ಬೇಗ ತೂಕ ಇಳಿಸಬೇಕೆ ? ಹೀಗೆ ಮಾಡಿ !

Date:

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸೋದು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಕೆಲವರು ತೆಳ್ಳಗಾಗಲು ಜಿಮ್ ಮೊರೆ ಹೋದರೆ ಒಂದಿಷ್ಟು ಮಂದಿ ಊಟವನ್ನೇ ಕಡಿಮೆ ಮಾಡುತ್ತಾರೆ. ಆದರೆ ಅನೇಕ ಪ್ರಯತ್ನಗಳ ನಡುವೆಯೂ ತೂಕ ಮಾತ್ರ ಕಡಿಮೆಯಾಗಲ್ಲ. ಅಚ್ಚರಿ ಎಂಬಂತೆ ಕೆಲವರು ಬೇಗವೇ ತೂಕ ಇಳಿಸಿಕೊಳ್ಳುವದನ್ನು ನೋಡಿರುತ್ತೇವೆ. ಅದು ಹೇಗೆ ಸಾಧ್ಯ ಎಂದು ಎಲ್ಲರಲ್ಲಿಯೂ ಕಾಡುತ್ತಿರುತ್ತದೆ.

ಅನಾರೋಗ್ಯಕರ ಆಹಾರದಿಂದಾಗಿ, ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಸಾಮಾನ್ಯವಾಗಿದೆ. ಗ್ಯಾಸ್ಟ್ರಿಕ್ ಅನೇಕ ಹೊಸ ಅನಾರೋಗ್ಯ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿರುವವರು, ಖಾಲಿ ಹೊಟ್ಟೆಯಲ್ಲಿ ಅಜ್ವೈನದ ನೀರು ಸೇವನೆ ಮಾಡಬೇಕು. ಕೆಲವೇ ದಿನಗಳಲ್ಲಿ ಪರಿಣಾಮ ಕಾಣಿಸುತ್ತದೆ.

ಅಜ್ವೈನ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಜ್ವೈನ ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಮತ್ತು ಮಲಬದ್ಧತೆಯ ಸಮಸ್ಯೆ ನಿವಾರಿಸುತ್ತದೆ. ಅಜ್ವೈನ್ ಆಯುರ್ವೇದ ಗುಣಗಳಿಂದ ತುಂಬಿದೆ. ಇದರ ನೀರು, ತೂಕ ನಿಯಂತ್ರಣಕ್ಕೆ ಸಹಕಾರಿ. ಅಜ್ವೈನ್ ಪ್ರೋಟೀನ್, ಕೊಬ್ಬು, ಖನಿಜ, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ ಗಳಿಂದ ಕೂಡಿದೆ. ಕ್ಯಾಲ್ಸಿಯಂ, ರಿಬೋಫ್ಲಾವಿನ್, ಫಾಸ್ಪರಸ್, ಕಬ್ಬಿಣ ಮತ್ತು ನಿಯಾಸಿನ್ ಕಂಡುಬರುತ್ತದೆ.

ಖಾಲಿ ಹೊಟ್ಟೆಯಲ್ಲಿ ಅಜ್ವೈನದ ನೀರು ಸೇವನೆ ಮಾಡುವುದ್ರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಬೆಳಿಗ್ಗೆ ಅಜ್ವೈನದ ನೀರು ಸೇವನೆ ಮಾಡುವುದ್ರಿಂದ ಬೇಗ ತೂಕ ಇಳಿಸಬಹುದು. ಇನ್ನೂ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಅನುಭವಿಸುವ ಮಹಿಳೆಯರು ಅಜ್ವೈನದ ನೀರು ಕುಡಿಯಬಹುದು. ಮುಟ್ಟಿನ ನೋವು ನಿವಾರಿಸುವ ಶಕ್ತಿ ಅಜ್ವೈನದ ನೀರಿಗಿದೆ.

ಇಂದಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಪ್ರತಿಯೊಬ್ಬರನ್ನು ಕಾಡಲು ಶುರುಮಾಡಿದೆ. ಇದಕ್ಕೆಲ್ಲಾ ಜಡ ಜೀವನಶೈಲಿ ಹಾಗೂ ನಾವು ಅನುಸರಿಸುತ್ತಿ ರುವ ಅನಾರೋಗ್ಯಕರ ಆಹಾರ ಪದ್ಧತಿ ಎಂದು ನೇರ ಕಾರಣ ಎಂದು ಹೇಳಬಹುದು. ಆದರೆ ಕೆಲವೊಮ್ಮೆ ಮನೆಯಲ್ಲೇ ಮಾಡಿದ, ಆಹಾರ ಪದಾರ್ಥ ಗಳನ್ನು ಸೇವಿಸಿದರೂ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಆಗಿಬಿಡುತ್ತದೆ.

ಉದಾಹರಣೆಗೆ ಹೇಳುವುದಾದರೆ, ಕೆಲವರಿಗೆ ಆಲೂಗಡ್ಡೆ ಹಾಕಿ ಮಾಡಿರುವ, ಸಾಂಬರ್ ಸೇವಿಸಿದರೆ ಸಾಕು, ಆಮೇಲೆ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ, ಆಮೇಲೆ ಒಂದು ತುತ್ತು, ಊಟ ಮಾಡಲೂ ಆಗದೇ ಸಮಸ್ಯೆ ಎದುರಿಸಬೇಕಾಗುತ್ತದೆ. ಇನ್ನು ಕೆಲವರಿಗೆ, ಅನ್ನದ ಜೊತೆಗೆ ಬೇಳೆಸಾರು, ಸೇವಿಸಿದರೂ ಸಾಕು ಗ್ಯಾಸ್ಟ್ರಿಕ್ ಆಗಿಬಿಡುತ್ತದೆ! ಹೀಗಾಗಿ ಈ ಸಮಯದಲ್ಲಿ ಯಾವುದನ್ನು ತಿನ್ನಬೇಕು ಯಾವುದನ್ನು ಬಿಡಬೇಕು ಎಂಬುದೇ ಅರ್ಥವಾಗುವುದಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ, ಮೆಡಿಕಲ್‌ನಿಂದ ಮಾತ್ರೆ ತಂದು ನುಂಗುವುದು, ನೀರಿಗೆ ಮಿಕ್ಸ್ ಮಾಡುವ ಪೌಡರ್ ತಂದು ಕುಡಿಯುವ ಅಭ್ಯಾಸ ಮಾಡಿಕೊಳ್ಳ ಬೇಡಿ. ವೈದ್ಯರು ಕೂಡ ಇದನ್ನೇ ಸಲಹೆ ನೀಡುತ್ತಾರೆ. ಇದಕ್ಕಾಗಿ ನಮ್ಮ ದೈನಂದಿನ ಜೀವನಶೈಲಿಯಲ್ಲಿ ನಾವೇ ಕೆಲವೊಂ ದು ಬದಲಾವಣೆಗಳನ್ನು ತಂದುಕೊಂಡು, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು. ಮಧುಮೇಹ, ರಕ್ತದೊತ್ತಡ, ಕಣ್ಣಿನ ಸಮಸ್ಯೆ, ಕಿಡ್ನಿ ಸಮಸ್ಯೆ ಇದ್ದವರು ಎಲೆಕೋಸನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಆದರೆ ಪದೇ ಪದೇ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ, ಅಸಿಡಿಟಿ ಸಮಸ್ಯೆ, ಹೊಟ್ಟೆಯ ಸ್ನಾಯು ಸೆಳೆತ ಇತ್ಯಾದಿ ಸಮಸ್ಯೆಗಳು ಇದ್ದವರು ಆದಷ್ಟು ಈ ತರಕಾರಿಯಿಂದ ದೂರವಿದ್ದರೆ ಒಳ್ಳೆಯದು. ಯಾಕೆಂದ್ರೆ ಎಲೆಕೋಸು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಧಾನ ಗೊಳಿಸುವುದರಿಂದ, ಕೆಲವರಿಗೆ ಬಹಳ ಬೇಗನೇ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆ, ಕಂಡು ಬರುವ ಸಾಧ್ಯತೆ ಇರುತ್ತದೆ.​

