ಪತ್ನಿ ಸಮೇತ ಆಗಮಿಸಿ ಓಟ್ ಮಾಡಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

0
261

ಎಐಸಿಸಿ ಅಧ್ಯಕ್ಷರಾದ ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಅವರ ಶ್ರೀಮತಿಯವರಾದ ರಾಧಾಬಾಯಿ ಖರ್ಗೆ ಅವರು ಕಲಬುರಗಿಯಲ್ಲಿ ಓಟ್ ಮಾಡಿದ್ರು. ನಗರದ ಬ್ರಹ್ಮಪುರ ಬಡಾವಣೆಯ ಬಸವನಗರದ ಕನ್ನಡ ಹಿರಿಯ ಪ್ರಾಥಮಿಕ‌ ಶಾಲೆಯ ಬೂತ್ ನಂಬರ್ 120 ರಲ್ಲಿ ತಮ್ಮ ಹಕ್ಕು ಚಲಾಯಿಸಿದ್ರು..ನಂತರ ಮಾತನಾಡಿದ ಖರ್ಗೆ ನನಗೆ ಮತ ಚಲಾಯಿಸುವ ಹಕ್ಕು ಬಂದಾಗಿನಿಂದ ಬಸವನಗರದಲ್ಲೇ ಓಟ್ ಮಾಡಿದ್ದೇನೆ ಅಂದ್ರು.ಎಷ್ಟೋ ಜನ ಸ್ಥಳ ಬದಲಾವಣೆ ಮಾಡಿಕೊಂಡಿದ್ದಾರೆ ಆದ್ರೆ ನಾನು ಮಾತ್ರ ಚೇಂಜ್ ಮಾಡ್ಕೊಂಡಿಲ್ಲ ಅಂದ್ರು..