ಬಾಬ ವಂಗ,ಬಲ್ಗೇರಿಯಾದ ಅಂಧ ಹೆಂಗಸಿನ ಬಗ್ಗೆ ನಿಮಗೆ ನೆನಪಿದ್ಯಾ? 9/11 ಹಾಗೂ ISIS ನ ಹುಟ್ಟಿನ ಬಗ್ಗೆ ಕುರುಹು ನೀಡಿದ ವ್ಯಕ್ತಿಯೆಂದ ಮೇಲೆ ಅಂತೂ ನಿಮಗೆ ಈಕೆಯ ಬಗ್ಗೆ ನೆನಪಿಲ್ಲದಿರಲು ಸಾಧ್ಯವೇ ಇಲ್ಲ ಅಲ್ಲವೇ?? ಈಕೆಯ ಅನುಯಾಯಿಗಳು ಈಕೆಯನ್ನು ಬಾಲ್ಕನ್ಸ್ ನ ನಾಸ್ಟ್ರಾಡಾಮಸ್ ಎಂಬುದಾಗಿಯೂ ಕರೆಯುತ್ತಾರೆ. ಆದ್ರೆ ಅಮೇರಿಕಾದ ಹೊಸ ಅಧ್ಯಕ್ಷ, ಡೊನಾಲ್ಡ್ ಟ್ರಂಪ್ ಆಗಿ ಆಯ್ಕೆ ಆಗಿರೋ ಈ ಸಂಭ್ರಮದ ಕ್ಷಣದಲ್ಲಿ ಈಕೆಯ ಬಗ್ಗೆ ಯಾಕೆ ನಾವು ನೆನೆಪಿಸಿಕೊಳ್ಳುತ್ತಿದ್ದೇವೆ ಎಂದು ನಿಮಗೆ ಕುತೂಹಲವಿದೆಯೇ?? ಹಾಗಿದ್ರೆ ಮುಂದೆ ಓದಿ…
ಟ್ರಂಪ್ ರಾಜಕಾರಣಿಯ ಹೊರತಾಗಿ ಓರ್ವ ಬ್ಯುಸಿನೆಸ್ ಮೆನ್ ಹೌದು. ಪ್ರತಿಷ್ಟಿತ ಟ್ರಂಪ್ ಆರ್ಗನೈಸೇಷನ್ ನ ಚೇರ್ ಮೆನ್ ಹಾಗೂ ಅಧ್ಯಕ್ಷ. ಈತ ಮೂಲತ: ಪಾಕಿಸ್ಥಾನಿಯೆಂಬುದಾಗಿಯೂ ಕೆಲವೊಂದು ಮೂಲಗಳು ತಿಳಿಸುತ್ತವೆ. ಅದೇನೇ ಇರಲಿ…ಟ್ರಂಪ್ ಇದೇ ಬರುವ ಜನವರಿ 20,2017 ರಂದು ಅಮೇರಿಕಾದ ಅಧ್ಯಕ್ಷ ಸ್ಥಾನಕ್ಕಾಗಿ ಪ್ರತಿಜ್ಝೆಯನ್ನು ಸ್ವೀಕರಿಸುವವರಿದ್ದಾರೆ.
ನಮ್ಮ ಕುತೂಹಲ ಕೆರಳಿಸೋ ವಿಷ್ಯ ಇಲ್ಲಿಂದ ಶುರುವಾಗತ್ತೆ ನೋಡಿ…ಡೊನಾಲ್ಡ್ ಟ್ರಂಪ್ ಗೆ ಕೆಟ್ಟ ಸುದ್ದಿಯಂತೆ…ಅದೇನಪ್ಪಾ ಅಂದ್ರೆ ಬಾಬಾ ವಂಗಳು, 44ನೇ ಅಧ್ಯಕ್ಷರಾಗಿರೋ ಒಬಾಮ ಅವರೇ ಕೊನೆಯ ಅಧ್ಯಕ್ಷರಾಗುಳಿಯುತ್ತಾರೆ ಎಂಬ ಭವಿಷ್ಯವನ್ನು ನುಡಿದಿದ್ದಾಳಂತೆ. ನಮಗೆ ಕಣ್ಣು ತೆರೆದು ನೋಡಿದರೂ ಕಾಣದೇ ಹೋದ ಆ ಸತ್ಯ ಕಣ್ಣೇ ಇಲ್ಲದ ಈ ವಂಗಾಳಿಗೆ ಅದು ಹೇಗೆ ದರ್ಷನ ನೀಡಿತೋ ?ಈ ಭವಿಷ್ಯ ಟ್ರಂಪ್ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೋ ಕಾದು ನೋಡಬೇಕಷ್ಟೇ..
ಆಕೆಯಿಂದ ಹೇಳಲಾದ ಭವಿಷ್ಯ ವಾಣಿಗಳು ಯಾವುದೆಂದು ಗೊತ್ತೇ???
ಆಕೆ ಹೇಳಿದ ನುಡಿಯಂತೆ ಅಮೇರಿಕಾದ 44ನೇ ಅಧ್ಯಕ್ಷರು ಒಬ್ಬ ಆಫ಼್ರೋ-ಅಮೇರಿಕನ್ ಆಗಿದ್ದು ಅವರೇ ಕೊನೇಯ ಅಧ್ಯಕ್ಷರಾಗಿಯೇ ಉಳಿಯುವರು. ಇದಲ್ಲದೆ ಆಕೆಯು,ಅಧ್ಯಕ್ಷರು ಕೆಲವೊಂದು ತೀವ್ರ ಆಕಸ್ಮಿಕ, ತುರ್ತು ಪರಿಸ್ಥಿತಿಗಳಿಗೆ ಸಮಾನವಾದ ಮಹಾ ಯುದ್ದಗಳಂತಹ ಸಂದರ್ಭದಲ್ಲಿ ತನ್ನ ಅಧ್ಯಕ್ಷ ಪದವಿಯನ್ನು ತೊರೆಯಬೇಕಾಗಬಹುದು ಎಂದೂ ಹೇಳಿದರು.
ಟ್ವಿನ್ ಟವರ್ ಅಟಾಕ್
1989 ರಲ್ಲಿ ಆಕೆಯು ಅಮೇರಿಕಾದ ಸಹೋದರರಿಬ್ಬರು ಎರಡು ಉಕ್ಕಿನ ಹಕ್ಕಿಗಳಿಂದ ಆಕ್ರಮಣಕ್ಕೊಳಗಾಗುತ್ತಾರೆ ಎಂದು ನುಡಿದಿದ್ದಳಂತೆ.
ಹವಾಮಾನ ವೈಪರೀತ್ಯ
ಆಕೆ 1950 ರಲ್ಲಿ ಅಮೇರಿಕಾದ ತಂಪು ಜಾಗಗಳು ಬಿಸಿಯಾಗುತ್ತವೆ,ಜ್ವಾಲಾಮುಖಿಗಳು ಎಚ್ಚೆತ್ತುಕೊಳ್ಳುತ್ತವೆ ಎಂದು ನುಡಿದಿದ್ದಳು.ಇದಲ್ಲದೆ ಆಕೆ 2004 ರ ಬಾಕ್ಸಿಂಗ್ ಡೇ, ಸುನಾಮಿ ಯ ಬಗ್ಗೆಯೂ ಹೇಳಿದ್ದಳು.
ಯೂರೋಪ್ ಮೇಲೆ ISIS ಆಕ್ರಮಣ
2016 ಕ್ಕಾಗುವಾಗ ISIS ಯೂರೋಪ್ ಮೇಲೆ ಆಕ್ರಮಣ ಮಾಡುತ್ತದಂತೆ, ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೋ?? ಈ ವರುಷದಲ್ಲಿ ಉಳಿದಿರೋದು ನಮಗೆ ಕೇವಲ 2 ತಿಂಗಳುಗಳು ಮಾತ್ರ… ಕಾದು ನೋಡೋಣ.
