ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದವರು ಎಸ್ಎಂ ಕೃಷ್ಣ: ಡಾ. ಪರಮೇಶ್ವರ್‌

tnit editors
1 Min Read

ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದವರು ಎಸ್ಎಂ ಕೃಷ್ಣ: ಡಾ. ಪರಮೇಶ್ವರ್‌

ಬೆಳಗಾವಿ: ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದವರು ಎಸ್ಎಂ ಕೃಷ್ಣ ಎಂದು ಗೃಹ ಸಚಿವ ಡಾ. ಪರಮೇಶ್ವರ್‌ ಹೇಳಿದ್ದಾರೆ. ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ಮಾತನಾಡಿದ ಅವರು, ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದವರು ಎಸ್ಎಂ ಕೃಷ್ಣ ಎಂದರು.
ಇನ್ನೂ ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿಯೇ ಆಯಿತು. ಆ ಕಾಲದಲ್ಲಿ ಬೆಂಗಳೂರಿನಲ್ಲಿ ದಿನವೊಂದರಲ್ಲಿ 200-300 ಐಟಿ ಕಂಪನಿಗಳು ನೋಂದಣಿಯಾಗಿದ್ದೂ ಇದೆ. ಅದಲ್ಲದೆ ಎಸ್ಎಂ ಕೃಷ್ಣರ ರಾಜಕೀಯ ಸಾಧನೆಗಳು, ಆಡಳಿತಾತ್ಮಕ ಸಾಧನೆಗಳು ಹಾಗೂ ಬೆಂಗಳೂರಿಗೆ ಅವರು ನೀಡಿರುವ ಕೊಡುಗೆಗಳ ಬಗ್ಗೆ ಅಧಿವೇಶನದಲ್ಲಿ ಹಂಚಿಕೊಂಡಿದ್ದಾರೆ.

Share This Article