳೀಯ ನಾಯಕರು ಒಂದಾಗಬೇಕೆಂದು ಕೆಅರ್ಪಿಪಿ ಬಿಜೆಪಿ ಜಂಟಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಗೈರಾಗೋ ಮೂಲಕ ಸೋಮಶೇಖರ್ ರೆಡ್ಡಿ ಅಸಮಾಧಾನ ಹೊರ ಹಾಕಿದ್ದಾರೆ.
ಬಿಜೆಪಿಯಿಂದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಸೋಮಶೇಖರ್ ರೆಡ್ಡಿ ಸ್ಪರ್ಧೆ ಮಾಡಿದ್ರು, ಕೆಅರ್ಪಿಪಿ ಪಕ್ಷದಿಂದ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಸ್ಪರ್ಧೆ ಮಾಡಿದ್ರು, ಇಬ್ಬರ ಜಗಳದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿದಿತ್ತು, ತಮ್ಮ ಸೋಲಿಗೆ ಜನಾರ್ದನ ರೆಡ್ಡಿ ಕಾರಣ ಎನ್ನುವದು ಸೋಮಶೇಖರ್ ರೆಡ್ಡಿ ವಾದವಾಗಿದೆ.
ಬಿಜೆಪಿ ಪಕ್ಷಕ್ಕೆ ಜನಾರ್ದನ ರೆಡ್ಡಿ ಸೇರಿದ ಹಿನ್ನೆಲೆ, ಅರುಣಾ ಲಕ್ಷ್ಮಿ ಅವರು ಬಳ್ಳಾರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದರು, ಆದರೆ ಕಾರ್ಯಕ್ರಮಕ್ಕೆ ಬಾರದೆ ಸೋಮಶೇಖರ್ ರೆಡ್ಡಿ ಅಸಮಾಧಾನ ಹೊರ ಹಾಕಿದ್ದಾರೆ. ಮನೆಯೊಂದು ಮೂರು ಬಾಗಿಲಾಗಿರೋ ರೆಡ್ಡಿ ಸಹೋದರರ ಕುಟುಂಬ ಇದ್ದು, ರೆಡ್ಡಿ ಸಹೋದರರ ಪರಸ್ಪರ ಮುನಿಸು ಶ್ರೀರಾಮುಲು ಇಕ್ಕಟ್ಟಿನಲ್ಲಿ ಸಿಲುಕಿಸುವಂತೆ ಮಾಡಿದೆ.