ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

Date:

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿಗೆ ಕೂದಲು ಬೂದು ಬಣ್ಣಕ್ಕೆ ಅಂದರೆ ಬಿಳಿ ಬಣ್ಣಕ್ಕೆ ತಿರುಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಮಾಲಿನ್ಯ, ಧೂಳು, ರಾಸಾಯನಿಕ ಉತ್ಪನ್ನಗಳು ಮತ್ತು ಬಿಸಿ ಮಾಡುವ ಹೇರ್ ಸ್ಟೈಲಿಂಗ್ ಉಪಕರಣಗಳ ಬಳಕೆಯಿಂದಾಗಿ ಈ ರೀತಿಯಲ್ಲಿ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಸೌಂದರ್ಯ ತಜ್ಞರು.

ಆದರೆ ಇಲ್ಲಿ ಒಂದಂತೂ ಸತ್ಯ, ವಯಸ್ಸಾಗುತ್ತಾ ಹೋದಂತೆ ಕೂದಲು ಬೆಳ್ಳಗಾಗುವುದು (ಬೂದು ಬಣ್ಣ) ನೈಸರ್ಗಿಕ ಪ್ರಕ್ರಿಯೆ, ಹಾಗಾಗಿ ಇದನ್ನು ಸಂಪೂರ್ಣವಾಗಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಕೂದಲಿನ ವಿಚಾರದಲ್ಲಿ ಸರಿಯಾದ ಕಾಳಜಿ ವಹಿಸಿದರೆ, ಕೂದಲು ಬಿಳಿ ಬಣ್ಣಕ್ಕೆ ತಿರುಗುವ ಪ್ರಕ್ರಿಯೆಯನ್ನು ಸ್ವಲ್ಪ ಮಟ್ಟಿಗೆ ಮುಂದೂಡಬಹುದು ಅಷ್ಟೇ.

ಆಧುನಿಕ ಕಾಲದಲ್ಲಿ ಕೂದಲು ಬಿಳಿಯಾಗುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಚಿಕ್ಕ ಮಕ್ಕಳ ಕೂದಲು ಕೂಡ ಬಿಳಿಬಣ್ಣಕ್ಕೆ ತಿರುಗುತ್ತಿದೆ. ಇದರಿಂದಾಗಿ ಜನರು ಕಡಿಮೆ ಆತ್ಮವಿಶ್ವಾಸ ಮತ್ತು ಮುಜುಗರವನ್ನು ಎದುರಿಸಬೇಕಾಗುತ್ತದೆ. ಜನರು ತಮ್ಮ ಬಿಳಿ ಕೂದಲನ್ನು ಕಪ್ಪಾಗಿಸಲು ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ, ಆದರೆ ಸರಿಯಾದ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ.

ಸಮಸ್ಯೆಗೆ ಕೆಲವೊಂದು ನೈಸರ್ಗಿಕ ಪರಿಹಾರವನ್ನು ಮಾಡಬಹುದು. ಅದರಲ್ಲಿ ಒಂದು ಸೋರೆಕಾಯಿ. ಈ ತರಕಾರಿಯನ್ನು ಕೆಲವೊಂದು ವಿಧಾನದಲ್ಲಿ ಬಳಕೆ ಮಾಡುವ ಮೂಲಕ ಬಿಳಿ ಕೂದಲು ಸೇರಿ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಕೂದಲು ಬಿಳಿಬಣ್ಣಕ್ಕೆ ತಿರುಗಿದ್ದರೆ ಅಥವಾ ತಿರುಗುತ್ತಿದ್ದರೆ ಹೇರ್ ಡೈ ಬಳಸಬಾರದು. ಏಕೆಂದರೆ ಇದು ಕೂದಲನ್ನು ಕ್ಷಣ ಮಾತ್ರಕ್ಕೆ ಕಪ್ಪಾಗಿಸಿದರೂ, ನಂತರ ಕೂದಲು ನಿರ್ಜೀವ ಮತ್ತು ಒಣಗಿದಂತೆ ಮಾಡುತ್ತದೆ. ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಕೂದಲಿಗೆ ಪ್ರಯೋಜನಕಾರಿ ಮತ್ತು ಉತ್ತಮವಾಗಿರುತ್ತದೆ. ಸೋರೆಕಾಯಿ ಮತ್ತು ಅದರ ಸಿಪ್ಪೆಯು ಕೂದಲಿಗೆ ತುಂಬಾ ಉಪಯುಕ್ತ. ಇದನ್ನು ಹೇಗೆಲ್ಲಾ ಬಳಕೆ ಮಾಡಬಹುದು ಎಂಬುದನ್ನು ತಿಳಿಯೋಣ.

ಸೋರೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಮತ್ತು ಕ್ಯಾಲ್ಸಿಯಂ ಕಂಡುಬರುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ, ದೇಹವನ್ನು ನಿರ್ವಿಷಗೊಳಿಸುತ್ತದೆ. ಜೊತೆಗೆ ಇದು ಚರ್ಮ ಮತ್ತು ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ವಾರದಲ್ಲಿ 3 ದಿನ ಸೋರೆಕಾಯಿ ಜ್ಯೂಸ್ ಸೇವಿಸಿದರೆ, ಕ್ರಮೇಣ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಅಷ್ಟೇ ಅಲ್ಲದೆ, ಇಳಿ ವಯಸ್ಸಲ್ಲೂ ಕಪ್ಪುಕಪ್ಪಾದ ಕೂದಲು ನಿಮ್ಮದಾಗಿರುತ್ತದೆ.

ಸೋರೆಕಾಯಿಯನ್ನು ಸಿಪ್ಪೆಯು ಪ್ರಯೋಜನಕಾರಿಯಾಗಿದೆ. ಸಿಪ್ಪೆಯನ್ನು ಪುಡಿಮಾಡಿ ಅದರ ರಸದಿಂದ ತಲೆಯನ್ನು ಮಸಾಜ್ ಮಾಡಬಹುದು. ಹೀಗೆ ಮಾಡಿದರೆ ಕೂದಲು ಸ್ಮೂಥ್‌ ಆಗುವುದಲ್ಲದೆ, ದಷ್ಟಪುಷ್ಟವಾಗಿ ಬೆಳೆಯುತ್ತದೆ. ಕೂದಲನ್ನು ಕಪ್ಪಾಗಿಸಲು ಸೋರೆಕಾಯಿ ಎಣ್ಣೆಯನ್ನು ಬಳಸಬಹುದು. ಸೋರೆಕಾಯಿಯ ಸಿಪ್ಪೆಯನ್ನು ಕತ್ತರಿಸಿ ಕೆಲವು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ ನಂತರ ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಈ ಸಿಪ್ಪೆಗಳನ್ನು ಸೇರಿಸಿ ಕುದಿಸಿ. ಅದು ತಣ್ಣಗಾದ ನಂತರ, ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ. ಪ್ರತಿ ರಾತ್ರಿ ತಲೆಗೆ ಮಸಾಜ್ ಮಾಡಿ. ಬೆಳಿಗ್ಗೆ ಎದ್ದು ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕೂದಲಿಗೆ ಸರ್ವ ಸಮಸ್ಯೆಯೂ ದೂರವಾಗಿರುತ್ತದೆ.

Share post:

Subscribe

spot_imgspot_img

Popular

More like this
Related

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...

ನವರಾತ್ರಿ ನಾಲ್ಕನೇ ದಿನದಲ್ಲಿ ಕೂಷ್ಮಾಂಡಾ ದೇವಿಯನ್ನು ಆರಾಧನೆ ಮಾಡುತ್ತಾರೆ.

ನವರಾತ್ರಿ ನಾಲ್ಕನೇ ದಿನದಲ್ಲಿ ಕೂಷ್ಮಾಂಡಾ ದೇವಿಯನ್ನು ಆರಾಧನೆ ಮಾಡುತ್ತಾರೆ. ದೇವಿಯ ಹಿನ್ನಲೆ ಕೂಷ್ಮಾಂಡಾ ದೇವಿಯೇ...