ಮಗಳ ಮೇಲೆ ನಿರಂತರ ಅತ್ಯಾಚಾರ: ಅಪ್ರಾಪ್ತ ಮಗಳು ಈಗ ಗರ್ಭಿಣಿ!

tnit editors
1 Min Read

ಮಗಳ ಮೇಲೆ ನಿರಂತರ ಅತ್ಯಾಚಾರ: ಅಪ್ರಾಪ್ತ ಮಗಳು ಈಗ ಗರ್ಭಿಣಿ

ತುಮಕೂರು:- ಕಾಮುಕ ತಂದೆಯೊಬ್ಬ ತನ್ನ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ತುಮಕೂರು ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಾಮುಕ ತಂದೆಯ ಲೈಂಗಿಕ ದೌರ್ಜನ್ಯದಿಂದಾಗಿ 14 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಬಾಲಕಿ ಗರ್ಭ ಧರಿಸಿದ್ದರಿಂದಾಗಿ ಕೃತ್ಯ ಬೆಳಕಿಗೆ ಬಂದಿದೆ.

ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ.

ಎಂಟು ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಹೊರ ರಾಜ್ಯದಿಂದ ಬಂದಿದ್ದ ಕುಟುಂಬ ಹೊನ್ನವಳ್ಳಿಯಲ್ಲಿ ನೆಲೆಸಿದೆ. ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

ತನ್ನ ಮಗಳ ಮೇಲೆಯೇ ತಂದೆ ಕ್ರೌರ್ಯ ಮೆರೆದಿರುವುದು ತಿಳಿಯುತ್ತಿದ್ದಂತೆ ಪೋಕ್ಸೋ ಪ್ರಕರಣ ಹಾಗೂ ಅತ್ಯಾಚಾರ ಆರೋಪ ಅಡಿ ಕೇಸ್ ದಾಖಲಾಗಿದೆ. ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

Share This Article