ಈ ಸ್ಟೋರಿ ಓದ್ತಾ ಇದ್ರೆ ನಿಮ್ಮ ರೋಮಗಳೆಲ್ಲಾ ನೆಟ್ಟಗಾಗೋದಂತು ಸತ್ಯ.. ಸಿರಿಯಾ ದೇಶದಲ್ಲಿ ಐಸಿಸ್ ಉಗ್ರರ ಅಟ್ಟಹಾಸಕ್ಕೆ ಬಲಿಯಾದ.. ಬಲಿಪಶುಗಳಾಗ್ತಾ ಇರೋ ಲಕ್ಷಾಂತರ ಮಂದಿ ಪ್ರತಿ ನಿತ್ಯ ತಮ್ಮ ಜೀವದ ಹಂಗನ್ನೂ ತೊರೆದು ಜೀವಿಸ್ತಾ ಇದಾರೆ.. ಇನ್ನು ಅಲ್ಲಿನ ಮಹಿಳೆಯ ಪಾಡಂತೂ ಹೇಳತೀರದು.. ತಮ್ಮ ಕಾಮದಾಹ ತೀರಿಸಿಕೊಳ್ಳಲು ಅಲ್ಲಿನ ಮಹಿಳೆಯರಿಗೆ ನೀಡೋ ಶಿಕ್ಷೆ ಎಂಥವರನ್ನೂ ಕೂಡ ದಿಗ್ಬ್ರಮೆಗೊಳಿಸಿತ್ತೆ.. ಆದ್ರೆ ಇಲ್ಲೋಂದು ಸ್ಟೋರಿ ಮಾತ್ರ ಸಖತ್ ಇಂಟ್ರೆಸ್ಟಿಂಗ್ ಆರಿರುವಂತಹದ್ದು.. ಉಗ್ರರಿಂದ ತಮ್ಮ ಪ್ರಾಣ ಕಾಪಾಡಿಕೊಂಡ ಒಟ್ಟು ಏಳು ವಿದೇಶಿ ಯುವತಿಯರು ಅಲ್ಲಿ ನಡೆದಂತ ಉಗ್ರರ ಕರಾಳ ಮುಖದ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ ನೋಡಿ..
ಒಂದು ಕಡೆ ಉಗ್ರರಿರುವ ಮನೆಯೊಳಗೆ ಬಂಧಿಯಾಗಿರುವ ಏಳು ಯುವತಿಯರು ಒಂದು ಕಿರಿದಾದ ಮಂಚದ ಕೆಳಗೆ ಪ್ರಾಣ ಭಯದಿಂದ ಅವಿತು ಕೊಂಡಿದ್ದಾರೆ.. ಇನ್ನೊಂದು ಕಡೆಯಲ್ಲಿ ಆ ಏಳು ಯುವತಿಯರಲ್ಲಿ ಒಬ್ಬಳಾದ ಮೊನಾಲಿ ಅಟಲ್ಲಾ ಮನೆಯವರಿಂದ ಕರೆಗಳೂ ಕೂಡ ಬರ್ತಾ ಇದೆ.. ಕೊನೆಗೆ ತನ್ನ ತಾಯಿಗೆ ಅಮ್ಮಾ ನಾನು ಉಗ್ರರ ಮನೆಯೊಳಗೆ ಬಂಧಿಯಾಗಿದ್ದೇನೆ ನನಗೆ ಕರೆ ಮಾಡ್ಬೇಡಿ ಅಂದಾಗ ಕುಟುಂಬಸ್ಥರಿಗೆ ಇನ್ನಿಲ್ಲದ ಶಾಕ್..! ಅವರಿಗೂ ಬೇರೆ ದಾರಿ ತೋಚದೇ ದೇವರ ಮೊರೆ ಹೋಗಬೇಕಾಯ್ತು ಅಷ್ಟೆ.. ಇನ್ನು ಇತ್ತ ಐಸಿಸ್ ಉಗ್ರರ ಮನೆಯೊಳಗೆ ಬಂಧಿಯಾಗಿರುವ ಈ ಏಳು ಯುವತಿಯರು ತಮ್ಮ ಪ್ರಾಣದ ಮೇಲಿದ್ದ ಆಸೆಯನ್ನೆಲ್ಲಾ ಬಿಟ್ಟು ಉಸಿರು ಬಿಗಿದಟ್ಟುಕೊಂಡು ಅವಿತು ಕುಳಿತಿದ್ದಾರೆ..! ಐಸಿಸ್ ಉಗ್ರರ ಅಟ್ಟಹಾಸಕ್ಕೆ ಸಿಕ್ಕು ಕೊನೆಗೂ ಪ್ರಾಣಾಪಾಯದಿಂದ ಪಾರಾದ ಈ ಯುವತಿಯರಿಗೆ ಸಹಕಾರಿಯಾಗಿದ್ದು ಮಾತ್ರ ಒಂದು ತೆಳ್ಳನೆಯ ಹೊದಿಕೆ..!
