ಅವತ್ತು ಊರಿಗೆ ಹೋಗೊ ಸಂತೋಷದಲ್ಲಿ ನಾನಿದ್ದೆ, ಟ್ರೈನ್ ಫುಲ್ ರಶ್ ಆಗಿತ್ತು, ಆದ್ರೂ ಊರಿಗೋಗ್ಲೇ ಬೇಕಲ್ವಾ..? ಅದಷ್ಟೇ ರಶ್ ಆಗಿದ್ರೂ ನಿಂತುಕೊಂಡಾದ್ರು ಹೋಗಲೇಬೇಕೆಂದು ಡಿಸೈಡ್ ಮಾಡಿದ್ದೆ. ಬಿಡದಿ ರೈಲ್ವೇ ಸ್ಟೇಷನ್ ನಿಂದ ಟ್ರೈನ್ ಹತ್ತೊಕ್ಕೊಂಡೆ ರೀ ನನ್ನ ಪುಣ್ಯಕ್ಕೆ 3 ಸೀಟು ಖಾಲಿ ಇತ್ತು. ಅಷ್ಟೊಂದು ರಶ್ ಇದ್ದ ಟೈಮ್‍ನಲ್ಲಿ 3 ಸೀಟ್ ಸಿಕ್ಕಿದ್ದು ಮಿರಾಕಲ್ ಅನ್ನಿಸ್ತಿತ್ತು. ಕೆಂಗೇರಿಯಲ್ಲಿ ನಾನು ಕುಳಿತಿದ್ದ ಬೋಗಿಗೆ ತಾಯಿಯೊಬ್ರು ಮಗುವನ್ನು ಎತ್ಕೊಂಡ್ ಬಂದು ನನ್ನ ಪಕ್ಕದಲ್ಲೇ ಸೀಟಿನಲ್ಲಿಯೇ ಕುಳಿತುಕೊಂಡ್ರು. ಅವರ ಹಿಂದೆಯೇ ಒಬ್ಳು ಸುಂದ್ರಿ ಮಿಂಚಂತೆ ಬಂದ ರೀತಿ ಭಾಸವಾಗಿತು. ಕಿಟಕಿ ಕಡೆ ಏನೇನೋ ನೋಡುತ್ತಾ ಕುಳಿತ್ತಿದ್ದ ನನ್ನ ಕಣ್ಣುಗಳು ಮನಸ್ಸಿನ ನಿಯಂತ್ರಣವನ್ನು ತಪ್ಪಿ ಒಮ್ಮೆಲೆ ಅವಳತ್ತ ತಿರುಗಿತು.
ಲವ್ ಅಟ್ ಫಸ್ಟ್ ಸೈಟ್ ಅಂತ ಕೇಳಿದ್ದೆ ನನಗೂ ಆಗೋ ಎಲ್ಲಾ ಲಕ್ಷಣಗಳು ಅವಳನ್ನ ನೋಡಿದ್ದೆ ಶುರುವಾಯಿತು. ಆ ಕ್ಷಣನೆ ಮನಸ್ಸು ಇವಳೇ ನನ್ನ ಬಾಳಸಂಗಾತಿಯಾಗ್ಬೇಕು, ಈಗಲೇ ಅವಳ ಮುಂದೆ ಕುಳಿತು ನನ್ನ ಮದುವೆಯಾಗ್ತಿರಾ ಪ್ಲೀಸ್ ಎಂದು ಕೇಳಿಬಿಡ್ಲ ಎಂದೆನಿಸುತಿತ್ತು. ಇನ್ನು ನೋಡಿ ಎರಡು ನಿಮಿಷ ಆಗಿಲ್ಲ ಆಗ್ಲೆ ನಿನ್ ಮುಖಕ್ಕೆ ಲವ್ ಆಯ್ತಾ ಅಂತಾ ಬೈದ್ರೆ ಕಷ್ಟ ಎಂದು ಮನಸ್ಸು ಕಲ್ಲು ಮಾಡಿಕೊಂಡೆ. ನನ್ನ ಕಣ್ಣುಗಳೇ ನನಗೆ ಶತ್ರುವಾಗಿಬಿಟ್ವು ಕಣ್ರೀ.. ಎಷ್ಟೇ ಕಷ್ಟಬಿದ್ದು ಅತ್ತಿತ್ತ ನೋಡೋಕೆ ಪ್ರಯತ್ನ ಪಟ್ರು.. ಹಾಳಾದ್ ಕಣ್ಣು ಮತ್ತೆ ಮತ್ತೆ ಅವಳತ್ತ ನೋಡೋಕೆ ಶುರು ಹಚ್ಕೊಂಡ್‍ಬಿಡ್ತು ನೋಡಿ..! ಏನಾದ್ರು ಕಾರಣ ಹುಡುಕಿ ಅವಳನ್ನ ಮಾತನಾಡಿಸಬೇಕಲ್ಲಪ್ಪ ದೇವರೇ, ದೇವತೆಯಂತಿರೋ ಹುಡ್ಗಿಯನ್ನ ನನ್ನತ್ರ ಕಳ್ಸಿದಿಯಾ ಅದೇ ರೀತಿ ಹೇಗಾದ್ರು ಅವಳತ್ರ ಮಾತನಾಡಿಸಿ ಹತ್ತಿರ ಆಗೋಕೆ ಏನಾದ್ರು ಮಾಡಪ್ಪ ಅಂತಾ ಬೇಡಿಕೊಳ್ಳುತ್ತಿದ್ದೆ. ಆದೇ ಸಮಯಕ್ಕೆ ಅವಳ ಅಕ್ಕನ ಮಗು ಕಿಟಕಿಯ ಪಕ್ಕದಲ್ಲಿ ಬರಲು ಹಠ ಮಾಡುತಿತ್ತು. ರೋಗಿ ಬಯಸಿದ್ದು ಹಾಲು ಅನ್ನ ವೈಧ್ಯರು ಹೇಳಿದ್ದು ಹಾಲು ಅನ್ನ ಎಂದುಕೊಂಡು ಆ ಮಗುವನ್ನು ಕಿಟಕಿ ಪಕ್ಕದಲ್ಲಿ ನಿಲ್ಲಿಸಿಕೊಂಡು ಆಟವಾಡಿಸುತ್ತಾ ಎಲ್ಲಿಗೋತ್ತಿದ್ದಿರಾ ಎಂದೆ! ಶಿವಮೋಗ್ಗ ಅಂದ್ಲು ಹೋ ನಾನು ಅಲ್ಲಿಗೆ ಹೋಗ್ತಿರೋದು ಕನ್ರಿ, ಏನ್ ಮಾಡ್ತಿದಿರಾ? ನಿಮ್ಮ ಹೆಸರೇನ್ರಿ ಅಂತಾ ಹತ್ತಾರು ಪ್ರಶ್ನೆ ಕೇಳಿದೆ ಮುಗ್ದತೆಯಿಂದಲೇ ‘ರಮ್ಯ’ ಎಂದು ಉತ್ತರಿಸಿದಳು.
ಇಬ್ರು ಕ್ಲೋಸ್ ಆದ್ವಿ, ಆದ್ರೆ ಅವಳ ನಂಬರ್ ಕೇಳೋ ಅಷ್ಟು ದೈರ್ಯ ಇರಲಿಲ್ಲ. ಶಿವಮೋಗ್ಗ ಇನ್ನೇನು ಹತ್ತಿರ ಬಂತು ಮನಸ್ಸಿನಲ್ಲಿ ವಿಚಿತ್ರವಾದ ಭಯ, ಏನೋ ಕಳ್ಕೋತ್ತಿದ್ದೀನಿ ಅನ್ನೋ ಫೀಲ್ ಕಾಡಲು ಶುರುವಾಯಿತು. ಏನಾದ್ರು ಆಗ್ಲಿ ನಂಬರ್ ಕೇಳಿಬಿಡೋಣ ಅಂತ ಭಯದಲ್ಲಿಯೇ ನಿವೇನು ಅಂದುಕೊಳ್ಳಲ್ಲ ಅಂದ್ರೆ ನಂಬರ್ ಕೊಡ್ತಿರಾ ಪ್ಲೀಸ್ ಅಂದೆ. ತಕ್ಷಣ ಎರಡು ನಿಮಿಷ ನನ್ನ ಮುಖ ನೋಡಿ ಕೈಯಿಂದ ಮೊಬೈಲ್ ಕಿತ್ಕೊಂಡು ನಂಬರ್ ಟೈಪ್ ಮಾಡಿ ನೇಮ್ ಸೇವ್ ಮಾಡಿ ಕೊಟ್ಲು.
