ಲ್ಯಾಪ್‌ಟಾಪ್‌ನ್ನು ತೊಡೆ ಮೇಲೆ ಇಟ್ಟುಕೊಂಡು ಕೆಲಸ ಮಾಡುತ್ತೀರಾ!?

Date:

ಇತ್ತೀಚಿನ ದಿನದಲ್ಲಿ ಸಾಕಷ್ಟು ಜನರು ಮನೆಯಿಂದಲೇ ಕಚೇರಿಯ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ಮನೆಯಲ್ಲಿಯೇ ಇಂಟರ್‍ನೆಟ್ ಮತ್ತು ಕಂಪ್ಯೂಟರ್ ಬಳಕೆಯು ಹೆಚ್ಚುತ್ತಿದೆ. ಅದರಲ್ಲೂ ಜನರು ಟೆಸ್ಕ್ ಟಾಪ್ ಕಂಪ್ಯೂಟರ್ ಬಳಸುವುದಕ್ಕಿಂತ ಲ್ಯಾಪ್‍ಟಾಪ್ ಬಳಕೆ ಮಾಡುವುದೇ ಹೆಚ್ಚು.

ಇಂಟರ್ನೆಟ್ ಒಂದಿದ್ದರೆ ನಾವು ಎಲ್ಲಿ ಬೇಕಾದರೂ ಕುಳಿತು ಕೆಲಸ ಮಾಡಬಹುದು. ಇದಕ್ಕೆ ಸಹಕಾರಿಯಾಗಿ ವಿವಿಧ ಕಂಪನಿಗಳಿಂದ ಆಕರ್ಷಕ ಬೆಲೆಗಳಲ್ಲಿ ಬ್ರಾಂಡೆಡ್ ಲ್ಯಾಪ್‌ಟಾಪ್‌ಗಳು ಸಹ ಲಭ್ಯವಿವೆ.

ಸಾಧಾರಣ ಡೆಸ್ಕ್ ಟಾಪ್ ಕಂಪ್ಯೂಟರ್ ಇಷ್ಟಪಡದೆ ಇರುವವರು ಪೋರ್ಟಬಿಲಿಟಿ ಕಾರಣಕ್ಕೆ ಲ್ಯಾಪ್ಟಾಪ್ ಖರೀದಿ ಮಾಡುತ್ತಾರೆ ಮತ್ತು ಅನುಕೂಲ ಕರವಾಗಿ ಬಳಸುತ್ತಾರೆ ಕೂಡ. ಈಗ ಅಸಲಿ ವಿಷಯ ಏನೆಂದರೆ ಲ್ಯಾಪ್ಟಾಪ್ ಅನ್ನು ತೊಡೆಯ ಮೇಲೆ ನಿರಂತರವಾಗಿ ಇಟ್ಟುಕೊಂಡು ಕೆಲಸ ಮಾಡು ವುದರಿಂದ ಈ ಕೆಳಗಿನ ರೀತಿ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ಸಂಶೋಧನೆ ಅಭಿಪ್ರಾಯ ಪಟ್ಟಿದೆ.

ಇಂದು ಎಷ್ಟೋ ಜನ ಟೆಕ್ಕಿಗಳಿಗೆ ಮಕ್ಕಳಾಗುತ್ತಿಲ್ಲ. ಇದನ್ನು ನೋಡಿದ ಬೇರೆ ಟೆಕ್ಕಿಗಳು ನಮಗೆ ಮಕ್ಕಳೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾದರೆ ಏನು ಇದಕ್ಕೆಲ್ಲ ಕಾರಣ?
ಯಾವಾಗಲೂ ಲ್ಯಾಪ್ಟಾಪ್ ಜೊತೆಗಿರುವುದು. ಅದ ರಲ್ಲೂ ಸಾಕಷ್ಟು ಜನರು ಲ್ಯಾಪ್ಟಾಪ್ ಅನ್ನು ತೊಡೆ ಮೇಲೆ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಇದು ಪ್ರಮು ಖವಾಗಿ ಮೈಕ್ರೋವೇವ್ ಸಿಗ್ನಲ್ ಗಳನ್ನು ನಿರಂತ ರವಾಗಿ ಕೊಡುತ್ತಿರುತ್ತದೆ.