ಸಿರಿಯಾದಲ್ಲಿ ಗ್ರೇಟ್ ಮುಸಲ್ಮಾನರ ಯುದ್ದ ಆರಂಭವಾಗುತ್ತದಂತೆ, ಇದಲ್ಲದೆ ಆಕೆ ಚೈನಾ 2018 ಕ್ಕಾಗುವಾಗ ಒಂದು ಪ್ರಭಲ ಶಕ್ತಿಯಾಗಿ ರೂಪುಗೊಂಡು ಅಮೇರಿಕಾ ಹಾಗೂ ಅದರ ಆರ್ಥಿಕತೆ ಕೊನೆಗಾಣುವಂತೆ ಮಾಡುತ್ತದಂತೆ, ಎಂದು ನುಡಿದಿದ್ದಳು.
ಜನರಿಗೆ 2025 ಹಾಗೂ 2028 ರ ನಡುವೆ ಹಸಿವೆಯೆಂಬುದು ಇರುವುದೇ ಇಲ್ಲವಂತೆ.ಇದಲ್ಲದೆ ಆಕೆಯ ಭವಿಷ್ಯವಾಣಿಯು ಮಾನವರು ಶುಕ್ರ ಗ್ರಹಕ್ಕೆ ತೆರಳಿ ಅಲ್ಲೊಂದು ಕಾಲನಿಯನ್ನು ಸೃಷ್ಟಿ ಮಾಡುತ್ತಾರೆಂದೂ, ಅಮೇರಿಕಾ ಕ್ರಿಷ್ಚಿಯಾನಿಟಿಯನ್ನು ಹಾಗೂ ರೋಮ್ ನ ಮತ್ತೆ ತರಲು 2066 ರಲ್ಲಿ ISIS ಮೇಲೆ ಆಕ್ರಮಣ ಮಾಡುತ್ತದೆ ಎಂದೂ,2130 ರಲ್ಲಿ ಏಲಿಯನ್ಸ್ ಸಹಾಯದಿಂದ ಮಾನವರು ನೀರಿನ ಅಡಿಯಲ್ಲಿ ವಾಸಿಸಲು ಆರಂಭಿಸುತ್ತಾರೆಂದೂ ಹಾಗೂ 3797 ರಲ್ಲಿ ಸಂಪೂರ್ಣ ಭೂಮಿ ಕೊನೆಗೊಳ್ಳುತ್ತದೆ ಎಂದೂ ತನ್ನ ಭವಿಷ್ಯವಾಣಿಯಲ್ಲಿ ನುಡಿದಿದ್ದಾಳಂತೆ.
ಕಾಲಾಯ ತಸ್ಮೈ ನಮ: ಎಂಬಂತೆ ಈಕೆಯ ಭವಿಷ್ಯವಾಣಿ ಎಲ್ಲಿಯ ತನಕ ನಿಜವಾಗುತ್ತದೋ ಕಾಲವೇ ಉತ್ತರ ಹೇಳಬೇಕಷ್ಟೇ!!!!!!!
Like us on Facebook The New India Times
POPULAR STORIES :
ತಂಬಾಕು ಸೇವನೆಯಿಂದ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಮಂದಿ ಸಾವು..!
2000 ನೋಟಿನಲ್ಲಿ ತಪ್ಪು ಕಂಡು ಹಿಡಿದವರ್ಯಾರು..?
ಹಳೆಯ ನೋಟು ಕೊಟ್ಟು ವಿದ್ಯುತ್ ಬಿಲ್ ಪಾವತಿಸಿ: ಡಿಕೆಶಿ
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!
ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!