ಅವಳ ಅಂದಕ್ಕಿಂತ ಹೆಚ್ಚಾಗಿ ಅಕ್ಕನ ಮಗಳನ್ನು ರಾತ್ರಿ ಇಡೀ ತೆಗೆದುಕೊಂಡ ಕೇರ್ ನನಗೆ ತುಂಬ ಇಷ್ಟ ಆಯ್ತು. ಅಕ್ಕನ ಮಗಳನ್ನೇ ತನ್ನ ಮಗುವಿನಂತೆ ಫೀಲ್ ಆಗಿ ನೋಡಿಕೊಂಡವಳು ಇನ್ನು ನನ್ನ, ಕುಟುಂಬವನ್ನು ಇನ್ನೆಷ್ಟು ಚನ್ನಾಗಿ ನೋಡಿಕೊಳ್ಳಬಹುದು ಅಂತ ಚಿಂತಿಸಿ ಇವಳನ್ನೇ ಮದುವೆಯಾಗಬೇಕು ಆದೇನಾದ್ರು ಆಗ್ಲಿ ಅಂತ ಡಿಸೈಡ್ ಮಾಡ್ದೆ.
ನಂಬರ್ ಏನೋ ಇಸ್ಕೊಂಡೆ, ಮೆಸೇಜ್ ಕೂಡ ಮಾಡ್ದೆ. ಪ್ರತಿನಿತ್ಯ ಮೆಸೇಜು ಚಾಟಿಂಗ್ ಅಂತ ಬ್ಯುಸಿಯಾಗಿ ಹೋಗಿದ್ದ ನನಗೆ ಒಂದು ಶಾಕ್ ಕಾಡಿತ್ತು ನೋಡಿ.. ಒಂದಲ್ಲ ಎರಡಲ್ಲಾ ವಾರಗಟಟ್ಟಲೇ ನಾನು ಮಾಡಿದ್ದ ಮೆಸೇಜ್‍ಗೆ ರಿಪ್ಲೆನೇ ಇರ್ಲಿಲ್ಲ. ಒಂದು ಕಡೆ ಭಯ ಇನ್ನೊಂದ್ಕಡೆ ಏನ್ ಹುಡ್ಲಿನಪ್ಪಾ ಅಷ್ಟೆಲ್ಲಾ ಮಾತನಾಡಿ, ನಂಬರ್ ಕೊಟ್ಟು ಒಂದು ಮೆಸೇಜ್ ರಿಪ್ಲೆ ಮಾಡ್ಲಿಲ್ವಾಲ್ಲ ಅಂತ ಸಿಟ್ಟ್ ಮಾಡಿಕೊಂಡು ಮೆಸೇಜ್ ಮಾಡೋದು ಬೇಡ ಏನ್ ಇವಳೊಬ್ಳೆನ ಸುಂದ್ರಿ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಆದ್ರೂ ಮನಸ್ಸು ಕೇಳ್ತಿರ್ಲಿಲ್ಲ ಕಂಡ್ರೀ..! ತುಂಬ ಬೇಸರದಲ್ಲಿ ರೀ ಪ್ಲೀಸ್ ಒಂದೇ ಒಂದು ಮೆಸೇಜ್ ಮಾಡಿ, ನಾನ್ ನಿಮ್ನ ತುಂಬ ಇಷ್ಟ ಪಡ್ತಿದಿನಿ ಕಣ್ರೀ ಐ ಲವ್ ಯು ರೀ.. ಅಂತ ಕೊನೆ ಮೆಸೇಜ್ ಹಾಕ್ದೆ.