ಹೌದು… ಕಿರಿದಾದ ಮಂಚದ ಕೆಳಗೆ ಉಸಿರಾಡಲೂ ಆಗದ ಪರಿಸ್ಥಿತಿಯಲ್ಲಿ ಆ ಏಳು ಯುವತಿಯರು ಪಾಣ ಕಾಪಾಡಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡಿದ್ರೂ ಅಂದ್ರೆ.. ಒಂದು ಸಣ್ಣ ಸಂಧಿಯಲ್ಲಿ ಈ ಯುವತಿಯರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಮಲಗಿಕೊಂಡಿದ್ದರಂತೆ..! ಉಗ್ರರಿಂದ ಬರುತ್ತಿದ್ದ ಕೆಟ್ಟ ಬೆವರು ವಾಸನೆ ರಕ್ತದ ವಾಸನೆಯನ್ನೂ ಸಹಿಸಿಕೊಂಡು ಅವಿತು ಕುಳಿತುಕೊಂಡಿದ್ದರಂತೆ.. ರಾಕ್ಷಸರಂತಿದ್ದ ಉಗ್ರರ ಕೈಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳಿದ್ವು ಎಂದು ಅಲ್ಲಿ ತಾವು ಕಂಡ ಘೋರ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ ಮೊನಾಲಿ ಅಟಲ್ಲಾ..! ತಾವಿದ್ದ ಮನೆಗೆ ನುಸುಳಿದ್ದ ಉಗ್ರರಲ್ಲಿ ಒಬ್ಬಾತನಿಗೆ ಹೊಟ್ಟೆಯ ಭಾಗದಲ್ಲಿ ಬಲವಾದ ಗಾಯಗಳಾಗಿದ್ದು.. ತೀವ್ರ ರಕ್ತ ಸ್ರಾವ ಆಗ್ತಾ ಇದ್ದಿದ್ದನ್ನು ಕಂಡ ಯುವತಿಯರು ಬೆಚ್ಚಿ ಬಿದ್ದಿದ್ದಾರೆ.. ಕಣ್ಣೆದುರಿಗೆ ಯಮರಾಯನಂತೆ ಉಗ್ರರು ಬಂದಿದ್ದರೂ ಈ ಧೈರ್ಯಶಾಲಿ ಯುವತಿಯರು ಉಸಿರಾಡುವ ಗಾಳಿಯೂ ಸಹ ಕೇಳದಂತೆ ಅಲ್ಲಿ ಅಡವಿ ಕುಳಿತಿದ್ದರು.. ಇದೇ ವೇಳೆ ಒಂದು ಅನಿರೀಕ್ಷಿತ ಘಟನೆಯೊಂದು ನಡೆದು ಹೋಗಿತ್ತು ಎಂದು ಅಟಲ್ಲಾ ಹೇಳಿದ್ದಾಳೆ.. ನಾವು ಅಡಗಿಕೊಂಡಿದ್ದ ಜಾಗದಲ್ಲೇ ಸುತ್ತಾಡುತ್ತಿದ್ದ ಉಗ್ರರಲ್ಲಿ ಒಬ್ಬಾತನ ಕಾಲು ತನ್ನ ಭುಜಕ್ಕೆ ತಾಕಿತು. ಆಗಲೇ ಇನ್ನು ನಾವು ಬದುಕಲಾರೆವು ಎಂದು ಕೊಂಡಿದ್ದೆವು ಎಂದು ಯುವತಿ ಹೇಳಿಕೊಂಡಿದ್ದಾಳೆ..
20ರ ಆಸುಪಾಸಿನ ಈ ಏಳು ಜನ ಕ್ರಿಶ್ಚಿಯನ್ ಯುವತಿಯರು ಎರಡು ವರ್ಷಗಳ ಹಿಂದೆ ಮೊಸುಲ್ ನಗರದಿಂದ ಕಿರ್‍ಕುಟ್‍ಗೆ ವಲಸೆ ಬಂದಿದ್ದರು. ಕಿರ್‍ಕುಟ್‍ನಲ್ಲಿ ವಿದ್ಯಾಭ್ಯಾಸ ಮಾಡ್ತಾ ಇರೋ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಲ್ಲಿನ ಬಾಡಿಗೆ ಮನೆಗಳಲ್ಲಿ ಜೀವಿಸುತ್ತಿದ್ದಾರೆ. ಅ.21 ರಂದು ಈ ಯುವತಿಯರು ತಂಗಿದ್ದ ನಗರದಲ್ಲಿ ಭಾರೀ ಪ್ರಮಾಣದ ಗುಂಡಿನ ಧಾಳಿ, ಶೆಲ್ ಧಾಳಿಗಳು ನಡೆಯುತ್ತಿತ್ತು.. ಈ ವೇಳೆ ಕೆಲವು ಉಗ್ರರು ಶೆಲ್‍ಗಳು ಹಾಗೂ ಆತ್ಮಾಹುತಿ ಬಾಂಬ್‍ಗಳೊಂದಿನ ತಾವಿರುವ ಮನೆಯೊಳಗೆ ನುಸುಳಿದರು ಎಂದು ಅಲ್ಲಿಂದ ಬಜಾವಾಗಿ ಬಂದ ಯುವತಿಯರು ಹೇಳಿಕೊಂಡಿದ್ದಾರೆ..
ತಲೆ ತುಂಡರಿಸುತ್ತಿದ್ದರು..
ತಾವೇನಾದರೂ ಉಗ್ರರ ಕೈಗೆ ಸಿಕ್ಕಿ ಹಾಕಿಕೊಂಡಿದ್ದರೆ ನಮ್ಮ ತಲೆ ಕತ್ತರಿಸಿ ಹಾಕುತ್ತಿದ್ರು ಎಂದು ಹೇಳಿದ್ದಾರೆ ಯುವತಿಯರು.. ಉಗ್ರರಲ್ಲಿ ಯಾವುದೇ ರೀತಿಯ ಭೀತಿಗಳಿರಲಿಲ್ಲ.. ಅವರೆಲ್ಲರೂ ಶಾಂತ ಚಿತ್ತವಾಗಿ ಮಾತನಾಡುತ್ತಿದ್ದರು.. ಅವರಿಂದ ನಾವು ಬದುಕಿದ್ದೇ ದೊಡ್ಡ ಪವಾಡ ಎಂದು ಹೇಳಿದ್ದಾರೆ..
Like us on Facebook The New India Times
POPULAR STORIES :
ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!