ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

Date:

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ರೋಸ್ ವಾಟರ್ ಅಥವಾ ಗುಲಾಬಿ ನೀರು ಚರ್ಮದ ಆರೈಕೆಗೆ ಅತ್ಯುತ್ತಮವಾದ ನೈಸರ್ಗಿಕ ಉಪಚಾರಗಳಲ್ಲಿ ಒಂದಾಗಿದೆ. ಇದು ಚರ್ಮವನ್ನು ತೇವಾಂಶದಿಂದ ತುಂಬಿ ಶುಷ್ಕತೆ ನಿವಾರಿಸುತ್ತದೆ.

ಚಳಿಗಾಲದ ಸಮಯದಲ್ಲಿ ಅಥವಾ ಚರ್ಮ ಒಣಗುವ ಸಂದರ್ಭಗಳಲ್ಲಿ ರೋಸ್ ವಾಟರ್ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ.

ಬೇಸಿಗೆಯಲ್ಲಿ ಮುಖದ ಮೇಲೆ ರೋಸ್ ವಾಟರ್ ಹಚ್ಚುವುದರಿಂದ ತಂಪು ಅನುಭವವಾಗುತ್ತದೆ ಮತ್ತು ಚರ್ಮದ ಕಿರಿಕಿರಿ, ದದ್ದು ಅಥವಾ ಉರಿಯೂತ ನಿವಾರಣೆಯಾಗುತ್ತದೆ. ರೋಸ್ ವಾಟರ್ ಒಂದು ಉತ್ತಮ ನೈಸರ್ಗಿಕ ಟೋನರ್ ಆಗಿದ್ದು, ಚರ್ಮವನ್ನು ಸ್ವಚ್ಛವಾಗಿ ಇಡಲು ಹಾಗೂ ಮೊಡವೆಗಳನ್ನು ಕಡಿಮೆ ಮಾಡಲು ಸಹಕಾರಿ. ಇದರಲ್ಲಿ ಇರುವ ನಂಜುನಿರೋಧಕ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಚರ್ಮವನ್ನು ಯೌವ್ವನದಿಂದ ಇಡುತ್ತವೆ, ಸುಕ್ಕುಗಳ ಪ್ರಮಾಣವನ್ನು ಕಡಿಮೆ ಮಾಡುತ್ತವೆ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತವೆ.

ಆದರೆ ಕೆಲವರಿಗೆ ರೋಸ್ ವಾಟರ್ ಅನಾನುಕೂಲವಾಗಬಹುದು. ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಇದರಿಂದ ಕಿರಿಕಿರಿ ಅಥವಾ ದದ್ದು ಉಂಟಾಗುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ದೊರೆಯುವ ನಕಲಿ ಅಥವಾ ರಾಸಾಯನಿಕಯುಕ್ತ ರೋಸ್ ವಾಟರ್‌ಗಳು ಚರ್ಮಕ್ಕೆ ಹಾನಿ ಮಾಡಬಹುದು. ಆದ್ದರಿಂದ ಖಚಿತವಾದ ನೈಸರ್ಗಿಕ ಉತ್ಪನ್ನವನ್ನು ಬಳಸುವುದು ಮುಖ್ಯ. ಎಲ್ಲ ರೀತಿಯ ಚರ್ಮಕ್ಕೂ ರೋಸ್ ವಾಟರ್ ಸೂಕ್ತವಲ್ಲ — ತುಂಬಾ ಎಣ್ಣೆಯುಕ್ತ ಅಥವಾ ತುಂಬಾ ಒಣ ಚರ್ಮವಿರುವವರು ಬಳಸುವ ಮೊದಲು ಪರೀಕ್ಷಿಸಿಕೊಳ್ಳುವುದು ಒಳಿತು.

ರೋಸ್ ವಾಟರ್ ಅನ್ನು ಮನೆಯಲ್ಲಿ ತಯಾರಿಸುವುದೂ ತುಂಬಾ ಸುಲಭ. ಕೆಲ ಗುಲಾಬಿ ಎಸಲುಗಳನ್ನು ತೆಗೆದುಕೊಂಡು ಉಗುರುಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನಂತರ ಅವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ, ಸ್ವಲ್ಪ ಪ್ರಮಾಣದ ಡಿಸ್ಟಿಲ್ಡ್ ವಾಟರ್ ಸೇರಿಸಿ. ಮಧ್ಯಮ ಉರಿಯಲ್ಲಿ ಕುದಿಯುವವರೆಗೆ ಮಚ್ಚಳ ಮುಚ್ಚಿ ಬಿಡಿ. ಎಸಲುಗಳು ಬಣ್ಣ ಬಿಡುತ್ತಿದ್ದಂತೆಯೇ ಸೋಸಿ, ಆ ದ್ರಾವಣವನ್ನು ಗಾಜಿನ ಬಾಟಲಿಯಲ್ಲಿ ಸುರಿದು ತಂಪಾದ, ಒಣ ಸ್ಥಳದಲ್ಲಿ ಸಂಗ್ರಹಿಸಿ. ಹೀಗೆ ಮನೆಯಲ್ಲೇ ತಯಾರಿಸಿದ ರೋಸ್ ವಾಟರ್ ನೈಸರ್ಗಿಕವಾಗಿದ್ದು, ಚರ್ಮದ ಆರೈಕೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಎನ್ನಲಾಗಿದೆ.

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಇಡೀ...