No menu items!
19.6 C
Munich
Friday, May 1, 2026

ಬ್ರೇಕಪ್ ಬಗ್ಗೆ ಆಡಿಯೋ ವೈರಲ್: ತಪ್ಪು ಮಾಹಿತಿ ಹರಡಿದರೆ ಕಾನೂನು ಕ್ರಮ – ರಶ್ಮಿಕಾ ಗರಂ

Must read

ಬ್ರೇಕಪ್ ಬಗ್ಗೆ ಆಡಿಯೋ ವೈರಲ್: ತಪ್ಪು ಮಾಹಿತಿ ಹರಡಿದರೆ ಕಾನೂನು ಕ್ರಮ – ರಶ್ಮಿಕಾ ಗರಂ

ನಟಿ ರಶ್ಮಿಕಾ ಮಂದಣ್ಣ ತಾಯಿ ಸುಮನ್ ಮಂದಣ್ಣ ಅವರ ಆಡಿಯೋ ವೈರಲ್ ಆದ ಹಿನ್ನೆಲೆ ಹೊಸ ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ರಶ್ಮಿಕಾ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದಾರೆ.
ಸುಮಾರು 8 ವರ್ಷಗಳಿಂದ ತಪ್ಪು ಮಾಹಿತಿ ಹಾಗೂ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಹೇಳಿರುವ ರಶ್ಮಿಕಾ, ಇಷ್ಟು ದಿನ ಮೌನದಿಂದಲೇ ಪ್ರತಿಕ್ರಿಯೆ ನೀಡುತ್ತಿದ್ದೆ ಎಂದು ತಿಳಿಸಿದ್ದಾರೆ.
ಅನುಮತಿ ಇಲ್ಲದೆ ಮಾತುಕತೆಯನ್ನು ರೆಕಾರ್ಡ್ ಮಾಡಿ ಹರಡಲಾಗಿದೆ. ಅಲ್ಲದೆ ಸಂಭಾಷಣೆಯ ಒಂದು ಭಾಗವನ್ನು ಮಾತ್ರ ಕಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಇದರಿಂದ ಹೊಸ ವಿವಾದ ಸೃಷ್ಟಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಪ್ಪು ಮಾಹಿತಿ ಹರಡುತ್ತಿರುವ ಇನ್ಫ್ಲುವೆನ್ಸರ್ಗಳು, ಮೀಡಿಯಾ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಉದ್ದೇಶಿಸಿ ಮಾತನಾಡಿರುವ ರಶ್ಮಿಕಾ, ವೈರಲ್ ಆಗಿರುವ ಪೋಸ್ಟ್ಗಳು ಮತ್ತು ವಿಡಿಯೋಗಳನ್ನು 24 ಗಂಟೆಗಳೊಳಗೆ ತೆಗೆದುಹಾಕುವಂತೆ ಎಚ್ಚರಿಕೆ ನೀಡಿದ್ದಾರೆ.
ಸೂಚನೆಯ ಬಳಿಕವೂ ಪೋಸ್ಟ್ಗಳು ಮತ್ತು ವಿಡಿಯೋಗಳನ್ನು ತೆಗೆದುಹಾಕದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ. 8 ವರ್ಷಗಳ ಕಾಲ ಮೌನವಾಗಿದ್ದೆ, ಆದರೆ ಈಗ ಸ್ಪಷ್ಟ ಗಡಿ ಹಾಕುತ್ತಿದ್ದೇನೆ ಎಂದು ರಶ್ಮಿಕಾ ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article