ಇದರಿಂದ ಪುರುಷರ ವೀರ್ಯಾಣುಗಳು ಮತ್ತು ಮಹಿಳೆ ಯರ ಅಂಡಾಣುಗಳು ತೊಂದರೆಗೆ ಸಿಲುಕುತ್ತವೆ. ಹೀಗೆಂದು ನಾವು ಹೇಳುತ್ತಿಲ್ಲ.
ಸಾಕಷ್ಟು ಸಂಶೋಧನೆಗಳು ಈ ಬಗ್ಗೆ ಅಧ್ಯಯನ ಮಾಡಿ ವರದಿ ಕೊಟ್ಟಿವೆ. ಪ್ರಮುಖವಾಗಿ ಲ್ಯಾಪ್ಟಾಪ್ ಅನ್ನು ವೃಷ ಣಗಳ ಭಾಗದಲ್ಲಿ ತೊಡೆಯ ಮೇಲೆ ಇಟ್ಟುಕೊಂಡು ನಿರಂತರವಾಗಿ ಕೆಲಸ ಮಾಡುವುದರಿಂದ ಫಲವತ್ತತೆಯ ತೊಂದರೆ ಸಾಕಷ್ಟು ಎದುರಾಗುತ್ತದೆ

ಲ್ಯಾಪ್‌ಟಾಪ್ ಒಂದು ಎಲೆಕ್ಟ್ರಾನಿಕ್ ಮೆಷಿನ್. ಇದು ನಿರಂತರವಾಗಿ ತನ್ನಿಂದ ಬಿಸಿಯನ್ನು ಹೊರಗೆ ಹಾಕುತ್ತದೆ. ತೊಡೆಯ ಭಾಗದ ಚರ್ಮ ಇದರಿಂದ ಹಾನಿಗೆ ಒಳಗಾಗುವುದು ಖಚಿತ.
ಇದು ಹೀಗೆ ಮುಂದುವರೆದರೆ ತೊಡೆಯ ಭಾಗದಲ್ಲಿ ಚರ್ಮದ ಕ್ಯಾನ್ಸರ್ ಕಂಡು ಬರುತ್ತದೆ ಎಂದು ಚರ್ಮ ರೋಗ ತಜ್ಞರು ಈ ಹಿಂದೆಯೇ ಕೇಳಿದ್ದಾರೆ.
ಕೆಲವರಿಗಂತೂ ಚರ್ಮದ ಜೀವಕೋಶಗಳ ಕ್ಯಾನ್ಸರ್ ಹೆಚ್ಚಾಗಿ ತುಂಬಾ ಗಂಭೀರ ಸ್ವರೂಪದ ಸಮಸ್ಯೆ ಎದುರಾ ಗುತ್ತದೆ. ಅದ ರಲ್ಲೂ ಕೆಲವು ಪುರುಷರಿಗೆ ವೃಷಣಗಳ ಭಾಗದಲ್ಲಿ ಕ್ಯಾನ್ಸರ್ ಕಂಡು ಬರುತ್ತದೆ.

ಇದನ್ನು ನಾವೇನು ಬೇರೆ ಹೇಳಬೇಕಾಗಿಲ್ಲ. ಏಕೆಂದರೆ ಲ್ಯಾಪ್ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುವ ಪ್ರತಿಯೊಬ್ಬರಿಗೂ ಇದರ ಅನುಭವ ಆಗಿರುತ್ತದೆ.
ಹಾಗಾಗಿ ನಿಮಗೆ ಸರಿ ಹೊಂದುವಂತಹ ಒಂದು ಲ್ಯಾಪ್ಟಾಪ್ ಟೇಬಲ್ ಖರೀದಿಸಿ ಅದರ ಮೇಲೆ ಲ್ಯಾಪ್‌ ಟಾಪ್ ಇಟ್ಟು ಕೆಲಸ ಮಾಡಿ. ಇದರಿಂದ ನಿಮ್ಮ ಬೆನ್ನು ನೋವು ಹಾಗೂ ಕುತ್ತಿಗೆ ನೋವು ಕ್ರಮೇಣವಾಗಿ ಕಡಿಮೆಯಾಗುತ್ತದೆ.

