ಬುರ್ಜ್ ಖಲೀಫಾ.. ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಹಾಗೂ ಐಶಾರಾಮಿ ಗಗನಚುಂಬಿ ಕಟ್ಟಡಗಳಲ್ಲಿ ಒಂದು.. ಈ ಕಟ್ಟಡ ನೋಡೋಕೆ ಎಷ್ಟು ಸುಂದರವಾಗಿದ್ಯೋ ಅಷ್ಟೇ ದುಬಾರಿಯೂ ಹೌದು.. ಈ ಕಟ್ಟಡದಲ್ಲಿ ಒಂದು ಅಪಾರ್ಟ್ ಪಡೆಯೋಕೆ ಕಷ್ಟ.. ಅಂತಹದರಲ್ಲಿ ಒಬ್ಬ ಸಾಮಾನ್ಯ ಮೆಕ್ಯಾನಿಕ್ ಆಗಿದ್ದ ಭಾರತೀಯ ಉದ್ಯಮಿ ಇದೀಗ ವಿಶ್ವ ವಿಖ್ಯಾತ ಬುರ್ಜ್ ಖಲೀಫಾದ 22 ಅಪಾರ್ಟ್‍ಮೆಂಟ್‍ಗಳಿಗೆ ಒಡೆಯ ಅಂದ್ರೆ ನೀವು ನಂಬ್ತೀರಾ..? ನಂಬ್ಲೇ ಬೇಕು.. ಯಾಕಂದ್ರೆ ಸಾಧಿಸುವ ಛಲ ಇದ್ದವನಿಗೆ ಅಸಾಧ್ಯ ಅನ್ನೋ ಮಾತೇ ಇಲ್ವಂತೆ.. ಅವನ ಗುರಿ ಏನಿದ್ರೂ ಸಾಧನೆ ಮಾಡೋದು ಮಾತ್ರ.. ಅಂತಹ ಸಾಧಕರಲ್ಲಿ ಇವರೂ ಒಬ್ಬರು.. ಒಂದು ಕಾಲದಲ್ಲಿ ಕಡು ಬಡತನದಲ್ಲಿ ಹುಟ್ಟಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡೆ ಈಗ ವಿಶ್ವವೇ ಬೆರಳು ಮಾಡಿ ತೋರಿಸುವ ಹಾಗೆ ಉತ್ತುಂಗದ ಮೆಟ್ಟಿಲೇರಿರುವ ಭಾರತೀಯ ಉದ್ಯಮಿ ಬೇರ್ಯಾರು ಅಲ್ಲ ಅವರೇ ಜಾರ್ಜ್ ವಿ. ನೆರಯಪರಂಬಿಲ್.. ಕೇರಳ ಮೂಲದ ಜಾರ್ಜ್ ಜೀವನದಲ್ಲಿ ಅತೀ ಕಷ್ಟದಿಂದ ಬೆಳೆದು ಬಂದು ಏನಾದರೊಂದು ಸಾಧಿಸಬೇಕೆಂದು ಪಣ ತೊಟ್ಟವರು.. ವರದಿ ಪ್ರಕಾರ ಜಾರ್ಜ್ ಈ ಹಿಂದೆ ಓರ್ವ ಸಾಮಾನ್ಯ ಮೆಕ್ಯಾನಿಕ್ ಆಗಿದ್ದರಂತೆ.. ಆದರೆ ಈಗ ಒಂದು ಖಾಸಗಿ ಸಂಸ್ಥೆಯ ಮಾಲಿಕ.. ಒಂದು ಕಾಲದಲ್ಲಿ ತಮ್ಮ ಸಂಬಂಧಿಯೊಬ್ಬರು ನಿನಗೆ ದುಬೈನಲ್ಲಿರೋ ಬುರ್ಜ್ ಖಲೀಫಾದ ಒಳಗೆ ಪ್ರವೇಶ ಮಾಡೋಕಾಗೊಲ್ಲ ಎಂದು ಹೇಳಿದ್ರಂತೆ.. ಆದ್ರೆ ಈಗ ಅದೇ ಬುರ್ಜ್ ಖಲೀಫಾದಲ್ಲಿ 22 ಅಪಾರ್ಟ್‍ಮೆಂಟ್‍ಗಳನ್ನು ಖರೀದಿ ಮಾಡಿ ತಾನ್ಯಾರು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ ನೋಡಿ..! ಇವರಿಗೆ ಬುರ್ಜ್ ಖಲೀಫಾದಲ್ಲಿ ಅಪಾರ್ಟ್‍ಮೆಂಟ್ ಖರೀದಿ ಮಾಡುಲು ಕಾರಣ 2010ರ ವೇಳೆ ಪತ್ರಿಕೆಯೊಂದರಲ್ಲಿ ಬಂದ ಒಂದು ಜಾಹಿರಾತು.. ಅದನ್ನು ನೋಡಿದ ಕ್ಷಣ ಮಾತ್ರದಲ್ಲೇ ಸುಮಾರು 828 ಮೀಟರ್ ಎತ್ತರದ ಕಟ್ಟಡದಲ್ಲಿರುವ ಒಟ್ಟು 22 ಅಪಾರ್ಟ್‍ಮೆಂಟ್ ಖರೀದಿ ಮಾಡಿದ್ದಾರೆ. ತಾನು ಮಾಡ್ತಾ ಇರೋ ಉದ್ಯಮದಲ್ಲಿ ಇನ್ನಷ್ಟು ಬೆಳವಣಿಗೆ ಕಂಡಿದ್ದರೆ ಇದಕ್ಕಿಂತ ಹೆಚ್ಚಿನ ಅಪಾರ್ಟ್‍ಮೆಂಟ್ ಖರೀದಿ ಮಾಡ್ತಾ ಇದ್ದೆ ಎನ್ನುತ್ತಾರೆ ಉದ್ಯಮಿ ಜಾರ್ಜ್. ಸದ್ಯದ 22 ಅಪಾರ್ಟ್‍ಮೆಂಟ್‍ಗಳಲ್ಲಿ 5ನ್ನು ಬಾಡಿಗೆಗೆ ನೀಡಿದ್ದಾರೆ. ಇನ್ನುಳಿದ ಅಪಾರ್ಟ್‍ಮೆಂಟ್‍ಗಳು ಹಾಗೆ ಉಳಿದಿವೆ. ಸುಮಾರು 900 ಅಪಾರ್ಟ್‍ಮೆಂಟ್‍ಗಳಿರುವ ಬುರ್ಜ್ ಖಲೀಫಾದಲ್ಲಿ ಭಾರತೀಯ ಉದ್ಯಮಿ ಜಾರ್ಜ್ ಅವರೇ ಒಟ್ಟು 22 ಅಪಾರ್ಟ್‍ಮೆಂಟ್ ಖರೀದಿ ಮಾಡಿ ಭಾರತದ ಕೀರ್ತಿ ವಿಶ್ವದೆಲ್ಲೆಡೆ ಹಬ್ಬಿಸಿದ್ದಾರಲ್ಲದೇ ಸಾಮಾನ್ಯ ವ್ಯಕ್ತಿಯಾಗಿ ಬದುಕುತ್ತಿದ್ದ ಇವರು ವಿಶ್ವ ಮಟ್ಟಿನ ಖ್ಯಾತಿಯನ್ನು ಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ.
Like us on Facebook The New India Times
POPULAR STORIES :
ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!