No menu items!
18.7 C
Munich
Saturday, August 1, 2026

ಗೋಲ್ಡ್ ಸ್ಮಗ್ಲಿಂಗ್ ಕೇಸ್: ಇಂದು ರನ್ಯಾ ರಾವ್ ಜಾಮೀನು ಭವಿಷ್ಯ ನಿರ್ಧಾರ

Must read

ಗೋಲ್ಡ್ ಸ್ಮಗ್ಲಿಂಗ್ ಕೇಸ್: ಇಂದು ರನ್ಯಾ ರಾವ್ ಜಾಮೀನು ಭವಿಷ್ಯ ನಿರ್ಧಾರ

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿ ವಿಚಾರಣೆ ಅಂತ್ಯವಾಗಿದ್ದು, ಇದಕ್ಕೆ ಸಂಬಂಧ ಪಟ್ಟಂತೆ ಜಾಮೀನು ಅರ್ಜಿ ಆದೇಶ ಇಂದು ಹೊರಬೀಳಲಿದೆ. 14 ಕೆ.ಜಿ ಅಂದ್ರೆ 12 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ದುಬೈನಿಂದ ಬೆಂಗಳೂರಿಗೆ ತಂದು ಬಂಧನಕ್ಕೆ ಒಳಗಾಗಿದ್ದ ರನ್ಯಾ ರಾವ್‌ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಶಾಕ್ ನೀಡಿತ್ತು.
ಮತ್ತೆ ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಅಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ಚಿನ್ನ ಕಳ್ಳ ಸಾಗಾಣೆ ಮಾಡೋದಕ್ಕೆ ಹವಾಲ ವಹಿವಾಟು ನಡೆಸಲಾಗುತ್ತಿತ್ತು ಎಂಬ ಗಂಭೀರ ಆರೋಪವನ್ನು ಡಿಆರ್‌ಐ ಮಾಡಿತ್ತು. ಸುದೀರ್ಘ ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಇಂದು ಆದೇಶ ಹೊರಬೀಳಲಿದೆ.

- Advertisement -spot_img

More articles

- Advertisement -spot_img

Latest article