ಬಿಗ್‍ಬಾಸ್ ಸೀಸನ್-4 ನಲ್ಲಿ ಸ್ಪರ್ಧಾಳು ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದ ಹುಚ್ಚಾ ವೆಂಕಟ್ ಇಂದು ಕಲರ್ಸ್ ಕನ್ನಡ ವಾಹಿನಿ ಮತ್ತು ಕಿಚ್ಚ ಸುದೀಪ್ ಅವರಿಗೆ ಕ್ಷಮೆ ಯಾಚಿಸಿದ್ದಾರೆ. ಕಳೆದ ಮಂಗಳವಾರದಂದು ಪ್ರಸಾರವಾಗಿದ್ದ ಬಿಗ್‍ಬಾಸ್ ಕಾರ್ಯಕ್ರಮದ ಸ್ಪೆಷಲ್ ಟಾಸ್ಕ್ ನಲ್ಲಿ ಭಾಗವಹಿಸಿದ್ದ ಹುಚ್ಚಾ ವೆಂಕಟ್ ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದ್ರು. ಇದೇ ವೇಳೆ ಸ್ಪರ್ಧಾಳು ಪ್ರಥಮ್ ಮೇಲೆ ಹಲ್ಲೆಯನ್ನೂ ಕೂಡ ಮಾಡಿದ್ರು. ಹುಚ್ಚಾ ವೆಂಕಟ್ ಅವರ ಈ ನಡೆಯನ್ನು ತೀರ್ವವಾಗಿ ಖಂಡಿಸಿದ್ದ ನಿರೂಪಕ ಕಿಚ್ಚ ಸುದೀಪ್ ಹುಚ್ಚಾ ವೆಂಕಟ್ ವಿರುದ್ದ ಕ್ರಮ ಕೈಗೊಳ್ಳೊವರೆಗೂ ನಿರೂಪಕನಾಗಿ ಬರೋದಿಲ್ಲ ಎಂದು ತಿಳಿಸಿದ್ದರು. ಆದರೆ ಇಂದು ಈ ಕುರಿತು ಪ್ರತಿಕ್ರಿಯೆ ನೀಡಿರುವ ಹುಚ್ಚಾ ವೆಂಕಟ್ ನನ್ನಿಂದ ಸುದೀಪ್ ಅವರು ಕಾರ್ಯಕ್ರಮಕ್ಕೆ ಪಾಲ್ಗೊಳ್ಳದಿರುವುದು ಸರಿಯಲ್ಲ. ನಾನು ಮಾಡಿದ್ದು ನನಗೆ ಸರಿ ಅನ್ನಿಸಿದರೂ ಕೂಡ ಇಂದು ನಾನು ಕ್ಷಮೆ ಕೇಳಲಿದ್ದೇನೆ. ನಾನು ಹೊಡೆದದ್ದು ಕೆಟ್ಟ ವ್ಯಕ್ತಿಯನ್ನ ಹೀಗಾಗಿ ನಾನು ಸರಿಯಾಗಿಯೇ ಮಾಡಿದ್ದೇನೆ ಎಂಬ ಭಾವನೆ ನನಗಿದೆ. ಆದರೂ ತಾಳ್ಮೆ ಕಳೆದುಕೊಂಡು ನಾನು ಮಾಡಿದ ತಪ್ಪಿಗೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ. ಈ ಮೂಲಕ ಹುಚ್ಚಾ ವೆಂಕಟ್ ಬಿಗ್ ಟ್ವಿಸ್ಟ್ ನೀಡಿದ್ದಾರೆ.
Like us on Facebook The New India Times
POPULAR STORIES :
ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.
ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!
30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?
ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!
ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ
2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