ಮನೆಯಲ್ಲಿ ಸೊಳ್ಳೆಗಳು ಜಾಸ್ತಿ ಇದ್ಯಾ!?, ಎಚ್ಚರ ಡೆಂಗ್ಯೂ ಬರುತ್ತೆ!

Date:

ಮಳೆಗಾಲ ಹೆಚ್ಚಾದಂತೆ ಒಂದಲ್ಲ ಒಂದು ಸಮಸ್ಯೆ ಕಾಡಲಾರಂಭಿಸುತ್ತದೆ. ಅವುಗಳಲ್ಲಿ ಒಂದು ಸೊಳ್ಳೆಗಳ ಕಾಟವೂ ಒಂದು. ಮಳೆಗಾಲ ಬಂತಂದ್ರೆ ಸೊಳ್ಳೆಗಳ ಕಾಟ ಶುರುವಾಗುತ್ತದೆ. ಸೊಳ್ಳೆಗಳಿಂದ ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸೊಳ್ಳೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಕೆಲವೊಂದು ಟಿಪ್ಸ್‌ನ್ನು ಇಲ್ಲಿ ನೀಡಲಾಗಿದೆ.

ಸೊಳ್ಳೆ ಒಮ್ಮೆಗೆ ಎಷ್ಟು ರಕ್ತ ಹೀರಬಲ್ಲದು ಗೊತ್ತಾ? ಸೊಳ್ಳೆಗಳು ಸಾಮಾನ್ಯವಾಗಿ ತಮ್ಮ ದೇಹ ತೂಕದ ಮೂರು ಪಟ್ಟು ರಕ್ತವನ್ನು ಕುಡಿಯಬಹುದು. ಸೊಳ್ಳೆಗಳ ಸರಾಸರಿ ತೂಕ 6 ಮಿಗ್ರಾಂ ಇರುತ್ತದೆ. ಒಬ್ಬ ವ್ಯಕ್ತಿಯು ಆಹಾರವನ್ನು ಜೀರ್ಣಿಸಿಕೊಳ್ಳಲು ಮೂರರಿಂದ ನಾಲ್ಕು ಬಾರಿ ಅಗಿಯಬೇಕು. ಆದರೆ ಸೊಳ್ಳೆಗಳಿಗೆ ಹಲ್ಲುಗಳಿಲ್ಲ. ಅವು ಬಾಯಿಯಲ್ಲಿ ಚೂಪಾದ ಘಟಕಗಳನ್ನು ಹೊಂದಿರುತ್ತದೆ. ಇದರ ಮೂಲಕ ರಕ್ತವನ್ನು ಹೀರಿ ಕುಡಿಯುವ ಮೂಲಕ, ಅದು ತಮ್ಮ ಆಹಾರ ಪಡೆಯುತ್ತದೆ

ವಾಸ್ತವವಾಗಿ ಸೊಳ್ಳೆಗಳು ಯಾರನ್ನೂ ಕಚ್ಚದೇ ಬದುಕಬಲ್ಲವು. ಆದರೆ ಹೆಣ್ಣು ಸೊಳ್ಳೆಗಳಿಗೆ ಸಂತಾನೋತ್ಪತ್ತಿ ಚಕ್ರವನ್ನು ಪೂರ್ಣಗೊಳಿಸಲು ರಕ್ತದ ಅಗತ್ಯವಿದೆ. ಸೊಳ್ಳೆಗಳಿಗೆ ಮೊಟ್ಟೆ ಇಡಲು ಮತ್ತು ಮೊಟ್ಟೆಗಳನ್ನು ಫಲವತ್ತಾಗಿಸಲು ರಕ್ತದ ಅಗತ್ಯವಿದೆ. ಹಾಗಾಗಿಯೇ ಇದು ಮಾನವ ರಕ್ತವನ್ನು ಹೀರುತ್ತದೆ. ಹಾಗಾಗಿ ಹೆಣ್ಣು ಸೊಳ್ಳೆಗಳು ಮಾತ್ರ ಹೆಚ್ಚಾಗಿ ಮನುಷ್ಯರನ್ನು ಕಚ್ಚುತ್ತವೆ

ನಂತರ ರಕ್ತವು ಜೀರ್ಣವಾದಾಗ, ಮೊಟ್ಟೆಗಳು ರೂಪುಗೊಳ್ಳುತ್ತವೆ. ಹೆಣ್ಣು ಸೊಳ್ಳೆಯು ಮೊಟ್ಟೆಗಳನ್ನು ನೀರಿಗೆ ಬಿಡುತ್ತದೆ. ಇದು ಸೊಳ್ಳೆ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ ಹಿಂದಿನಕಾಲದಲ್ಲಿ ಜನ ಹೆಚ್ಚಾಗಿ ಸೊಳ್ಳೆಗಳು ಮತ್ತು ಅವು ಉಂಟು ಮಾಡುವ ರೋಗಗಳಿಂದ ಸಾಯುತ್ತಿದ್ದರು.

ಸೊಳ್ಳೆ ಕಾಟಕ್ಕೆ ಮನೆಮದ್ದು: ಬೇವಿನ ಎಣ್ಣೆ: ಮನೆಮದ್ದುಗಳನ್ನು ಬಳಸಿ ಸೊಳ್ಳೆಗಳನ್ನು ಹೋಗಲಾಡಿಸಲು ಬೇವಿನ ಎಣ್ಣೆ ಉತ್ತಮ ಆಯ್ಕೆಯಾಗಿದೆ. ಚರ್ಮದ ಮೇಲೆ ಸೊಳ್ಳೆ ನಿವಾರಕ ಕ್ರೀಮ್ ಬಳಸದೆ ಬೇವಿನ ಎಣ್ಣೆಯನ್ನು ಬಳಸಬಹುದು. ಇದು ಸೊಳ್ಳೆಗಳನ್ನು ನಿಮ್ಮಿಂದ ದೂರವಿಡುತ್ತದೆ

ಪುದೀನಾ ಎಣ್ಣೆ: ನಿಮ್ಮ ಚರ್ಮಕ್ಕೆ ಬೇವಿನ ಎಣ್ಣೆಯನ್ನು ಬಳಸಲು ನೀವು ಬಯಸದಿದ್ದರೆ, ಕೆಲವು ಹನಿ ಪುದೀನಾ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಮತ್ತು ನಿಮ್ಮ ಚರ್ಮಕ್ಕೆ ಸಿಂಪಡಿಸಿ. ಇದು ಸೊಳ್ಳೆಗಳನ್ನು ನಿಮ್ಮಿಂದ ದೂರವಿಡುತ್ತದೆ.

ತುಳಸಿ ಎಲೆ: ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ನೀವು ತುಳಸಿ ಎಲೆಗಳನ್ನು ಮನೆಮದ್ದುಗಳಲ್ಲಿ ಬಳಸಬಹುದು. ಶುಭ ಸೂಚನೆಯಂತೆ ಮನೆಯ ಕಿಟಕಿ, ಬಾಗಿಲು ಮತ್ತಿತರ ಕಡೆ ತುಳಸಿ ಎಲೆಗಳನ್ನು ಇಡಬಹುದು. ಅವು ಸೊಳ್ಳೆಗಳು ಮನೆಗೆ ಬರದಂತೆ ತಡೆಯುತ್ತವೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....