ಸಂಜೆ ಆಗುತ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತಾ!?, ಇವುಗಳಿಂದ ಮುಕ್ತಿ ಹೇಗೆ!?

Date:

 

ಮಳೆಗಾಲ ಆರಂಭವಾಗಿದೆ. ರಾಜ್ಯದೆಲ್ಲೆಡೆ ಭರ್ಜರಿ ಮಳೆ ಆಗುತ್ತಿದೆ. ಈ ಸಮಯದಲ್ಲಿ ಸೊಳ್ಳೆಗಳ ಹಾವಳಿ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.

ಸೊಳ್ಳೆಗಳಿಂದ ಕಚ್ಚಿಸಿಕೊಳ್ಳಬೇಕು ಎಂದು ನಿಮಗೂ ಕೂಡ ಆಸೆ ಇಲ್ಲ. ಆದರೂ ಕೂಡ ಅವುಗಳ ದಾಳಿಗೆ ಬಲಿಯಾಗಲೇಬೇಕು. ಇದು ನಮ್ಮ ನಿಮ್ಮ ಪ್ರತಿದಿನದ ಪಾಡು. ಆದರೆ ಸೊಳ್ಳೆಗಳಿಂದ ಮುಕ್ತಿ ಪಡೆದುಕೊಳ್ಳಲು ನೀವು ಕೆಲವೊಂದು ಟ್ರಿಕ್ಸ್ ಸುಲಭವಾಗಿ ಮಾಡಬಹುದು. ಯಾವುವು ಗೊತ್ತಾ?

ಸೊಳ್ಳೆಗಳು ಮನೆ ಒಳಗೆ ಬರದಂತೆ ಮಾಡಿ:

ಇದು ತುಂಬಾ ಸುಲಭ. ಯಾಕೆಂದರೆ ಸೊಳ್ಳೆಗಳು ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿ ಅಷ್ಟಾಗಿ ಬರುವುದಿಲ್ಲ. ಯಾವಾಗ ಸೂರ್ಯ ಮುಳುಗಲು ಪ್ರಾರಂಭ ಮಾಡುತ್ತಾನೆ ಆಗ ಸೊಳ್ಳೆಗಳ ಆಟ ಶುರುವಾಗುತ್ತದೆ.

ಅಂದರೆ ಸಂಜೆಯ ಸಮಯದಲ್ಲಿ. ನೀವು ಈ ಸಮಯದಲ್ಲಿ ನಿಮ್ಮ ಕಿಟಕಿಗಳನ್ನು ಹಾಗೂ ಬಾಗಿಲುಗಳನ್ನು ಮುಚ್ಚಿದರೆ ಸಾಕು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಿಟಕಿಗಳಿಗೆ ಸಣ್ಣ ಪರದೆಯನ್ನು ಅಳವಡಿಸಿ. ಇದರಿಂದ ನಿಮ್ಮ ಮನೆ ಸಂಪೂರ್ಣವಾಗಿ ಸೊಳ್ಳೆಗಳಿಂದ ರಕ್ಷಣೆ ಯಾಗುತ್ತದೆ.

ಮನೆಯೊಳಗೆ ಸೊಳ್ಳೆಗಳ ಸಂತತಿ ಹೆಚ್ಚಬಾರದು:-

ಸಾಧ್ಯವಾದಷ್ಟು ನಿಮ್ಮ ರೆಫ್ರಿಜರೇಟರ್ ಹಿಂಬದಿ ಮತ್ತು ಎಸಿ ವೆಂಟ್ ಚೆಕ್ ಮಾಡಿ. ಏಕೆಂದರೆ ನಿಂತ ನೀರಲ್ಲಿ ಸೊಳ್ಳೆಗಳು ಮೊಟ್ಟೆ ಇಡುವುದು ಜಾಸ್ತಿ.
ಅಡುಗೆಮನೆಯಲ್ಲಿ ಕೂಡ ಅಲ್ಲಲ್ಲಿ ಚಲ್ಲಿದ ದ್ರವಾಹಾರಗಳನ್ನು ಸ್ವಚ್ಛ ಮಾಡಿ. ಧೂಳು, ಕೊಳೆ ಮತ್ತು ಹಳೆಯ ವಸ್ತುಗಳನ್ನು ಸ್ವಚ್ಛ ಪಡಿಸಿ. ಮನೆಯೊಳಗೆ ಮಾತ್ರವಲ್ಲ ಮನೆ ಹೊರಗೆ ಕೂಡ ಇದೇ ರೀತಿ ಸ್ವಚ್ಛತೆಯನ್ನು ಕಾಪಾಡಿ. ನೀರು ನಿಲ್ಲಲು ಬಿಡಬೇಡಿ

ಸೊಳ್ಳೆ ವಿರೋಧಿ ಗಿಡಗಳನ್ನು ಹಾಕಿ;:

