ಪ್ರತಿದಿನ ಒಂದು ಮೊಟ್ಟೆ ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ..?
ಮೊಟ್ಟೆಗಳು ಸಸ್ಯಾಹಾರಿಗಳಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನೀಡುವ ಪೋಷಕಾಂಶಗಳ ನಿಧಿ ಎಂದು ಹೇಳಲಾಗುತ್ತದೆ. ಪ್ರತಿದಿನ ಒಂದು ಮೊಟ್ಟೆ ತಿನ್ನುವುದರಿಂದ ಆರೋಗ್ಯವಾಗಿರಬಹುದು ಎಂದು ಹೇಳಲಾಗುತ್ತದೆ. ಮೊಟ್ಟೆಯು ವಿಶ್ವದಲ್ಲಿ ಅತೀ ಪೋಷಕಾಂಶಗಳು ಇರುವ ಆಹಾರ ಎಂದು ಪರಿಗಣಿಸಲಾಗಿದೆ. ಒಂದು ಮೊಟ್ಟೆಯಲ್ಲಿ ದಿನಕ್ಕೆ ಬೇಕಾಗಿರು ವಂತಹ ಪೋಷಕಾಂಶಗಳು ಸಿಗುತ್ತದೆ. ಇದರಲ್ಲಿನ ಕೆಲವು ಪೋಷಕಾಂಶಗಳು ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆಯನ್ನು ಬೇಯಿಸಿ, ಆಮ್ಲೆಟ್ ಮಾಡಿ, ತಿಂದರೂ ಅದರಲ್ಲಿ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವುದು.
ಅತಿಹೆಚ್ಚು, ಸಮೃದ್ಧವಾದ ಪೌಷ್ಠಿಕಾಂಶ:
ಮೊಟ್ಟೆಯಲ್ಲಿ ಅತಿಹೆಚ್ಚು ಪೌಷ್ಠಿಕಾಂಶ ನಮಗೆ ಸಿಗುತ್ತದೆ. ದೇಹಕ್ಕೆ ಬೇಕಾಗುವ ಒಂಬತ್ತು ತರದ ಅಮೈನೋ ಆಮ್ಲಗಳು ಈ ಮೊಟ್ಟೆಯಲ್ಲಿ ಇವೆ. ಇವು ಸ್ನಾಯುಗಳನ್ನು ಬಲಗೊಳಿಸುತ್ತವೆ. ಜೊತೆಗೆ ಇಡೀ ದೇಹದ ಕಾರ್ಯಚಟುವಟಿಕೆಯನ್ನು ಸರಿಯಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಪೋಷಕಾಂಶಗಳ ಆಗರ ಮೊಟ್ಟೆ:
ಪೌಷ್ಠಿಕಾಂಶಗಳ ಜೊತೆ ಜೊತೆಗೆ ಮೊಟ್ಟೆ ಸಮೃದ್ಧ ವಿಟಮಿನ್ಸ್ ಮತ್ತು ಮಿನರಲ್ಸ್ಗಳಿಂದ ಕೂಡಿದೆ. ವಿಟಮಿನ್ ಬಿ 12 ಜೊತೆ ಜೊತೆಗೆ ಹಲವು ಪೋಷಕಾಂಶಗಳು ಮೊಟ್ಟೆಯಲ್ಲಿ ಇರುವುದರಿಂದ, ನರಗಳ ಕಾರ್ಯಕ್ಷಮತ, ರಕ್ತದ ಕಣಗಳ ಆರೋಗ್ಯವನ್ನು ನಿರ್ವಹಿಸುವಲ್ಲಿ ಇದು ಸಹಾಯಕಾರಿ.
ಕಣ್ಣಿನ ಆರೋಗ್ಯಕ್ಕೆ ತುಂಬಾ ಸಹಾಯಕಾರಿ:
ಲೂಟಿನ್ ಝೀಯಾಕ್ಸಾಯಥೀನ್ ಹಾಗೂ ಕ್ಯಾರೋಟನಾಯ್ಡ್ಗಳು ಮೊಟ್ಟೆಯಲ್ಲಿ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಇದು ತುಂಬಾ ಸಹಾಯಕಾರಿ. ಇದರಲ್ಲಿರುವ ಆ್ಯಂಟಿಆಕ್ಸಿಡಂಟ್ಗಳು ವಯಸ್ಸಿಗೆ ಸಂಬಂಧಪಟ್ಟ ಸ್ನಾಯು ಸಮಸ್ಯೆಗಳಿಂದ ಕಾಪಾಡುತ್ತವೆ.
ಮೆದುಳಿನ ಆರೋಗ್ಯಕ್ಕೆ ಮೊಟ್ಟೆಯೇ ಶ್ರೇಷ್ಠ:
ಮೊಟ್ಟೆಯ ಸೇವೆನೆಯಿಂದಾಗಿ ನೆನಪಿನ ಹಾಗೂ ಕಲಿಯುವಿಕೆಯ ಶಕ್ತಿ ಹೆಚ್ಚುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮಕ್ಕಳು ಮೊಟ್ಟೆಯನ್ನು ಹೆಚ್ಚು ಹೆಚ್ಚು ತಿನ್ನುವುದರಿಂದ ಅವರ ಮೆದುಳಿನ ಸರ್ವತೋಮುಖ ವಿಕಾಸಕ್ಕೆ ಇದು ಹೆಚ್ಚು ಸಹಾಯಕಾರಿ.
ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ:
ಮೊಟ್ಟೆ ನೂರಾರು ರೀತಿಯ ಪೋಷಕಾಂಶಗಳನ್ನು ದೇಹಕ್ಕೆ ನೀಡುವುದರಿಂದ ಸಹಜವಾಗಿ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ವಿಟಮಿನ್ ಎ ಅಂತಹ ಪೋಷಕಾಂಶಗಳು ಚರ್ಮ ಸಂಬಂಧಿತ ಸಮಸ್ಯೆಗಳನ್ನು ತಡೆಯುತ್ತದೆ, ಹಲವಾರು ಸೋಂಕುಗಳಿಗೆ ಅಡ್ಡಿಯಾಗಿ ನಮ್ಮ ದೇಹದಲ್ಲಿ ಮೊಟ್ಟೆ ನಿಲ್ಲುತ್ತದೆ.