ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?

Date:

ಪ್ರೇಮ್ ಕನ್ನಡ ಚಿತ್ರರಂಗದಲ್ಲಿರೋ ಮಲ್ಟಿ ಟ್ಯಾಲೆಂಟೆಡ್ ಡೈರೆಕ್ಟರ್‍ಗಳಲ್ಲಿ ಒಬ್ಬರು.. ಸಿನಿಮಾ ಆಕ್ಟ್ ಮಾಡೋದಕ್ಕಿಂತ ಡೈರೆಕ್ಷನ್ ಹೆಚ್ಚಾಗಿ ಇಷ್ಟ ಪಡೋ ಈತ ಸದ್ಯದಲ್ಲೇ ವಿಲನ್ ರೂಪದಲ್ಲಿ ಇಬ್ಬರು ದಿಗ್ಗಜ ಕಲಾವಿದರನ್ನ ಒಟ್ಟಿಗೆ ಒಂದೇ ಸ್ಕ್ರೀನ್‍ಗೆ ತರ್ತೀದ್ದಾರೆ.. ನಿಮಗೆಲ್ಲ ಗೊತ್ತಿರೋ ಹಾಗೆ ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೊ ಶಿವಾರಜ್ ಕುಮಾರ್ ಹಾಗೆ ಕಿಚ್ಚ ಸುದೀಪ್ ಸ್ಕ್ರೀನ್‍ಷೇರ್ ಮಾಡಿಕೊಳ್ತಿದ್ಧಾರೆ..

ಇನ್ನೂ ಪ್ರೇಮ್ ಅವ್ರ ವಿಷ್ಯಕ್ಕೆ ಬರೋದಾದ್ರೆ ಫ್ರೇಮ್ ಟೂ ಫ್ರೇಮ್ ತಲೆ ಕಡೆಸಿಕೊಳ್ಳೊದಲ್ಲದೆ ಇದಕ್ಕಿಂತ ಹೆಚ್ಚಾಗಿ ಸಿನಿಮಾದಲ್ಲಿರೋ ಹಾಡುಗಳನ್ನ ಬಗ್ಗೆ ಇನ್ನೂ ಹೆಚ್ಚು ತಲೆಕೆಡಿಸಿಕೊಳ್ತಾರೆ.. ಹೀಗಾಗೆ ಸಿನಿಮಾ ಅಂದುಕೊಂಡ ಮಟ್ಟಿಗೆ ಪಾಸ್ ಆಗಿಲ್ಲವಾದ್ರು, ಹಾಡುಗಳಂತು ಡಿಸ್ಟಿಂಕ್ಷನ್ ಪಡೆದುಕೊಳ್ಳುತ್ತೆ..

ಹಾಡುಗಳ ಸಾಲು ಹೀಗೆ ಇರ್ಬೇಕು ಹಾಡಿಗೆ ಇಂತಹದ್ದೆ ಲೋಕೇಷನ್ ಬೇಕು, ಇಂತಹದ್ದೆ ಡ್ಯಾನ್ಸ್, ಇಂತಹವರೆ ಹಾಡ್ಬೇಕು ಮ್ಯೂಸಿಕ್ ಹೀಗೆ ಇರ್ಬೇಕು ಅಂತ ತಲೆಕೆಡಿಸಿಕೊಂಡು ಪ್ರೇಮ್ ಚಿತ್ರದಲ್ಲಿರೋ ಸಾಂಗ್‍ಗಳಿಗೆ ಜೀವ ಕೊಡ್ತಾರೆ.. ಹೀಗಾಗೆ ಸಿನಿಮಾ ರಿಲೀಸ್‍ಗೂ ಮೊದಲು ಹಾಡಿನ ಮೂಲಕ ಬೇಜಾನ್ ಸೌಂಡ್ ಮಾಡಿ ಬಿಡುತ್ತೆ.

