No menu items!
14.8 C
Munich
Thursday, April 30, 2026

ನೀವು ಜೀವನದಲ್ಲಿ ಬದಲಾವಣೆ ಕಾಣ್ಬೇಕಾ!? ಹಾಗಿದ್ರೆ ಬುಧವಾರ ಹೀಗೆ ಮಾಡಿ! 

Must read

ನೀವು ಜೀವನದಲ್ಲಿ ಬದಲಾವಣೆ ಕಾಣ್ಬೇಕಾ!? ಹಾಗಿದ್ರೆ ಬುಧವಾರ ಹೀಗೆ ಮಾಡಿ!

 

ಬುಧವಾರದ ದಿನದಂದು ನಾವು ಮಾಡುವ ಕೆಲವೊಂದು ಒಳ್ಳೆಯ ಕೆಲಸಗಳು ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತರುತ್ತದೆ.

 

ಎಲ್ಲ ದೇವರುಗಳಲ್ಲಿ ಗಣೇಶನನ್ನು ಮೊದಲ ಆರಾಧಕ ಎಂದು ಕರೆಯಲಾಗುತ್ತದೆ. ಆತ ಸಿದ್ಧಿ ಬುದ್ಧಿಯ ದೇವರು. ಗಣೇಶ ತನ್ನ ಭಕ್ತರ ನೋವನ್ನು ದೂರ ಮಾಡುತ್ತಾನೆ, ಆದ್ದರಿಂದ ಅವರನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ. ಬುಧವಾರವನ್ನು ಗಣೇಶನ ಆರಾಧನೆಗಾಗಿ ಗ್ರಂಥಗಳಲ್ಲಿ ಸಮರ್ಪಿಸಲಾಗಿದೆ. ಆದರೆ ಬುಧವಾರದಂದು ಗಣಪತಿಯನ್ನು ಏಕೆ ಪೂಜಿಸುತ್ತಾರೆ ಗೊತ್ತಾ!?

 

ಬುಧವಾರದಂದು ಗಣಪತಿಯ ನಾಮಸ್ಮರಣೆ ಮಾಡಿ ಪೂಜಿಸುವ ಮೂಲಕ ಹೊಸ ಕೆಲಸ ಆರಂಭಿಸಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಬುಧವಾರದಂದು ಈ ಕ್ರಮಗಳನ್ನು ಅನುಸರಿಸುವ ಮೂಲಕ ಒಬ್ಬ ವ್ಯಕ್ತಿಯು ತೊಂದರೆಗಳಿಂದ ಪರಿಹಾರವನ್ನು ಪಡೆಯುತ್ತಾನೆ. ಸಂತೋಷ ಮತ್ತು ಸಮೃದ್ಧಿಯು ಆತನ ಮನೆಗೆ ಆಗಮಿಸುತ್ತದೆ. ಇದರೊಂದಿಗೆ ರೋಗಗಳು, ದುಃಖ ಮತ್ತು ಭಯ ಇತ್ಯಾದಿಗಳೂ ದೂರವಾಗುತ್ತವೆ.

 

ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ಬುಧವಾರದಂದು ಒಂದು ರೂಪಾಯಿ ನಾಣ್ಯದಿಂದ ಈ ಕೆಲಸವನ್ನು ಮಾಡಿ. ಈ ಪರಿಹಾರವನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ಬುಧವಾರದಂದು ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಅದರಲ್ಲಿ ಒಂದು ಹನಿ ಸಾಸಿವೆ ಎಣ್ಣೆಯನ್ನು ಹಾಕಿ ಶನಿ ದೇವಸ್ಥಾನದಲ್ಲಿ ಇಟ್ಟು ಆರ್ಥಿಕ ಪ್ರಗತಿಗಾಗಿ ಬೇಡಿಕೊಳ್ಳಿ. ಈ ಪರಿಹಾರದಿಂದ ಶನಿದೋಷದಿಂದ ಪರಿಹಾರ ಸಿಗುತ್ತದೆ.

