ನಿರೀಕ್ಷೆಯಂತೆ ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧ ಪಟ್ಟಂತೆ ಕಾವೇರಿ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿ ಪೂರ್ಣ ಪರಿಶೀಲನೆ ನಡೆಸಿರುವ ಕೇಂದ್ರ ತಜ್ಞರ ತಂಡ ಇಂದು ಸುಪ್ರೀಂಗೆ ವರದಿಯಲ್ಲಿ ಸಲ್ಲಿಸಲಿದೆ.. ಖ್ಯಾತ ಜಲತಜ್ಞರಾದ ಜಿ.ಎಸ್. ಝಾ ನೇತೃತ್ವ ತಂಡ ಎರಡು ದಿನಗಳ ಕಾಲ ನಡೆಸಿದ ಪರಿಶೀಲನೆಯ ಕುಲಂಕುಶ ಮಾಹಿತಿಯನ್ನು ಇಂದು ಸುಪ್ರೀಂಗೆ ಸಲ್ಲಿಸಲಿದ್ದು, ನಾಳೆ ಈ ಕುರಿತಾಗಿ ವಿಚಾರಣೆ ನಡೆಯಲಿದೆ.
ಕೆಆರ್‍ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳ ವಸ್ತು ಸ್ಥಿತಿಗಳ ಕುರಿತಾಗಿ ಪರಿಶೀಲನೆ ನಡೆಸುವಂತೆ ಕೇಂದ್ರ ನಿಯೋಗ ಕಳುಹಿದ ಒಟ್ಟು 12 ಜನ ಕೇಂದ್ರ ತಜ್ಞರ ತಂಡವು ಕಾವೇರಿ ತೀರದ ವಾಸ್ತವ ಸ್ಥಿತಿಯ ಕುರಿತು ವರದಿ ಮಾಡಿದರು. ಇದೇ ವೇಳೆ ಸಚಿವ ಎಂ.ಬಿ ಪಾಟೀಲ್ ಅವರ ನೇತೃತ್ವದ ರಾಜ್ಯದ ಅಧಿಕಾರಿಗಳು ಪ್ರಸ್ತುತದಲ್ಲಿರುವ ಕಾವೇರಿ ಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡುವಲ್ಲಿ ಸಫಲರಾದರು. ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯ ಕೊರತೆ, ಕಾವೇರಿ ಜಲಾನಯನ ಪ್ರದೇಶಗಳಲ್ಲಿ ರೈತರ ಬೆಳೆ ನಾಶದಿಂದ ರೈತರು ಕಂಗಾಲಾಗಿರುವುದು ಈ ಎಲ್ಲಾ ವಾಸ್ತವಿಕ ಸನ್ನಿವೇಶಗಳನ್ನು ತಜ್ಞರಿಗೆ ಮನವರಿಕೆ ಮಾಡಿದ್ದಾರೆ. ಇನ್ನು ತಮಿಳುನಾಡಿನ ಭವಾನಿ ಮತ್ತು ಮೆಟ್ಟೂರು ಅಣೆಕಟ್ಟುಗಳ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆಯೂ ವರದಿ ಮಾಡಿದ್ದಾರೆ. ಅಲ್ಲಿರ ರಾಜ್ಯ ಅಧಿಕಾರಿಗಳು ಕೇಂದ್ರ ತಜ್ಞರಿಗೆ ವರದಿ ನೀಡಿದ್ದಾರೆ. ಉಭಯ ರಾಜ್ಯಗಳ ಜಲಾನಯನ ಪ್ರದೇಶಗಳಲ್ಲಿನ ಸ್ಥಿತಿಗತಿಗಳ ಬಗ್ಗೆ ವರದಿ ಮಾಡಿಕೊಂಡಿರುವ ಕೇಂದ್ರ ನಿಯೋಗವು ಇದು ದೆಹಲಿಗೆ ವಾಪಾಸ್ಸಾಗಲಿದೆ. ಈ ಸಮಿತಿಯು ಅಧ್ಯಯನ ವರದಿಯನ್ನು ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ಸಲ್ಲಿಸಲಿದೆ. ಈ ವರದಿಯನ್ನಾಧರಿಸಿ ಸುಪ್ರೀಂಕೋರ್ಟ್‍ನ ದ್ವಿ ಸದಸ್ಯ ಪೀಠ ನಾಳೆ ತೀರ್ಪು ನೀಡಲಿದೆ.
Like us on Facebook The New India Times
POPULAR STORIES :
ವಿಶ್ವದಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ ಯಾರು ಗೊತ್ತಾ..?
ಹೌದು ಸ್ವಾಮಿ.. ಪ್ರಥಮ್‍ಗೆ ಬಿಗ್‍ಬಾಸ್ ಕರ್ದೇ ಇರ್ಲಿಲ್ವಂತೆ..!
ಹತ್ತು ರೂ ಜಗಳಕ್ಕೆ ಏಳು ವರ್ಷ ಸಜೆ..!