ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ ಪ್ರಕರಣ: ಸತೀಶ್ ಜಾರಕಿಹೊಳಿ ಆಪ್ತೆಯ ಬಂಧನ

Date:

ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ ಪ್ರಕರಣ: ಸತೀಶ್ ಜಾರಕಿಹೊಳಿ ಆಪ್ತೆಯ ಬಂಧನ

ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತೆ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ. ಮಂಜುಳಾ ರಾಮಗನಟ್ಟಿ ಬಂಧಿತ ಆರೋಪಿಯಾಗಿದ್ದು, ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ಅಂಬಿ (48ವರ್ಷ) ಅವರು ಫೆಬ್ರವರಿ 14ರಂದು ರಾತ್ರಿ 11ಗಂಟೆ ಸುಮಾರಿಗೆ ಮಿರಜ್ ದಿಂದ ಮನೆಗೆ ಬರುತ್ತಿರುವಾಗ ಅಪಹರಣ ಮಾಡಲಾಗಿತ್ತು.
ಮರುದಿನ ಫೆಬ್ರವರಿ 15 ರಂದು ಬಸವರಾಜ ಅಂಬಿ ಅವರ ಪತ್ನಿ ಶೋಭಾಗೆ ಕರೆ ಮಾಡಿದ್ದ ಅಪಹರಣಕಾರರು “ಐದು ಕೋಟಿ ಹಣ ನೀಡಿ ನಿನ್ನ ಬಿಡಿಸಿಕೊಂಡು ಹೋಗುವಂತೆ” ಹೇಳಿದ್ದರು.
ಈ ಕಿಡ್ನಾಪ್ ಪ್ರಕರಣ ಪೊಲೀಸರ ನಿದ್ದೆಗೆಡಸಿತ್ತು. ಪ್ರಕರಣ ದಾಖಲಾದ ಕೇವಲ 24ಗಂಟೆಯಲ್ಲಿ ಘಟಪ್ರಭಾ ಪೊಲೀಸರು ಪ್ರಕರಣವನ್ನ ಭೇದಿಸಿದ್ದು ಐವರು ಜನ ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಉದ್ಯಮಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ!

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ! ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ...

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು...

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್ ಟೆಹ್ರಾನ್: ಇರಾನ್...

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು!

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು! ಬೆಂಗಳೂರು: ಯುಗಾದಿ...