No menu items!
12.4 C
Munich
Saturday, May 30, 2026

ಜೆ.ಪಿ.ನಡ್ಡಾಗಿಂತ ನಾನು ಸೆನ್ಸಿಬಲ್ ರಾಜಕಾರಣಿ: ಡಿಕೆಶಿ ಹಿಂಗೇಳಿದ್ಯಾಕೆ?

Must read

ಜೆ.ಪಿ.ನಡ್ಡಾಗಿಂತ ನಾನು ಸೆನ್ಸಿಬಲ್ ರಾಜಕಾರಣಿ: ಡಿಕೆಶಿ ಹಿಂಗೇಳಿದ್ಯಾಕೆ?

ಬೆಂಗಳೂರು:- ಜೆ.ಪಿ.ನಡ್ಡಾಗಿಂತ ನಾನು ಸೆನ್ಸಿಬಲ್ ರಾಜಕಾರಣಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ನನ್ನ ಹೆಸರನ್ನು ಎಲ್ಲಾ ಕಡೆ ತೆಗೆದುಕೊಂಡರೆ ತೆಗೆದುಕೊಳ್ಳಲಿ. ನಾನು ಜೆ.ಪಿ ನಡ್ಡಾ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ. ಜೆ.ಪಿ.ನಡ್ಡಾಗಿಂತ ನಾನು ಸೆನ್ಸಿಬಲ್ ರಾಜಕಾರಣಿ. ನಾನು 36 ವರ್ಷ ಶಾಸಕ. ನಮ್ಮದು ರಾಷ್ಟ್ರೀಯ ಪಕ್ಷ. ಸಂವಿಧಾನ ಏನು? ಸಂವಿಧಾನ ಏನು ಹೇಳುತ್ತದೆ ಎಂಬ ಪರಿಜ್ಞಾನ ನನಗಿದೆ. ಬಿಜೆಪಿಯವರು ದಾರಿ ತಪ್ಪಿಸುತ್ತಿದ್ದಾರೆ. ಅವರ ಗ್ರಾಫ್ ಇಳಿಯುತ್ತಿದೆ ಎಂದರು.

ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ನಾನು ಹೇಳಿಲ್ಲ. ಇದು ರಾಜಕೀಯ ಪಿತೂರಿ. ಬಿಜೆಪಿ ಅವರಿಗೆ ರಾಜಕೀಯ ಅಷ್ಟೇ. ಮುಸ್ಲಿಂ ಕೋಟಾ ಬಗ್ಗೆ ನ್ಯಾಯಾಲಯ ತೀರ್ಪುಗಳ ಬಗ್ಗೆ ಹೇಳಿದ್ದೇನೆ. ಸಂವಿಧಾನ ಬದಲಾವಣೆ ಬಗ್ಗೆ ಎಲ್ಲಿ ಮಾತನಾಡಿದ್ದೇನೆ ಎಂದು ಪ್ರಶ್ನಿಸಿದರು

- Advertisement -spot_img

More articles

- Advertisement -spot_img

Latest article