ಬಿಗ್‍ಬಾಸ್ ಮನೆಯಲ್ಲಿ ಪ್ರಥಮ್ ವರ್ತನೆಯಿಂದ ಬೇಜಾರಾಗ್ದೆ ಇರೋರು ಯಾರೂ ಇಲ್ಲ. ಈ ಬಗ್ಗೆ ಮನೆಯ ಸದಸ್ಯರೆಲ್ಲಾ ಬಿಗ್‍ಬಾಸ್ ಬಳಿ ಹಾಗೂ ಕಿಚ್ಚ ಸುದೀಪ್ ಬಳಿ ಹೇಳಿಕೊಂಡಿದ್ದೂ ಇದೆ.
ಮೊದಲ ದಿನದಿಂದಲೂ ಈ ಪ್ರಥಮ್ ಹೆಚ್ಚಾಗಿ ಕಿರಿಕ್ ಮಾಡಿಕೊಳ್ತಾ ಇರೋದು ಕಿರಿಕ್ ಕೀರ್ತಿ ಜೊತೆ.
ಪ್ರಥಮ್ ಜೊತೆ ಅದೆಷ್ಟೇ ಜಗಳ ಆದ್ರೂ ಕಿರಿಕ್ ಕೀರ್ತಿ ಮಾತ್ರ ಅದೆಷ್ಟೋ ಬಾರಿ ಪ್ರಥಮ್ ಪರವಾಗಿಯೇ ಮಾತಡಿದ್ದೂ ಇದೆ. ಪ್ರಥಮ್ ಕಳೆದ ವಾರ ತನ್ನ ವರ್ತನೆ ಬದಲಾಯಿಸಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಕಿರಿಕ್ ಕೀರ್ತಿ. ಆದರೇ ಪ್ರಥಮ್ ತಾನು ಯಾವತ್ತು ಬದಲಾಗಲ್ಲ ಎನ್ನೋದನ್ನು ಮತ್ತೆ ತೋರಿಸಿದ್ದಾನೆ..!
ಕೀರ್ತಿಕುಮಾರ್ (ಕೀರ್ತಿ ಶಂಕರ ಘಟ್ಟ) ಅಲಿಯಾಸ್ ಎಲ್ಲರ ಪ್ರೀತಿಯ ಕಣ್ಮಣಿ ಕಿರಿಕ್ ಕೀರ್ತಿ ಕಣ್ಣಲ್ಲಿ ನೀರು ಹಾಕಿಸಿದ್ದಾನೆ ಪ್ರಥಮ್..!
ಹೌದು, ಕಿರಿಕ್ ಕೀರ್ತಿ ಬಿಗ್‍ಬಾಸ್ ಮನೆಯಲ್ಲಿ ಅತ್ತಿದ್ದಾರೆ. ಸತತ ಎರಡು ಗಂಟೆ ಕಣ್ಣೀರಾಕಿದ್ದಾರೆ ಎಂದು ತಿಳಿದು ಬಂದಿದೆ..!
ಆಕಸ್ಮಿಕವಾಗಿ ಕೀರ್ತಿ ಜಾರಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಪೆಟ್ಟು ಮಾಡಿಕೊಂಡ ಕೀರ್ತಿ ಅವರಿಗೆ ಬ್ಯಾಂಡೇಜ್ ಮಾಡಲಾಗಿದೆ. ಬಿಗ್ ಬಾಸ್ ಕನ್ಫೆಷನ್ ರೂಂಗೆ ಕೀರ್ತಿಯವರನ್ನು ಕರೆದು ಆರೋಗ್ಯ ವಿಚಾರಿಸಿ ಕಳುಹಿಸಿದ್ದಾರೆ. ಬಳಿಕ ಕೀರ್ತಿ ಕನ್ಫೆಷನ್ ರೂಂ ನಿಂದ ಆಚೆ ಬಂದಾಗ ಪ್ರಥಮ್ ಕೀರ್ತಿಗೆ ಬಾಯಿಗೆ ಬಂದಹಾಗೆ ತನ್ನ ಆಂಗಿಕ ಅಭಿನಯ, ಮಾತಿನ ಮೂಲಕ ಹಂಗಿಸಿದ್ದಾರೆ. ಇದಾಗಲೇ ತಲೆಗೆ ಪೆಟ್ಟು ಮಾಡಿಕೊಂಡು ನೋವಿನಲ್ಲಿದ್ದ ಕಿರಿಕ್ ಕೀರ್ತಿಗೆ ಪ್ರಥಮನ ಮಾತಿನಿಂದ ಕಲ್ಮಶವಿಲ್ಲದ ಮನಸ್ಸಿನ ಭಾವನಾತ್ಮಕ ವ್ಯಕ್ತಿ ಕೀರ್ತಿ ಕಣ್ಣೀರಾಕಿದ್ದಾರೆ. ಪ್ರಥಮ್ ಎಂಬ ವಿಚಿತ್ರ ಪುರುಷ ಅದೆಂಥಾ ನೋವುಂಟಾಗುವ ಮಾತನಾಡಿ ಸಂಘ ಜೀವಿ ಕೀರ್ತಿಯ ಕಣ್ಣಲ್ಲಿ ನೀರನ್ನಾಕಿಸಿದ್ದಾನೆ? ಕೀರ್ತಿ ಅಳುವಿಗೆ ಕಾರಣವೇನು ಎಂದು ತಿಳಿಯಲು ಕಲರ್ಸ್ ಕನ್ನಡ ಆ ಘಟನೆಯನ್ನು ಟೆಲಿಕಾಸ್ಟ್ ಮಾಡೋ ತನಕ ಕಾಯಲೇಬೇಕು.
Like us on Facebook The New India Times
POPULAR STORIES :
30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?
ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ
2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ
ನ್ಯೂಜಿಲ್ಯಾಂಡ್‍ನಲ್ಲಿ 7.8 ತೀವ್ರತೆಯ ಭೂಕಂಪ : ಸುನಾಮಿ ಎಚ್ಚರಿಕೆ
2000 ನೋಟಿನಲ್ಲಿ ತಪ್ಪು ಕಂಡು ಹಿಡಿದವರ್ಯಾರು..?
ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!