ಮೃದುವಾದ ಮತ್ತು ಹೊಳೆಯುವ ಕೂದಲು ಬೇಕಾ?

Date:

ಕೂದಲು ಉದುರುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ ಮಾಲಿನ್ಯ, tension ಮತ್ತು ಕೆಲಸದ ಹೊರೆಯಿಂದಾಗಿ ಕೂದಲು ಉದುರುವಿಕೆಯ ಸಮಸ್ಯೆಯು ಎಲ್ಲಾ ಪುರುಷರು ಮತ್ತು ಮಹಿಳೆಯರನ್ನು ಕಾಡುತ್ತಿದೆ. ಅದಲ್ಲದೆ ಮೃದುವಾದ ಮತ್ತು ಹೊಳೆಯುವ ಕೂದಲು ಬೇಕೆಂಬುದು ಎಲ್ಲರ ಆಸೆಯಾಗಿದೆ. ಇದಕ್ಕೆಲ್ಲಾ ಪರಿಹಾರವಾಗಿ ಮನೆಯಲ್ಲೇ ಸುಲಭವಾಗಿ ಸಿಗೋ ಕೆಲವು ಸಾಮಗ್ರಿಗಳಿಂದ ಸಾಫ್ಟ್ ಕೂದಲು ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕೆ ಸ್ವಲ್ಪ ಸಮಯ ಮೀಸಲಿಡಬೇಕು ಅಷ್ಟೇ. ಆ ಟಿಪ್ಸ್ ಇಲ್ಲಿದೆ ನೋಡಿ