ಇನ್ನೂ ವಿಲನ್‍ನ ವಿಷ್ಯಕ್ಕೆ ಬರೋದಾದ್ರೆ ಚಿತ್ರದಲ್ಲಿರೋ ಎಲ್ಲಾ ಹಾಡುಗಳಿಗೆ ಸ್ವತಃ ಪ್ರೇಮ್ ಅವರೆ ಲಿರಿಕ್ಸ್ ಬರಿತಾ ಇದ್ದಾರೆ.. ಈಗಿನ ಸಿನಿಮಾದಲ್ಲಿ ಹಾಡುಗಳು ಈ ಹಿಂದಿನ ಇವರ ಚಿತ್ರಗಳಿಗಿಂತ ಅತೀ ಭಿನ್ನವಾಗಿ ಇರಲಿವೆಯಂತೆ..
ಈ ಹಿಂದೆ ಈ ಸೆಂಚ್ಯುರಿ ಸ್ಟಾರ್‍ನ ಜೊತೆಗೆ ಜೋಗಿ ಹಾಗೆ ಜೋಗಯ್ಯ ಸಿನಿಮಾಗಳನ್ನ ಮಾಡಿದ ಟೈಮ್‍ನಲ್ಲಿ ಸಿನಿಮಾದಲ್ಲಿದ್ದ ಅಷ್ಟು ಹಾಡುಗಳಿಗೆ ಸಾಹಿತ್ಯವನ್ನ ಬರೆದವರು ಪ್ರೇಮ್.. ಈ ಹಾಡುಗಳು ಈಗ್ಲೂ ಕೇಳುಗರಿಗೆ ಇಷ್ಟವಾಗುತ್ತೆ..
ಸದ್ಯ ವಿಲನ್‍ನಲ್ಲಿ ಇದೇ ಮೊದಲ ಬಾರಿಗೆ ಸುದೀಪ್‍ಗೆ ಆಕ್ಷನ್‍ಕಟ್ ಹೇಳೊದು ಮಾತ್ರವಲ್ಲ, ಕಿಚ್ಚನಿಗೊಪ್ಪುವ ಹಾಡನ್ನ ಕೂಡ ಬರಿತಾ ಇದ್ಧಾರೆ.. ವಿಲನ್‍ನಲ್ಲಿರೋ ಎಲ್ಲಾ ಹಾಡುಗಳಿಗೆ ಇವ್ರು ಲಿರಿಕ್ಸ್ ಬರಿತಾ ಇದ್ದು, ಈ ಇಬ್ಬರ ಅಭಿಮನಿಗಳು ಹುಚ್ಚೆದ್ದು ಕುಣಿಯುವ ಮ್ಯೂಸಿಕ್ ಹಾಡುಗಳನ್ನ ನೀಡ್ತಿನಿ ಅಂತಿದ್ಧಾರೆ..

ಪ್ರೇಮ್ ವಿಲನ್‍ನಲ್ಲಿ ಹಾಡುಗಳ ಮೂಲಕ ದೊಡ್ಡದೊಂದು ಹೈಪ್ ಹಾಗೆ ಕ್ರೇಝ್‍ನ ಕ್ರಿಯೇಟ್ ಮಾಡೋದ್ರಲ್ಲಿ ಯಾವುದೇ ಡೌಟ್‍ಯಿಲ್ಲ.. ಯಾಕಂದ್ರೆ ಈ ಹಿಂದೆ ರಿಲೀಸ್ ಆದ ಈತನ ನಿರ್ದೇಶನದ ಎಲ್ಲಾ ಸಿನಿಮಾಗಳು ಹಾಡಿನ ಮೂಲಕ ಥೇಟರ್‍ನಲ್ಲಿ ಅಬ್ಬರಸಿವೆ..
ಶೂಟಿಂಗ್ ಬೆಂಗಳೂರು ಹಾಗೆ ಲಂಡನ್‍ನಲ್ಲಿ ನಡೆಯಲಿದೆಯಂತೆ.. ಚಿತ್ರದ ಶೂಟಿಂಗೂ ಮೊದಲೇ ಚಿತ್ರದ ಟೀಸರ್ ಶೂಟ್ ಮಾಡಲಿದ್ದು, ಶಿವಣ್ಣ ಹಾಗೆ ಕಿಚ್ಚನ ಸಪ್ರೇಟ್ ಫೋಟೊ ಶೂಟ್ ನಡೆಸಲಿದ್ಧಾರಂತೆ.. ವಿನಲ್‍ನಲ್ಲಿ ಇಬ್ಬರು ವಿಭಿನ್ನ ಗೆಟಪ್‍ನಲ್ಲಿ ಕಾಣಿಸಿಕೊಳ್ಳಲಿದ್ಧಾರೆ.

  • ಅಶೋಕ್ ರಾಜ್

Like us on Facebook  The New India Times

POPULAR  STORIES :

ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ

ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!

ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...