ಲ್ಯಾಪ್‌ಟಾಪ್ ಅನ್ನು ಟೇಬಲ್ ಮೇಲೆ ಇಟ್ಟು ಕೆಲಸ ಮಾಡುವುದಕ್ಕೂ ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಏಕೆಂದರೆ ತೊಡೆಯ ಮೇಲೆ ಇಟ್ಟುಕೊಂಡರೆ ಕಣ್ಣುಗಳಿಗೆ ಮತ್ತು ಲ್ಯಾಪ್ಟಾಪ್ ಸ್ಕ್ರೀನ್ ಗೆ ಅಂತರ ಕಡಿಮೆ ಇರುತ್ತದೆ.
ಇದು ಕ್ರಮೇಣವಾಗಿ ನಿಮ್ಮ ನಿದ್ರೆಗೆ ಅವಶ್ಯಕವಾಗಿ ಬೇಕಾದ ಮೇಲಟೋನಿನ್ ಹಾರ್ಮೋನ್ ಉತ್ಪತ್ತಿಯಲ್ಲಿ ತಡೆ ಹಾಕುತ್ತದೆ. ಹಾಗಾಗಿ ಇದು ನಿಮಗೆ ದಿನ ಕಳೆದಂತೆ ನಿದ್ರೆ ಬರದಂತೆ ಮಾಡುತ್ತದೆ.
ಇದಕ್ಕಾಗಿ ನೀವು ನಿಮ್ಮ ಲ್ಯಾಪ್ಟಾಪ್ ಸ್ಕ್ರೀನ್ ಬ್ರೈಟ್ನೆಸ್ ಅನ್ನು ಕಡಿಮೆ ಮಾಡಿಕೊಳ್ಳಿ ಮತ್ತು ಟೇಬಲ್ ಮೇಲೆ ಇಟ್ಟುಕೊಂಡು ಬಳಸಿ.

ಕೇವಲ ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ಕೂಡ ಲ್ಯಾಪ್‌ಟಾಪ್ ನಿಂದ ತೊಂದರೆ ಇದೆ. ಮಹಿಳೆ ಯರು ನಿರಂತರವಾಗಿ ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡುವುದರಿಂದ ಅವರ ದೇಹದ ಫಲವತ್ತತೆ ಕುಸಿಯುತ್ತದೆ.
ಒಂದು ವೇಳೆ ಈಗಾಗಲೇ ಗರ್ಭಿಣಿಯಾಗಿದ್ದು, ತೊಡೆಯ ಮೇಲಿಟ್ಟುಕೊಂಡು ಲ್ಯಾಪ್‌ಟಾಪ್ ಬಳಸಲು ಹೋದರೆ ಅದು ಹುಟ್ಟುವ ಮಗುವಿಗೆ ಸಾಕಷ್ಟು ಆರೋಗ್ಯ ಸಮಸ್ಯೆ ಗಳನ್ನು ತಂದು ಕೊಡುತ್ತದೆ. ಏಕೆಂದರೆ ಲ್ಯಾಪ್‌ಟಾಪ್ ನಿಂದ ಹೊರಡುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿ ಯೇಷನ್ ಕಿರಣಗಳು ಅಷ್ಟರಮಟ್ಟಿಗೆ ಪ್ರಭಾವ ಹೊಂದಿರುತ್ತವೆ.

ಒಂದೇ ಬಾರಿಗೆ ಇದು ಆಗುತ್ತದೆ ಎಂದು ಹೇಳಲು ಕಷ್ಟ ಸಾಧ್ಯ. ಆದರೆ ತೊಡೆಯ ಮೇಲೆ ನಿರಂತರವಾದ ಲ್ಯಾಪ್‌ ಟಾಪ್ ಬಳಕೆಯಿಂದ ತೊಡೆಯ ಭಾಗದ ಚರ್ಮ ಕ್ರಮೇಣವಾಗಿ ಬಿಸಿಯ ಪ್ರಭಾವಕ್ಕೆ ಒಳಗಾಗಿ ಚರ್ಮದ ಮೇಲೆ ದದ್ದುಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಇಂತಹ ಜನರಿಗೆ ಮೊದಲು ಚರ್ಮದ ಬಣ್ಣ ಬದಲಾಗುತ್ತದೆ.
ಇದನ್ನು ನಿರ್ಲಕ್ಷ ಮಾಡಲು ಹೋದರೆ ಅದರಿಂದ ಮುಂಬರುವ ದಿನಗಳಲ್ಲಿ ಗಂಭೀರ ಸ್ವರೂಪದ ಚರ್ಮದ ಹಾನಿ ಸಮಸ್ಯೆ ಉಂಟಾಗುತ್ತದೆ.

Share post:

Subscribe

spot_imgspot_img

Popular

More like this
Related

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ: ನಟ ಅನಂತನಾಗ್‌ ಭಾವುಕ

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಎಂದು ನಟ ಅನಂತನಾಗ್‌ ಭಾವುಕರಾದರು. ನವರಾತ್ರಿಯ...

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...