ಗುಲಾಬಿ ದಳ- ಕೊಬ್ಬರಿ ಎಣ್ಣೆ
ಗುಲಾಬಿಯನ್ನ ಅಲಂಕಾರಕ್ಕೆ, ಮುಡಿದುಕೊಳ್ಳೋಕೆ ಬಳಸೋ ಜೊತೆಗೆ ಅದರಿಂದ ನಿಮ್ಮ ಕೂದಲ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಇದಕ್ಕೆ ನೀವು ಕಷ್ಟನೂ ಪಡಬೇಕಿಲ್ಲ. ತಲೆಗೆ ಎಣ್ಣೆ ಹಚ್ಚುವಾಗೆಲ್ಲಾ ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ಕೊಬ್ಬರಿ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ(ಸ್ವಲ್ಪ ಬಿಸಿಯಾದ್ರೆ ಸಾಕು, ಹೊಗೆ ಬರುವಂತೆ ಕಾಯಿಸಬಾರದು) ಅದಕ್ಕೆ ಗುಲಾಬಿ ದಳಗಳನ್ನ ಹಾಕಿ. ಹೀಗೆ ಮಾಡಿದಾಗ ನೊರೆ ಬರುತ್ತದೆ. ಎಣ್ಣೆ ತಣ್ಣಗಾದ ನಂತರ ಗುಲಾಬಿ ದಳಗಳನ್ನ ಕಿವುಚಿ ತೆಗೆಯಿರಿ. ನಂತರ ಎಣ್ಣೆಯನ್ನ ತಲೆಗೆ ಸಂಪೂರ್ಣವಾಗಿ ಹಚ್ಚಿ ಮಸಾಜ್ ಮಾಡಿ. 3 ಗಂಟೆಗಳ ನಂತರ ಸ್ನಾನ ಮಾಡಬಹುದು. ಅಥವಾ ರಾತ್ರಿ ಎಣ್ಣೆ ಹಚ್ಚಿಕೊಂಡು ಬೆಳಿಗ್ಗೆ ತಲೆಗೆ ಸ್ನಾನ ಮಾಡಬಹುದು.
ಮೆಹೆಂದಿ
ಬಿಳಿ ಕೂದಲು ಬಂದಿದ್ರೆ ಮಾತ್ರ ತಲೆಗೆ ಮೆಹೆಂದಿ ಹಚ್ಚಬೇಕು ಅಂತೇನಿಲ್ಲ. ರಾಜ ಮಹಾರಾಜರ ಕಾಲದಿಂದ್ಲೂ ಮೆಹೆಂದಿ ಕೂದಲ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ನಿಮ್ಮ ಕೂದಲಿಗೆ ನ್ಯಾಚುರಲ್ ಕಂಡೀಷನರ್. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ ಉದ್ದ ಕೂದಲು ಪಡೆಯಲು ಸಹಾಯ ಮಾಡುತ್ತದೆ. ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದು ಕುದಿಯುವಾಗ ಟೀ ಪುಡಿ ಮತ್ತು 5-6 ಲವಂಗ ಹಾಕಿ ಡಿಕಾಕ್ಷನ್ ತಯಾರಿಸಿಕೊಳ್ಳಿ. ತಣ್ಣಗಾದ ನಂತರ ಮೆಹೆಂದಿ ಪುಡಿ, ಸ್ವಲ್ಪ ಮೊಸರು/ ನಿಂಬೆಹಣ್ಣು ಹಾಕಿ ಮಿಕ್ಸ್ ಮಾಡಿ 3 ಗಂಟೆ ನೆನೆಯಲು ಬಿಡಿ(ಇಡೀ ರಾತ್ರಿ ಇಟ್ಟು ಬೆಳಿಗ್ಗೆ ಹಚ್ಚಬಹುದು). ನಂತರ ಕೂದಲಿಗೆ ಸಂಪೂರ್ಣವಾಗಿ ಮೆಹೆಂದಿ ಹಚ್ಚಿ 1/2 ಗಂಟೆ ಒಣಗಲು ಬಿಡಿ. ಕೂದಲಿಗೆ ಬಣ್ಣ ಬೇಕಾದರೆ 1 ಗಂಟೆ ಬಿಡಬಹುದು. ಕೂದಲು ಸಾಫ್ಟ್ ಆದ್ರೆ ಸಾಕು ಅಂತಿದ್ರೆ ಅರ್ಧ ಗಂಟೆ ಬಳಿಕ ಸ್ನಾನ ಮಾಡಿ.
ಬಾಳೇಹಣ್ಣು- ಬಾದಾಮಿ ಎಣ್ಣೆ
ಚೆನ್ನಾಗಿ ಕಳಿತ ಬಾಳೇಹಣ್ಣನ್ನು ರುಬ್ಬಿಕೊಂಡು ಅದಕ್ಕೆ 2 ಚಮಚ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಿ ತಲೆಗೆ ಪ್ಯಾಕ್ ಹಾಕಿಕೊಳ್ಳಿ. ಒಂದು ಗಂಟೆಯ ನಂತರ ಸ್ನಾನ ಮಾಡಿ. ಕೂದಲು ತೊಳೆಯುವಾಗ ಬಾಳೆಹಣ್ಣಿನ ಅಂಶ ಸಂಪೂರ್ಣವಾಗಿ ಹೋಗುವಂತೆ ತೊಳೆಯಿರಿ. ಸ್ವಲ್ಪ ಸ್ವಲ್ಪ ಕೂದಲಿನಲ್ಲೇ ಇದ್ದರೆ ಚಿಂತೆ ಬೇಡ, ಕೂದಲು ಒಣಗಿದ ನಂತರ ಅದೆಲ್ಲಾ ಉದುರಿ ಹೋಗುತ್ತದೆ.
ಆಲೋವೆರಾ
ಆಲೋವೆರಾವನ್ನ ಮುಖಕ್ಕೆ, ಕೈ-ಕಾಲಿಗೆ ಹಾಗೇ ತಲೆಗೂದಲಿಗೂ ಬಳಸಬಹುದು. ಆಲೋವೆರಾದ ಸಿಪ್ಪೆ ತೆಗೆದು ಅದರ ತಿರುಳನ್ನ ತೆಗೆದು ರುಬ್ಬಿಕೊಳ್ಳಿ. ನಂತರ ತಲೆಗೆ ಪ್ಯಾಕ್ ಹಾಕಿ ಒಂದು ಗಂಟೆಯ ನಂತರ ಸ್ನಾನ ಮಾಡಿ. ಆಲೋವೆರಾ ಬದಲು ಆಲೋವೆರಾ ಜೆಲ್ ಕೂಡ ಬಳಸಬಹುದು. ಆದ್ರೆ ನೈಸರ್ಗಿಕವಾದ್ದದಾದ್ರೆ ಉತ್ತಮ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಳಗಾವಿ: ಕಾಂಗ್ರೆಸ್ ಕುಟುಂಬದವರನ್ನು...

ಮುಂದಿನ ಆಯವ್ಯಯದಲ್ಲಿ ಯಲ್ಲಾಪುರದಲ್ಲಿ ವಸತಿ ನಿಲಯ ನಿರ್ಮಾಣ: ಸಿದ್ದರಾಮಯ್ಯ ಭರವಸೆ

ಮುಂದಿನ ಆಯವ್ಯಯದಲ್ಲಿ ಯಲ್ಲಾಪುರದಲ್ಲಿ ವಸತಿ ನಿಲಯ ನಿರ್ಮಾಣ: ಸಿದ್ದರಾಮಯ್ಯ ಭರವಸೆ ಬೆಳಗಾವಿ: ಉತ್ತರಕನ್ನಡ...

ಕೇಂದ್ರ ಸರಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು: ಬಿ.ವೈ.ವಿಜಯೇಂದ್ರ

ಕೇಂದ್ರ ಸರಕಾರದ ಜೊತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು: ಬಿ.ವೈ.ವಿಜಯೇಂದ್ರ ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ...

ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ: ಡಿಸಿಎಂ ಡಿ.ಕೆ....