ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.

admin
By admin
1 Min Read

500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳನ್ನು ಬ್ಯಾನ್ ಮಾಡಿ ಹೊಸ ನೋಟು ಚಲಾವಣೆ ತಂದ ನಂತರ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಜನರು ಸಾಲು ಸಾಲುಗಟ್ಲೆ ಕ್ಯೂ ನಿಂತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸೊ ನಿಟ್ಟಿನಲ್ಲಿನ ಕೇಂದ್ರ ಸರ್ಕಾರ ಹಲವಾರು ಮಾರ್ಗಗಳನ್ನು ಕಂಡುಕೊಳ್ತಾನೆ ಬರ್ತಾ ಇದ್ದು ಇದೀಗ ಪೆಟ್ರೋಲ್ ಬಂಕ್‍ಗಳಲ್ಲೂ ಹಣ ವಿತರಣೆ ಮಾಡಲು ಮುಂದಾಗಿದೆ..!
ಜನಸಾಮಾನ್ಯರಿಗೆ ತಲೆದೋರಿರುವ ಸಮಸ್ಯೆಯನ್ನ ನಿವಾರಿಸೊ ನಿಟ್ಟಿನಲ್ಲಿ ದೇಶದ ಸುಮಾರು 2,500 ಪೆಟ್ರೋಲ್ ಬಂಕ್‍ಗಳಲ್ಲಿ ಹಣ ವಿತರಣೆ ಮಾಡುವುದಾಗಿ ತಿಳಿಸಿದೆ. ತಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್‍ಗಳನ್ನು ಸ್ವೈಪ್ ಮಡುವ ಮೂಲಕ ಆಯಾ ಪೆಟ್ರೋಲ್ ಬಂಕ್‍ಗಳಲ್ಲಿ ದಿನಕ್ಕೆ 2000 ವಿತ್ ಮಾಡುವ ಅವಕಾಶ ಕಲ್ಪಿಸಲಾಗಿದೆ..
ಈ ಕುರಿತು ಕೇಂದ್ರ ಸರ್ಕಾರ ಒಡೆತನದ ದೂರದರ್ಶನ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, ಜನರ ಸಮಸ್ಯೆಯನ್ನು ದೂರವಾಗಿಸಲು ಆಯ್ದ ಪೆಟ್ರೋಲ್ ಬಂಕ್ ದಿನಕ್ಕೆ 2000 ಹಣವನ್ನು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್‍ಗಳ ಮುಖಾಂತರ ವಿತ್ ಡ್ರಾ ಮಾಡಬಹುದು ಎಂದು ತಿಳಿಸಿದ್ದಾರೆ. ಈಗ ಸದ್ಯಕ್ಕೆ ಕೇವಲ 2,500 ಪೆಟ್ರೋಲ್ ಬಂಕ್‍ಗಳಿಗೆ ಮಾತ್ರ ಈ ಯೋಜನೆ ಜಾರಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸುಮಾರು 20 ಸಾವಿರ ಪೆಟ್ರೋಲ್ ಬಂಕ್‍ಗಳಿಗೆ ವಿಸ್ತರಿಸುವ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿವೆ.

Like us on Facebook  The New India Times

POPULAR  STORIES :

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

Share This Article