ಆಪರೇಷನ್ ಕಮಲ ಭೀತಿ: ಅಸ್ಸಾಂ ಕಾಂಗ್ರೆಸ್ ಶಾಸಕರು ರಾಮನಗರ ರೆಸಾರ್ಟ್‌ಗೆ ಶಿಫ್ಟ್

Date:

ಆಪರೇಷನ್ ಕಮಲ ಭೀತಿ: ಅಸ್ಸಾಂ ಕಾಂಗ್ರೆಸ್ ಶಾಸಕರು ರಾಮನಗರ ರೆಸಾರ್ಟ್‌ಗೆ ಶಿಫ್ಟ್

ರಾಮನಗರ: ಅಸ್ಸಾಂನಲ್ಲಿ ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಅಲ್ಲಿನ 10 ಮಂದಿ ಕಾಂಗ್ರೆಸ್ ಶಾಸಕರನ್ನು ರಾಮನಗರದ ಬಿಡದಿ ಸಮೀಪದ ರೆಸಾರ್ಟ್‌ಗಳಿಗೆ ಕರೆತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಶಾಸಕರನ್ನು ಇಲ್ಲಿ ಇರಿಸಲಾಗಿದೆ ಎನ್ನಲಾಗುತ್ತಿದೆ.

ಗುರುವಾರ ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಅಸ್ಸಾಂನ ಕಾಂಗ್ರೆಸ್ ಶಾಸಕರು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಬಳಿಕ ಕಾಂಗ್ರೆಸ್ ಮುಖಂಡರು ಅವರನ್ನು ಎಂಟು ಇನ್ನೋವಾ ಕಾರುಗಳಲ್ಲಿ ಬಿಡದಿ ಸಮೀಪದ ವಂಡರ್ ಲಾ ಮತ್ತು ಈಗಲ್‌ಟನ್ ರೆಸಾರ್ಟ್‌ಗಳಿಗೆ ಕರೆದುಕೊಂಡು ಬಂದರು.

ರೆಸಾರ್ಟ್‌ಗೆ ಆಗಮಿಸಿದ ಶಾಸಕರನ್ನು ಸ್ಥಳೀಯ ಕಾಂಗ್ರೆಸ್ ನಾಯಕರು ಹೂಹಾರ ಹಾಕಿ ಸ್ವಾಗತಿಸಿ, ಮುಂಚಿತವಾಗಿ ಕಾಯ್ದಿರಿಸಿದ್ದ ಕೊಠಡಿಗಳಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಮಾಡಿದರು.

ರೆಸಾರ್ಟ್ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಡಿ.ಕೆ. ಶಿವಕುಮಾರ್ ಅವರ ಆಪ್ತ ಕಾಂಗ್ರೆಸ್ ಮುಖಂಡರಿಗೆ ಮಾತ್ರ ರೆಸಾರ್ಟ್ ಪ್ರವೇಶ ನೀಡಲಾಗಿದೆ ಎಂದು ತಿಳಿದುಬಂದಿದೆ.

ಅಸ್ಸಾಂ ವಿಧಾನಸಭೆ ಚುನಾವಣೆಯು ಮುಂದಿನ ಕೆಲವು ತಿಂಗಳಲ್ಲಿ ನಡೆಯುವ ಸಾಧ್ಯತೆ ಇದ್ದು, ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಕಾಂಗ್ರೆಸ್‌ನ ಕೆಲ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ವದಂತಿ ಹರಡಿರುವ ಹಿನ್ನೆಲೆಯಲ್ಲಿ ಅಲ್ಲಿ ಪಕ್ಷಾಂತರ ರಾಜಕೀಯ ಚಟುವಟಿಕೆಗಳು ಹೆಚ್ಚಾಗಿವೆ. ಈಗಾಗಲೇ ಕೆಲವು ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಅಸ್ಸಾಂ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್, ಇನ್ನೂ ಕೆಲವು ಶಾಸಕರು ಬಿಜೆಪಿ ಸಂಪರ್ಕಕ್ಕೆ ಹೋಗುವ ಸಾಧ್ಯತೆ ಇರುವುದರಿಂದ ಅವರನ್ನು ಸುರಕ್ಷಿತವಾಗಿ ಇರಿಸಲು ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Share post:

Subscribe

spot_imgspot_img

Popular

More like this
Related

ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರಂತೆ ನಟಿ ಅನುಷ್ಕಾ ನಟಿ!

Anushka Shetty: ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರಂತೆ ನಟಿ ಅನುಷ್ಕಾ ನಟಿ! ಸೌತ್ ಇಂಡಿಯಾದ...

ಮಹಿಳೆಯರ ಆರೋಗ್ಯಕ್ಕಾಗಿ ದಿನನಿತ್ಯ ಪಾಲಿಸಬೇಕಾದ 7 ಸರಳ ಅಭ್ಯಾಸಗಳು

ಮಹಿಳೆಯರ ಆರೋಗ್ಯಕ್ಕಾಗಿ ದಿನನಿತ್ಯ ಪಾಲಿಸಬೇಕಾದ 7 ಸರಳ ಅಭ್ಯಾಸಗಳು ಮಹಿಳೆಯರ ಜೀವನ ಕಾರ್ಯಭಾರಗಳಿಂದ...

ಗಾಂಜಾ ಅಮಲಿನಲ್ಲಿ ಆಟೋ ಚಾಲನೆ: ಸರಣಿ ಡಿಕ್ಕಿ, ಚಾಲಕನಿಗೆ ಸಾರ್ವಜನಿಕರ ಧರ್ಮದೇಟು

ಗಾಂಜಾ ಅಮಲಿನಲ್ಲಿ ಆಟೋ ಚಾಲನೆ: ಸರಣಿ ಡಿಕ್ಕಿ, ಚಾಲಕನಿಗೆ ಸಾರ್ವಜನಿಕರ ಧರ್ಮದೇಟು ಹಾಸನ:...

ಹೋಟೆಲ್ ಬಿಲ್‌ʼಗಳಲ್ಲಿ ಹೆಚ್ಚುವರಿ ಗ್ಯಾಸ್ ಶುಲ್ಕ ಸೇರ್ಪಡೆ: ಗ್ರಾಹಕರಿಂದ ಆಕ್ರೋಶ

ಹೋಟೆಲ್ ಬಿಲ್‌ʼಗಳಲ್ಲಿ ಹೆಚ್ಚುವರಿ ಗ್ಯಾಸ್ ಶುಲ್ಕ ಸೇರ್ಪಡೆ: ಗ್ರಾಹಕರಿಂದ ಆಕ್ರೋಶ ಬೆಂಗಳೂರು: ದೇಶಾದ್ಯಂತ...