ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್ ಜಾಮೀನು ಅರ್ಜಿ ವಜಾ

Date:

ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್ ಜಾಮೀನು ಅರ್ಜಿ ವಜಾ

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ಫೆಬ್ರವರಿ 10ರಂದು ವಜಾಗೊಳಿಸಿದೆ. ಇದರಿಂದ ಶಾಸಕರ ಬಂಧನದ ಭೀತಿ ಮತ್ತಷ್ಟು ಹೆಚ್ಚಾಗಿದೆ.
ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಬೈರತಿ ಬಸವರಾಜ್ ವಿದೇಶಕ್ಕೆ ಪರಾರಿಯಾಗುವ ಶಂಕೆ ಹಿನ್ನೆಲೆಯಲ್ಲಿ ಅವರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಯಲ್ಲಿದೆ. ಸಿಐಡಿ ಪೊಲೀಸರು ಹೊರರಾಜ್ಯಗಳ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿ, ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಳೆದ ವರ್ಷ ಜುಲೈ 15ರಂದು ಬೆಂಗಳೂರಿನ ಹಲಸೂರಿನಲ್ಲಿ ನಡೆದ ಬಿಕ್ಲು ಶಿವ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರೌಡಿ ಜಗದೀಶ್ ಅಲಿಯಾಸ್ ಜಗ್ಗನೊಂದಿಗೆ ಶಾಸಕ ಬಸವರಾಜ್ಗೆ ನೇರ ಸಂಪರ್ಕವಿತ್ತು ಎನ್ನಲಾಗಿದೆ. ಹತ್ಯೆಗೆ ಮೊದಲು ಹಲವು ಬಾರಿ ಇಬ್ಬರೂ ಭೇಟಿಯಾಗಿದ್ದರೆಂಬ ಮಾಹಿತಿ ಸಿಐಡಿ ಬಳಿ ಲಭ್ಯವಿದ್ದು, ಪ್ರಮುಖ ಸಾಕ್ಷ್ಯಾಧಾರಗಳ ಆಧಾರದಲ್ಲಿ ಶಾಸಕರನ್ನು ಬಂಧಿಸಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

Share post:

Subscribe

spot_imgspot_img

Popular

More like this
Related

ಮಹಿಳಾ ಸಹೋದ್ಯೋಗಿಗೆ ಕಿರುಕುಳ ಆರೋಪ: ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಬಂಧನ

ಮಹಿಳಾ ಸಹೋದ್ಯೋಗಿಗೆ ಕಿರುಕುಳ ಆರೋಪ: ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಬಂಧನ ಬೆಂಗಳೂರು: ಮಹಿಳಾ...

ಐಟಿ ದಿಗ್ಗಜ ಒರಾಕಲ್ ನಲ್ಲಿ ಭಾರಿ ಲೇಆಫ್: ಭಾರತದಲ್ಲಿ 12 ಸಾವಿರ ಸಿಬ್ಬಂದಿ ವಜಾ

ಐಟಿ ದಿಗ್ಗಜ ಒರಾಕಲ್ ನಲ್ಲಿ ಭಾರಿ ಲೇಆಫ್: ಭಾರತದಲ್ಲಿ 12 ಸಾವಿರ ಸಿಬ್ಬಂದಿ...

ಈ ದಿನದಂದು ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆ: ಯಾವೆಲ್ಲೆಡೆ ಮಳೆ ಸಾಧ್ಯತೆ?

ಈ ದಿನದಂದು ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆ: ಯಾವೆಲ್ಲೆಡೆ ಮಳೆ...

ಒಂದು ಕಪ್ ‘ಕಾಫಿ’ ಕುಡಿಯುವುದರಿಂದ ಸಿಗುವ ಲಾಭಗಳೇನು ಗೊತ್ತಾ?

ಒಂದು ಕಪ್ ‘ಕಾಫಿ’ ಕುಡಿಯುವುದರಿಂದ ಸಿಗುವ ಲಾಭಗಳೇನು ಗೊತ್ತಾ? ನಮ್ಮ ದೈನಂದಿನ ಜೀವನದಲ್ಲಿ...