ಏಲಕ್ಕಿ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?
ಬಹುತೇಕ ಜನರಿಗೆ ಏಲಕ್ಕಿ ಸೇವನೆ ಮಾಡುವುದರಿಂದ ಯಾವ ಬಗೆಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ನಮ್ಮಗೆ ಊಟದ ಬಳಿಕಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು.ಅನೇಕ ಜನರಿಗೆ, ಹೊಟ್ಟೆ ಉರಿಯುವಿಕೆ ಸಮಸ್ಯೆಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಏಲಕ್ಕಿಯು ಹೊಟ್ಟೆಗೆ ತುಂಬಾ ಸಹಾಯಕವಾಗಿದೆ. ಇದನ್ನು ಪ್ರತಿದಿನ ಸೇವಿಸಿದರೆ ನೀವು ಹಲವಾರು ಪ್ರಯೋಜನಗಳನ್ನು ನೀವು ಪಡೆಯಬಹುದು.
• ಏಲಕ್ಕಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ತಿಳಿದಿರಬಹುದು. ಊಟದ ನಂತರ ಎರಡು ಏಲಕ್ಕಿ ತಿನ್ನುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
• ಏಲಕ್ಕಿಯಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಏಲಕ್ಕಿ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ. ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ.
• ಏಲಕ್ಕಿಯನ್ನು ಮಕ್ಕಳ ಆಹಾರದಲ್ಲಿ ನೀಡುವುದರಿಂದ ಅವರ ಮೂಳೆಗಳು ಬಲಗೊಳ್ಳುತ್ತದೆ.
• ಏಲಕ್ಕಿ ತಿನ್ನುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಹಾಗಾಗಿಯೇ ಇದರ ರಸವನ್ನು ಅನೇಕ ಮೌತ್ ಫ್ರೆಶನರ್ ಗಳಿಗೆ ಸೇರಿಸಲಾಗುತ್ತದೆ.
• ಏಲಕ್ಕಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಜೊತೆಗೆ ಊಟದ ನಂತರ ಏಲಕ್ಕಿ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ.
• ರಕ್ತದೊತ್ತಡ ಹೆಚ್ಚಿದ್ದರೆ ಏಲಕ್ಕಿ ತಿನ್ನಬೇಕು. ಏಕೆಂದರೆ ಇದರ ನಿಯಮಿತ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
• ಏಲಕ್ಕಿ ಯಕೃತ್ತಿನ ಆರೋಗ್ಯಕ್ಕೆ ಸಹಕಾರಿ. ಯಕೃತ್ತು ದೊಡ್ಡದಾಗುವುದನ್ನು ಇದು ತಡೆಯುತ್ತದೆ.
• ಆತಂಕ ಮತ್ತು ಒತ್ತಡಗಳಿಂದ ಬಳಲುವವರು ಏಲಕ್ಕಿ ಸೇವನೆಯನ್ನು ಆರಂಭಿಸಬಹುದು.
• ಮಾನವರನ್ನು ಕಾಡುವ ಉದರದ ಹುಣ್ಣು (ಅಲ್ಸರ್) ಗಳಿಗೆ ಏಲಕ್ಕಿ ಪ್ರಯೋಜನಕಾರಿಯಾಗಬಹುದು.
• ಸಿಹಿ ತಿಂದ ನಂತರ ಏಲಕ್ಕಿ ಸೇವನೆ ಮಾಡುವುದರಿಂದ ಹಲ್ಲುಗಳಲ್ಲಿ ಕುಳಿ ಬೀಳುವುದನ್ನು ತಡೆಯಬಹುದು.