ಗಂಡೈಕ್ಲುಗೆ ಆಟ ಆಡ್ಸೋಕೋ ಏನೋ ನಂಗಂತೂ ಗೊತ್ತೇ ಆಗ್ಲಿಲ್ಲ.. ನನ್ನ ಅಪ್ಲಿಕೇಷನ್‍ಗೆ ಉತ್ರನೇ ಬರ್ಲಿಲ್ಲ.. ಒಂದು ವಾರದ ನಂತ್ರ ಅವರ ನಂಬರ್‍ನಿಂದ ಒಂದು ಮೆಸೇಜ್ ಬಂತು.. ನನಗಂತೂ ಹೋದ ಜೀವ ಪುಸುಕ್ ಅಂತ ವಾಪಾಸ್ಸು ಬಂತಪ್ಪ..! ಸಾರಿ ಕನ್ರಿ ಊರಿನಲ್ಲಿದ್ದೆ ನೆಟ್‍ವರ್ಕ್ ಪ್ರಾಬ್ಲೆಮ್ ಆಗಾಗಿ ಮೆಸೇಜ್ ಮಾಡಿಲ್ಲ. ಬಟ್ ನನಗೆ ಈ ಲವ್ ಅಂದ್ರೇನೆ ಆಗೋಲ್ಲ. ಅಲ್ಲ ರಿ ನೀವ್ ನನ್ನ ಒಂದೇ ಸರಿ ನೋಡಿದ್ದು ಅಷ್ಟು ಬೇಗ ಲವ್ ಆಯ್ತಾ, ಏನ್ ಇಷ್ಟ ಆಯ್ತು? ಯಾಕೆ? ಅಂತಾ ಎಲ್ಲಾ ಹುಡ್ಗಿರ್ ಕೇಳೋ ತರ ಹತ್ತಾರು ಪ್ರಶ್ನೆ ಕೇಳಿದ್ಲು. ನನ್ನ ಮನಸ್ಸಲ್ಲಿದ್ದ ಎಲ್ಲಾ ಫೀಲ್‍ನ ಹೇಳಿಕೊಂಡೆ. ಒಂದೆರೆಡು ತಿಂಗಳು ಪ್ರತಿನಿತ್ಯ ಒಮ್ಮೆಯಾದ್ರು ಐ ಲವ್ ಯು ರಿ ಎನ್ನುತ್ತಿದ್ದೆ. ಆದ್ರೆ ಅವಳ ಕಡೆಯಿಂದ ಒಂದೇ ಒಂದು ಗುಡ್ ಮಾರ್ನಿಂಗ್ ಅನ್ನೋ ಮೆಸೇಜ್ ಸಹ ಬರುತ್ತಿರಲಿಲ್ಲ.
ಎರಡು ತಿಂಗಳ ನಂತರ ನನ್ನ ಅದೃಷ್ಠನೋ ಅಥವಾ ಅವಳ ದುರಾದೃಷ್ಠನೋ ನಾಕಾಣೆ..! ಅನ್‍ಎಕ್ಸಪೆಕ್ಟೆಡ್ ಆಗಿ ಇಬ್ರೂ ಒಟ್ಟಿಗೆ ಊರಿಗೆ ಹೋಗೋ ಅದೃಷ್ಟದ ಟೈಮ್ ಬಂದೇಬಿಡ್ತು. ಸ್ವಲ್ಪ ಸಮಯ ನನ್ನ ಕಡೆ ತಿರುಗೀ ನೋಡದ ರಮ್ಯ.. ಸ್ವಲ್ಪ ಸಮಯದಲ್ಲೇ ಒಂದು ಮೆಸೇಜ್ ಬಂತು.. ಅದೂ ಕೂಡ ಅಕ್ಕ ಪಕ್ಕದಲ್ಲಿರುವಾಗ್ಲೇ ನೋಡಿ..! ಊರಿಗೆ ಬರುವವರೆಗೂ ಸಹ ನನ್ನ ಮನಸ್ಸಿನಲ್ಲಿದ್ದ ಭಾವನೆಗಳನ್ನೆಲ್ಲಾ ಹೇಳಿಕೊಂಡೆ. ನನ್ನ ವಾದ ವಿವಾದಗಳನ್ನೆಲ್ಲಾ ಆಲಿಸಿದ ಆಕೆ ಡೈರೆಕ್ಟಾಗ್ ಒಂದ್ ಮಾತ್ ಹೇಳಿದ್ಲು.. ನಾನ್ ಲವ್ ಮಾಡ್ತಿನಿ ಬಟ್ ನೀನ್ ಈಗ ಬಸ್ಸ್ ಇಳ್ದಿದ್ದೆ ತಾಳಿ ಕಟ್ಟ್ಬೇಕು ಅಂದ್ಲು.. ನನಗಂತೂ ಮಾತೇ ಬರ್ತಿರ್ಲಿಲ್ಲ. ಸೀರಿಯಸಾಗಿ ಹೇಳ್ತಿದ್ದೀರ ಅಂದೆ..! ಹೌದು ಸೀರಿಯಸಾಗೆ ಹೇಳ್ತಿರೋದು ನೀವ್ ಬೇರೆ ಬೆಂಗಳೂರಿನಲ್ಲಿರೋದು ನಂಬೋಕಾಗಲ್ಲ ಅಂದ್ಲು..! ನನಗೆ ಕೋಪ ತಡಿಯೋಕೆ ಆಗ್ಲಿಲ್ಲ ನಂಬೋಕಾಗೊಲ್ಲ ಅಂದಾಗ..! ಶಿವಮೊಗ್ಗ ಬಸ್ಸ್ ಇಳ್ದಿದ್ದೇ ದೇವಸ್ಥಾನಕ್ಕೆ ಕರೆದುಕೊಂಡೋದೆ..! ಆಗ ಅವಳಿಗೆ ಸ್ವಲ್ಪ ನಂಬಿಕೆ ಬಂತು ಅನ್ನಿಸುತ್ತೆ. ಬಟ್ ಆಗ್ಲೂ ಸಹ ನನ್ನ ಒಪ್ಪಿಕೊಂಡಿಲ್ಲ. ಅವಳು ಬೇರೆ ಬಸ್ ಗೆ ಊರಿಗೆ ಹೋಗ್ಬೇಕಿತ್ತು. ನನಗಂತೂ ಅವಳನ್ನ ಕಳ್ಸೋಕೆ ಮನಸೇ ಬರ್ತಿರ್ಲಿಲ್ಲ. ಇವಳು ಬರೀ ಕಥೇನೆ ಹೇಳ್ತಿರೋದು ಯಾವ ಫೀಲ್ ಬಂದಿಲ್ಲ ಅಂದುಕೊಂಡು ಬಾಯ್ ಅಂದೆ.. ಬಸ್ಸ್ ಹತ್ತಿದ್ದವಳು ತಕ್ಷಣ ಇಳಿದ್ಲು. ಯಾಕ್ರಿ ಏನಾಯ್ತು ಅಂತ ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಿದ್ದೀನಿ ನಮ್ಮ ಪಕ್ಕದಲ್ಲಿ ಹತ್ತಾರು ಜನ ನಿಂತುಕೊಂಡಿದ್ದಾರೆ ಜೋರಾಗಿ ಐ ಲವ್ ಯು ಅಂದ್ಲು..! ನನಗೆ ಶಾಕ್ ಆಗೋಯ್ತು ಎರಡು ಸೆಕೆಂಡ್ ನಿಜಾನೋ ಸುಳ್ಳೋ ಅಂತ ಗೋತ್ತಾಗಲಿಲ್ಲ. ತಕ್ಷಣ ಬಂದು ಕೈ ಹಿಡ್ಕೊಂಡು ಕರ್ಕೊಂಡೋದ್ಲು ನೆಕ್ಸ್ಟ್ ಬಸ್ಸ್ ಗೆ ಹೋಗ್ತೇನೆ ಅಂತಾ. ಒಂದುಕ್ಷಣ ಸತ್ತು ಬದುಕಿದಂತೆ ಫೀಲ್ ಆಯ್ತು. ಸ್ವಲ್ಪ ಸಮಯ ಟೈಮ್ ಕಳೆದು ಬಾಯ್ ಕಣೋ ನನಗೆ ಮೋಸ ಮಾಡ್ಬೇಡ ಮನೆಗ್ ಹೋಗಿ ಮೆಸೇಜ್ ಹಾಕ್ತೇನೆ ಅಂದ್ಲು. ಆದ್ರೂ ಸತ್ಯವಾಗಿ ಹೇಳ್ತೀನಿ ಹುಡ್ಗಿರಿಗೆ ಸಿಕ್ಕಪಟ್ಟೆ ಧೈರ್ಯ ಕಣ್ರೀ.
- ಹಾಲೇಶ್ ಎಂ.ಎಸ್ ಹುಣಸನಹಳ್ಳಿ
Like us on Facebook The New India Times
POPULAR STORIES :
ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!