ಮನೆಯೊಳಗೆ ಮತ್ತು ಮನೆ ಹೊರಗೆ ಕೆಲವು ಗಾಢವಾದ ವಾಸನೆ ಬರುವಂತಹ ಗಿಡಗಳನ್ನು ಹಾಕಿ. ಏಕೆಂದರೆ ಇಂತಹ ವಾಸನೆ ಸೊಳ್ಳೆಗಳಿಗೆ ಆಗಿಬರುವುದಿಲ್ಲ.
ಸಾಮಾನ್ಯವಾಗಿ ಇವುಗಳು ಸಣ್ಣ ಗಿಡಗಳು. ಅದರಿಂದ ಮನೆಯೊಳಗೂ ಕೂಡ ನೀವು ಹೂಕುಂಡದಲ್ಲಿ ಹಾಕಿ ಇಟ್ಟುಕೊಳ್ಳಬಹುದು. ಕೇವಲ ಸೊಳ್ಳೆಗಳು ಮಾತ್ರವಲ್ಲದೆ ಇತರ ಕೀಟಗಳು ಇಲಿ ಕೂಡ ದೂರ ಉಳಿಯುತ್ತವೆ. ಉದಾಹರಣೆಗೆ ತುಳಸಿ, ಚಂಡು ಹೂವು ಇತ್ಯಾದಿ.

ಹೆಚ್ಚಿದ ನಿಂಬೆಹಣ್ಣು ಮತ್ತು ಲವಂಗ ಇದಕ್ಕೆ ಪರಿಹಾರ

ಇವೆರಡು ಸಹ ಗಾಢವಾದ ವಾಸನೆ ಹೊಂದಿರುವ ಆಹಾರ ಪದಾರ್ಥಗಳು. ಸೊಳ್ಳೆಗಳಿಗೆ ಇವುಗಳ ವಾಸನೆ ಸಹ ಆಗುವುದಿಲ್ಲ.
ಹೀಗಾಗಿ ನೀವು ಒಂದು ನಿಂಬೆ ಹಣ್ಣು ತೆಗೆದುಕೊಂಡು ಅದನ್ನು ಎರಡು ಹೋಳು ಮಾಡಿ ಅದಕ್ಕೆ ಮತ್ತೆ ಭಾಗದಲ್ಲಿ ಲವಂಗ ಚುಚ್ಚಿ ಮನೆಯಲ್ಲಿ ಎಲ್ಲಾದರೂ ಇಡಿ. ಇದೊಂದು ನೈಸರ್ಗಿಕ ಮತ್ತು ಯಾವುದೇ ಅಪಾಯ ಇಲ್ಲದೆ ಸೊಳ್ಳೆಗಳನ್ನು ಓಡಿಸುವ ವಿಧಾನ.

ಬೆಳ್ಳುಳ್ಳಿ ಸ್ಪ್ರೇ ಬಳಸಿ:-

ನೀವು ರಾಸಾಯನಿಕ ತುಂಬಿದ ಸ್ಪ್ರೇ ಬಳಸುವ ಬದಲು ಈ ರೀತಿ ನೈಸರ್ಗಿಕ ವಿಧಾನದಲ್ಲಿ ತಯಾರಾದ ಸ್ಪ್ರೇ ಬಳಸುವುದರಿಂದ ಸೊಳ್ಳೆಗಳು ದೂರ ಹೋಗುತ್ತವೆ ಮತ್ತು ನೀವು ಕೂಡ ಆರೋಗ್ಯದಿಂದ ಇರುತ್ತೀರಿ. ಬೆಳ್ಳುಳ್ಳಿ ತುಂಬಾ ಘಾಟು. ಇದರ ವಾಸನೆ ಸೊಳ್ಳೆಗಳನ್ನು ತಕ್ಷಣವೇ ಸಾಯಿಸುತ್ತದೆ.

ಸೋಪಿನ ನೀರು ಬಳಕೆ ಮಾಡಿ:-

ನಿಮ್ಮ ಮನೆಯಲ್ಲಿ ಒಂದು ಅಗಲವಾದ ಪಾತ್ರೆ ಅಥವಾ ಟಬ್ ಇದ್ದರೆ ಅದರಲ್ಲಿ ಸೋಪು ಅಥವಾ ಡಿಟರ್ಜೆಂಟ್ ಹಾಕಿ ಗುಳ್ಳೆಗಳು ಬರುವಂತೆ ಮಾಡಿ.
ಇದು ಸಹ ಒಂದು ರೀತಿಯ ಸಹಿಸಲಸಾಧ್ಯವಾದ ವಾಸನೆಯನ್ನು ಸೊಳ್ಳೆಗಳಿಗೆ ಬೀರುತ್ತದೆ. ಕೆಲ ವೊಮ್ಮೆ ಸೊಳ್ಳೆಗಳು ಈ ನೀರಿನ ಮೇಲೆ ಬಂದು ಕುಳಿತು ಸಾವನ್ನಪ್ಪುತ್ತವೆ. ಸೊಳ್ಳೆಗಳನ್ನು ಕಂಟ್ರೋಲ್ ಮಾಡಲು ಇದೊಂದು ಸುಲಭ ವಿಧಾನ.

Share post:

Subscribe

spot_imgspot_img

Popular

More like this
Related

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...