No menu items!
15.2 C
Munich
Sunday, May 24, 2026

ಕ್ಷುಲ್ಲಕ ಕಾರಣಕ್ಕೆ ಕಿರಿಕ್: ಪುಡಿರೌಡಿಯಿಂದ ಮತ್ತೋರ್ವ ರೌಡಿಗೆ ಡ್ರ್ಯಾಗರ್‌ನಿಂದ ಹಲ್ಲೆ!

Must read

ಹಾಸನ:- ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಕಿರಿಕ್ ನಡೆದು ಪುಡಿರೌಡಿಯೊಬ್ಬ ಮತ್ತೋರ್ವ ರೌಡಿಗೆ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಇಬ್ಬರು ಪುಡಿಪುಡಿಗಳಾದ ಯತೀಶ್ ಹಾಗೂ ದಿಲೀಪ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿದೆ. ಬಳಿಕ ಅಲ್ಲಿಂದ ಇಬ್ಬರೂ ಬೈಕ್‍ನಲ್ಲಿ ತೆರಳಿದ್ದರು. ಶಿವನ ಪಾರ್ಕ್ ಹತ್ತಿರ ಮೂತ್ರ ವಿಸರ್ಜನೆಗೆ ಯತೀಶ್ ಬೈಕ್ ನಿಲ್ಲಿಸಿದ್ದ. ಈ ವೇಳೆ ದಿಲೀಪ್ ಡ್ರ್ಯಾಗರ್‌ನಿಂದ ಯತೀಶ್‍ಗೆ ಇರಿದಿದ್ದಾನೆ. ದಾಳಿಯಿಂದ ಯತೀಶ್‍ಗೆ ಗಂಭೀರ ಗಾಯಗಳಾಗಿದ್ದು, ಗಾಯಾಳು ಯತೀಶ್‍ಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -spot_img

More articles

- Advertisement -spot_img

Latest article