ಬೆಂಗಳೂರು:- ನಗರದ ಯಲಹಂಕ ಫ್ಲೈಓವರ್ ಮೇಲೆ ತೊಡೆ ಮೇಲೆ ಯುವತಿ ಕೂರಿಸಿಕೊಂಡು ಮುದ್ದಾಡಿದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಯುವತಿಯನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿತ್ತು. ಬೈಕ್ ನಂಬರ್ ಪ್ಲೇಟ್ ಆಧರಿಸಿ ಯುವಕನನ್ನು ಹೆಬ್ಬಾಳ ಸಂಚಾರಿ ಪೊಲೀಸರು ದಸ್ತಗಿರಿ ನಡೆಸಿದ್ದಾರೆ.
ಹೀಗೆ ಡೆಡ್ಲಿ ರೈಡ್ ಮೂಲಕ ರೊಮ್ಯಾನ್ಸ್ ಮಾಡಿದ ಯುವಕ ಸಿಲಂಬರಸನ್ (21) ನನ್ನು ಬಂಧಿಸಿರುವ ಪೊಲೀಸರು, ಆತನ ಬೈಕ್ ಅನ್ನೂ ಜಪ್ತಿ ಮಾಡಿದ್ದಾರೆ. ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಜಾಲತಾಣದಾದ್ಯಂತ ಕ್ರಮಕ್ಕೆ ಒತ್ತಾಯ ಕೇಳಿ ಬಂದಿತ್ತು. ಇದೀಗ ಬೈಕ್ ಸವಾರನ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವಂತೆ ಹೆಬ್ಬಾಳ ಸಂಚಾರಿ ಪೊಲೀಸರು ಆರ್‌ಟಿಓಗೆ ಮನವಿ ಮಾಡಿದ್ದಾರೆ.