 

ನೀವು ಬುಧವಾರದ ದಿನದಂದಿ ಯಾವುದೇ ಮಂಗಳಮುಖಿಯರಿಗೆ ಒಂದಿಷ್ಟು ಹಣವನ್ನು ದಾನ ಮಾಡಿ ಅವರಿಂದ ಒಂದು ರೂಪಾಯಿ ನಾಣ್ಯವನ್ನು ಹಿಂದಿರುಗಿ ಪಡೆದುಕೊಳ್ಳಿ. ಇದರಿಂದ ಅವರು ಸಂತೋಷದಿಂದ ನಿಮಗೆ ಒಂದು ರೂಪಾಯಿ ನೀಡಿದರೆ, ಈ ನಾಣ್ಯವನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳಿ. ಇದು ನಿಮಗೆ ಯಾವಾಗಲೂ ಧನಾಗಮನದ ಆಶೀರ್ವಾದವನ್ನು ತರುತ್ತದೆ.

 

ನಿಮ್ಮ ಜೀವನದಲ್ಲಿ ನಿಮಗೆ ಶತ್ರುಗಳು ಪದೇ ಪದೇ ತೊಂದರೆಗಳನ್ನು ನೀಡುತ್ತಿದ್ದರೆ, ಶತ್ರುಗಳನ್ನು ತೊಲಗಿಸಲು ಕಲ್ಲಿದ್ದಲಿನಿಂದ ಕಲ್ಲಿನ ಮೇಲೆ ಶತ್ರುವಿನ ಹೆಸರನ್ನು ಬರೆದು ಆ ಕಲ್ಲನ್ನು ಹರಿಯುವ ನೀರಿನಲ್ಲಿ ಬುಧವಾರ ತೇಲಿ ಬಿಡಬೇಕು. ಸತತ ನಾಲ್ಕು ಬುಧವಾರಗಳ ಕಾಲ ನೀವು ಈ ಕೆಲಸವನ್ನು ಮಾಡುವುದರಿಂದ ಶತ್ರುಗಳಿಂದ ಮುಕ್ತಿಯನ್ನು ಕಂಡುಕೊಳ್ಳುತ್ತೀರಿ.

 

ಆರೋಗ್ಯಕರ, ಸುಂದರ ಮತ್ತು ಆಕರ್ಷಕ ದೇಹ ಸೌಂದರ್ಯವನ್ನು ಪಡೆದುಕೊಳ್ಳುವುದಕ್ಕಾಗಿ, ಬುಧವಾರದ ದಿನದಂದು ಗೋಧಿಯಿಂದ ರೊಟ್ಟಿಗಳನ್ನು ತಯಾರಿಸಿ. ಅದಕ್ಕೆ ಬೆಲ್ಲವನ್ನು ಹಚ್ಚಿ ಹಸುಗಳಿಗೆ ತಿನ್ನಲು ನೀಡಿ. ಇದನ್ನು ನೀವು ಪ್ರತೀ ಬುಧವಾರ ಮಾಡುತ್ತಾ ಹೋದರೆ, ಅದರಿಂದ ನೀವು ಉತ್ತಮ ಆರೋಗ್ಯವನ್ನು ಹಾಗೂ ದೈಹಿಕ ಸೌಂದರ್ಯವನ್ನು ಪಡೆದುಕೊಳ್ಳುತ್ತೀರಿ

 

ವ್ಯಾಪಾರದಲ್ಲಿ ಪ್ರಗತಿಯನ್ನು ಸಾಧಿಸುವುದಕ್ಕಾಗಿ ನೀವು ಬುಧವಾರದ ದಿನದಂದು ಅಕ್ಕಿ ಮತ್ತು ಕುಂಕುಮವನ್ನು ಒಂದು ತಟ್ಟೆಯಲ್ಲಿ ತೆಗೆದುಕೊಂಡು ಅವೆರೆಡನ್ನು ಬೆರೆಸಿ ಎಕ್ಕದ ಗಿಡಗಳಿಗೆ ಅರ್ಪಿಸಬೇಕು. ಹಾಗೂ ಬುಧವಾರ ಬೆಳಿಗ್ಗೆ ನೀವು ಈ ಸಸ್ಯವನ್ನು ಪೂಜಿಸಬೇಕು. ಅಲ್ಲದೆ, ಈ ದಿನದಂದು ಬೇವಿನ ಮರಕ್ಕೆ ನೀರನ್ನು ಅರ್ಪಿಸುವುದರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುತ್ತೀರಿ.

- Advertisement -spot_img

More articles

- Advertisement -spot_img

Latest article