ಬಿಗ್‍ಬಾಸ್ ಸೀಸನ್ 4ನ ಮೋಸ್ಟ್ ಕಾಂಟ್ರವರ್ಷಿಯಲ್ ಕಂಟೆಸ್ಟೆಂಟ್ ಒಳ್ಳೆ ಹುಡ್ಗ ಪ್ರಥಮ್ ಮೇಲೆ ಬಿಗ್‍ಬಾಸ್ ಟಾಸ್ಕ್ ಒಂದರಲ್ಲಿ ಭಾಗವಹಿಸಿದ್ದ ಯೂಟ್ಯೂಬ್ ಕಿಂಗ್ ಹುಚ್ಚ ವೆಂಕಟ್ ಹಲ್ಲೆ ನಡೆಸಿದ ದೃಶ್ಯ ಇಡೀ ರಾಜ್ಯದಲ್ಲಿ ವೈರಲ್ಲಾಗಿ ಹರಡಿದೆ. ಆದ್ರೆ ಪ್ರಥಮ್ ಮೇಲೆ ಹಲ್ಲೆ ಮಾಡಿದ್ದನ್ನ ಯಾರು ಖಂಡಿಸಿದ್ರೋ ಬಿಟ್ರೋ ಬಿಗ್‍ಬಾಸ್‍ನ ನಿರೂಪಕ ಕಿಚ್ಚ ಸುದೀಪ್ ತೀವ್ರವಾಗಿ ಖಂಡಿಸಿದ್ದಾರೆ.ಮಂಗಳವಾರದಂದು ಪ್ರಸಾರವಾದ ಬಿಗ್‍ಬಾಸ್ ಕಾರ್ಯಕ್ರಮವೊಂದರಲ್ಲಿ ಮನೆಯೊಳಗೆ ಎಂಟ್ರಿಕೊಟ್ಟ ಹುಚ್ಚಾ ವೆಂಕಟ್ ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಖಂಡಿಸಿರುವ ಸುದೀಪ್ ಹುಚ್ಚಾ ವೆಂಕಟ್ ಅವರ ನಡವಳಿಕೆಯಿಂದ ಮನಸ್ಸಿಗೆ ತುಂಬಾ ಬೇಸರವಾಗಿದೆ. ಹುಚ್ಚಾ ವೆಂಕಟ್ ಅವರ ಈ ನಡವಳಿಕೆ ಕ್ಷಮಿಸುವಂತದಲ್ಲ ಎಂದು ಹೇಳಿರುವ ಅವರು ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಿದ್ದೇನೆ ಎಂದು ಸುದೀಪ್ ಟ್ವಿಟರ್ ಮೂಲಕ ಟ್ವೀಟ್ ಮಾಡಿದ್ದಾರೆ.
ಕಳೆದ ಬಿಗ್‍ಬಾಸ್ ಸೀಸನ್-3ನ ಸದಸ್ಯರಲ್ಲಿ ಒಬ್ಬರಾಗಿದ್ದ ಹುಚ್ಚಾ ವೆಂಕಟ್ ರವಿ ಮುರೂರು ಅವರ ಮೇಲೆ ಹಲ್ಲೆ ನಡೆಸಿ ಸೀಸನ್‍ನಿಂದಲೇ ಹೊರಗುಳಿಯಬೇಕಾಗಿತ್ತು.. ಇಷ್ಟೆಲ್ಲಾ ಆವಾಂತರ ನಡೆಸಿದ್ದ ಹುಚ್ಚಾ ವೆಂಕಟ್ ಅವರಿಗೆ ಈ ಬಾರಿಯೂ ಸಹ ಕೆಲವು ಷರತ್ತುಗಳನ್ನು ವಿಧಿಸಿ ಮನೆಯೊಳಗೆ ಪ್ರವೇಶ ನೀಡಿದ್ರು.. ಆದ್ರೆ ಅವರು ಯಾವ ರೂಲ್ಸ್ ಗಳಿಗೂ ಬೆಲೆ ನೀಡದೇ ಪ್ರಥಮ್ ಮೇಲೆ ಕೈ ಮಾಡಿದ್ದಾರೆ..! ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸುದೀಪ್ ಪ್ರಥಮ್ ಮೇಲಿನ ಹಲ್ಲೆ ನ್ಯಾಯ ಸಮ್ಮತವಾದದಲ್ಲ. ಇದಕ್ಕೆ ನ್ಯಾಯ ಸಿಗುವವರೆಗೂ ನಾನು ನಿರೂಪಕನಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಕಟುವಾಗಿ ಎಚ್ಚರಿಸಿದ್ದಾರೆ. ಪ್ರಥಮ್ ಮೇಲೆ ಕೈಮಾಡಿದ ಆತನಿಗೆ ಶಿಕ್ಷೆಯಾಗುವವರೆಗೂ ನಾನು ನಿರೂಪಕನಾಗಿ ಬರಲಾರೆ ಎಂದು ಟ್ವೀಟ್ ಮಾಡಿದ್ದಾರೆ..!
Like us on Facebook The New India Times
POPULAR STORIES :
30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?
ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!
ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ
2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