ಸಕ್ಕರೆಕಾಯಿಲೆ, ಹೃದಯದ ಸಮಸ್ಯೆ, ಮೂಳೆಗಳಿಗೆ ಸಂಬಂಧ ಪಟ್ಟ ಸಮಸ್ಯೆ ಇದ್ದವರಿಗೆ ಇದ್ದವರಿಗೆ, ಮೆದು ಳಿನ ಆರೋಗ್ಯಕ್ಕೆ, ಆಲೂಗಡ್ಡೆ ಬಹಳ ಒಳ್ಳೆಯ ತರಕಾರಿ ಎಂದು ಹೇಳಲಾಗುತ್ತದೆ. ಪ್ರಮುಖವಾಗಿ ಈ ತರಕಾರಿ ಯಲ್ಲಿ ನಾರಿನಾಂಶ, ಪೊಟ್ಯಾ ಷಿಯಂ, ಮೆಗ್ನೀಸಿಯಮ್, ವಿವಿಧ ಬಗೆಯ ವಿಟಮಿನ್ಸ್ ಅಂಶಗಳು, ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದ ರಿಂದ, ಇಂತಹ ದೀರ್ಘಕಾಲದ ಕಾಯಿಲೆಗಳನ್ನು, ನಮ್ಮಿಂದ ದೂರವಿರಿಸಲು ನೆರವಾಗುತ್ತದೆ. ಆದರೆ ಪದೇ ಪದೇ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲು ತ್ತಿರುವವರು, ಆದಷ್ಟು ಈ ತರಕಾರಿಯಿಂದ ದೂರವಿರ ಬೇಕು. ಯಾಕೆಂದ್ರೆ ಈ ತರಕಾರಿಯಲ್ಲಿ, ಪಿಷ್ಠದ ಪ್ರಮಾಣ ಯಥೇ ಚ್ಛವಾಗಿ ಕಂಡು ಬರುವುದರಿಂದ, ಇವು ಜೀರ್ಣ ಕ್ರಿಯೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ನೀರಿನಾಂಶವನ್ನು ಒಳ ಗೊಂಡಿರುವ ಸೌತೆಕಾಯಿ, ದೇಹಕ್ಕೆ ತಂಪನ್ನು ಒದಗಿಸಿ, ನಿರ್ಜಲೀಕರಣ ಸಮಸ್ಯೆಯಿಂದ ದೂರ ಮಾಡುತ್ತದೆ.
ಹೀಗಾಗಿ ಮಧ್ಯಾಹ್ನದ ಸಮಯದಲ್ಲಿ ಊಟ ಆದ ಮೇಲೆ, ಒಂದೆರಡು ಸಣ್ಣ ಪೀಸ್ ಸೌತೆಕಾಯಿ ತಿನ್ನುವುದು ಅಥವಾ ಊಟಕ್ಕೆ ಮುಂಚೆ ಖಾಲಿ ಹೊಟ್ಟೆಯಲ್ಲಿ ಸೌತೆ ಕಾಯಿ ಜ್ಯೂಸ್ ಸೇವನೆ ಮಾಡುವುದು, ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಆದರೆ ನಿಮಗೆ ಗೊತ್ತಿರಲಿ, ರಾತ್ರಿ ಊಟದ ಬಳಿಕ ಸೌತೆ ಕಾಯಿ ಸೇವನೆ ಮಾಡಿದರೆ, ಜೀರ್ಣಕ್ರಿಯೆ ಪ್ರಕ್ರಿಯೆ ನಿಧಾನಗೊಂಡು, ಗ್ಯಾಸ್ಟ್ರಿಕ್ ಸಮಸ್ಯೆ ಕಂಡುಬರುವ ಸಾಧ್ಯತೆ ಕಂಡು ಬರುವ ಸಾಧ್ಯತೆ ಇರುತ್ತದೆಯಂತೆ!
ಯಾಕೆಂದ್ರೆ ಮೊದಲೇ ಹೇಳಿದ ಹಾಗೆ ಈ ತರಕಾರಿಯಲ್ಲಿ ಕಂಡು ಬರುವ ನೀರಿನಾಂಶ ಹಾಗೂ ನಾರಿನಾಂಶವು ಜೀರ್ಣಕ್ರಿಯೆನ್ನು ನಿಧಾನವಾಗಿಸಿ, ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡುತ್ತದೆಯಂತೆ.​

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...