Coffee: ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಏನಾಗುತ್ತದೆ ಗೊತ್ತಾ..?
ಹಲವರಿಗೆ ಬೆಳಗ್ಗೆ ಎದ್ದ ಕೂಡಲೇ ಕಾಫಿ ಬೇಕೇಬೇಕು. ಬೆಳಗ್ಗೆ ಒಂದೇ ಅನ್ಕೋಬೇಡಿ ದಿನದ ಯಾವುದೇ ಹೊತ್ತಲ್ಲಿ ಕಾಫಿ ಕೊಟ್ರು ಕುಡಿಯುವ ಕಾಫಿ ಲವರ್ಸ್ ಅನೇಕರಿದ್ದಾರೆ. ನಾವು ಪ್ರತಿನಿತ್ಯ ಸುಮಾರು ನಾಲ್ಕರಿಂದ ಐದು ಕಪ್ ಕಾಫಿ ಕುಡಿಯುತ್ತೇವೆ.
ಕಾಫಿ ಕುಡಿಯುವುದರಿಂದ ತಕ್ಷಣಕ್ಕೆ ತಲೆಬಿಸಿ ಕಡಿಮೆಯಾಗಿ ಒಂದು ರಿಲೀಫ್ ಸಿಗುತ್ತೆ. ಆದರೆ ಧೀರ್ಘಾವಧಿಯಲ್ಲಿ ಅದರ ಕೆಟ್ಟ ಪರಿಣಾಮ ದೇಹದ ಮೇಲೆ ಬೀರುತ್ತದೆ.
ದಿನದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಪದೇ ಪದೇ ಕಾಫಿ ಕುಡಿಯುವುದರಿಂದ ನಮ್ಮ ಅನಾರೋಗ್ಯಕ್ಕೆ ನಾವೇ ಕಾರಣರಾಗುತ್ತೇವೆ. ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೆಫಿನ್ ಅಂಶ ಸೇರುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತೆ, ಹೃದಯ ಬಡಿತದಲ್ಲಿ ಏರಿಳಿತ, ಆಸಿಡಿಟಿ, ಅಲ್ಸರ್, ದೇಹದಲ್ಲಿ ನಿಶಕ್ತತೆ, ಹಾಗೂ ಪಾರ್ಶ್ವವಾಯು ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾಫಿ ರಹದಾರಿ ಮಾಡಿಕೊಡುತ್ತದೆ ಎಂದು ಯುರೋಪಿಯನ್ ಆಹಾರ ಸುರಕ್ಷತಾ ಪ್ರಾಧಿಕಾರ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ.
ಇನ್ನು ವರದಿ ಪ್ರಕಾರ ವಯಸ್ಕರು ದಿನವೊಂದಕ್ಕೆ 400 ಮಿಲಿಗ್ರಾಂ ಪ್ರಮಾಣದ ಕೆಫೀನ್ ಸೇವಿಸಿದ್ರೆ ಅವರ ಆರೋಗ್ಯ ಸೇಫ್, ಇನ್ನು ಗರ್ಭಿಣಿಯರು ಕೂಡ ಕಾಫಿಯನ್ನು ಹೆಚ್ಚು ಕುಡಿಯುವಂತಿಲ್ಲ. ಇದು ಭ್ರೂಣದಲ್ಲಿರುವ ಶಿಶುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಕೇವಲ 200 ಮಿಲಿಗ್ರಾಂ ಮಾತ್ರ ಕಾಫಿ ಸೇವಿಸಬೇಕು. ಇನ್ನು ಮಕ್ಕಳಿಗೂ ಕೂಡ ಕಾಫಿ ಉತ್ತಮ ಪಾನೀಯವಲ್ಲ ಎಂದು ಯುರೋಪಿಯನ್ ಆಹಾರ ಸಂರಕ್ಷಣಾ ಪ್ರಾಧಿಕಾರ ತಿಳಿಸಿದೆ.