ಕಳೆದ ಮೂರು ವರ್ಷಗಳಿಂದ ಭಾರತೀಯ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಖೋಟಾ ನೋಟು ಚಲಾವಣೆಯಾಗಿದ್ದು ಎಷ್ಟು ಗೊತ್ತೆ..?

Date:

ಸ್ವಲ್ಪ ಉಸಿರು ಬಿಗಿ ಇಡಿದು ಓದಿ ಯಾಕಂದ್ರೆ ನಮ್ಮ ಬ್ಯಾಂಕ್ ಹಾಗೂ ಎಟಿಎಂ ಮೆಷಿನ್‍ಗಳೇ ಖೋಟಾ ನೋಟು ವಿತರಣೆ ಮಾಡಿವೆ ಅದು ಅಷ್ಟಿಷ್ಟಲ್ಲ ಸುಮಾರು 14.97 ಕೋಟಿ ಮೌಲ್ಯದ ಬರೋಬ್ಬರಿ 19 ಲಕ್ಷ ನಕಲಿ ನೋಟು..! ಹೀಗೆಂದು ವರದಿ ನೀಡಿದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ).
ಇನ್ನು ಕಳೆದ ಮೂರು ವರ್ಷಗಳಲ್ಲಿ 100ರೂ ಮುಖಬೆಲೆಯ 54 ಲಕ್ಷ ಮುಖಬೆಲೆಯ ಒಟ್ಟು 5.42 ಲಕ್ಷ ನಕಲಿ ನೋಟುಗಳು, 500 ಮುಖಬೆಲೆಯ ರೂ.42.8 ಕೋಟಿ ಮೌಲ್ಯದ 8.56 ಲಕ್ಷ ನೋಟುಗಳು ಹಾಗೂ 47 ಕೋಟಿ ಮೌಲ್ಯದ 4.7 ಲಕ್ಷ 1000ರೂ. ಮುಖಬೆಲೆಯ ನಕಲಿ ನೋಟುಗಳು ಬ್ಯಾಂಕಿಂಗ್ ಮೂಲಕವೇ ವರ್ಗಾವಣೆಯಾಗ್ತಾ ಇತ್ತು ಎನ್ನಲಾಗ್ತಾ ಇದೆ..!
ವರದಿ ಪ್ರಕಾರ ಇದೇ ತಿಂಗಳ ಅಕ್ಟೋಬರ್‍ನಲ್ಲಿ ಕೆನರಾ ಬ್ಯಾಂಕ್ ಎಟಿಎಂ ಒಂದರಲ್ಲಿ 5000ರೂ. ಪಡೆಯುವಾಗ 500ರ ಮುಖಬೆಲೆಯ 9 ನಕಲಿ ನೋಟುಗಳು ಎಲ್‍ಐಸಿ ಉದ್ಯೋಗಿಯೊಬ್ಬರಿಗೆ ದೊರಕಿತ್ತು. ಪ್ರಸ್ತುತದ ನಿಯಮದ ಪ್ರಕಾರ ಹಣಕಾಸಿನ ವ್ಯವಹಾರ ಸಂಬಂಧ ಐದಕ್ಕಿಂತ ಹೆಚ್ಚು ಖೋಟಾ ನೋಟುಗಳು ಪತ್ತೆಯಾದರೆ ಮಾತ್ರ ಎಫ್‍ಐಆರ್ ದಾಖಲಿಸಲಾಗುತ್ತದೆ. ಇನ್ನು ನೋಟುಗಳು ನಿಜವೇ ನಕಲಿಯೇ ಎಂದು ಪತ್ತೆ ಹಚ್ಚುವ ಕರೆನ್ಸಿ ಮೆಷಿನ್‍ಗಳ ಅಗತ್ಯ ಹೆಚ್ಚಿದೆ ಎಂದು ಆರ್‍ಬಿಐ ತಿಳಿಸಿದೆ.

Like us on Facebook  The New India Times

POPULAR  STORIES :

ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮುಧುರೈ ದಂಪತಿ ಕೊರ್ಟ್‍ಗೆ ದೂರು..!

500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ

ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.

ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

Share post:

Subscribe

spot_imgspot_img

Popular

More like this
Related

ದಾವಣಗೆರೆಯ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ ನಿಧನ

ದಾವಣಗೆರೆಯ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ ನಿಧನ ದಾವಣಗೆರೆ: ಕಳೆದ ಕೆಲ...

ಕೆ.ಆರ್.ಪುರಂ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್: ಯುವತಿ ವಿಚಾರವಲ್ಲ, ಹವಾ ಮತ್ತು ಕಿರುಕುಳವೇ ಕಾರಣ – ವಿಚಾರಣೆಯಲ್ಲಿ ಸತ್ಯ ಬಯಲು

ಕೆ.ಆರ್.ಪುರಂ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್: ಯುವತಿ ವಿಚಾರವಲ್ಲ, ಹವಾ ಮತ್ತು...

ಸೋಮನಹಳ್ಳಿ ಟೋಲ್‌ ಪ್ಲಾಜಾದಲ್ಲಿ ಉಚಿತ ಪಾಸ್‌ ಆದೇಶಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ ತಡೆ

ಸೋಮನಹಳ್ಳಿ ಟೋಲ್‌ ಪ್ಲಾಜಾದಲ್ಲಿ ಉಚಿತ ಪಾಸ್‌ ಆದೇಶಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ...

ಕೇಂದ್ರ ಬಜೆಟ್ನಲ್ಲಿ ಮೂರು ‘ಸಿ’ಗಳು: ಕಂಟಿನ್ಯೂಯಿಟಿ, ಕ್ರೆಡಿಬಿಲಿಟಿ, ಕಮಿಟ್ಮೆಂಟ್ – ಛಲವಾದಿ ನಾರಾಯಣಸ್ವಾಮಿ

ಕೇಂದ್ರ ಬಜೆಟ್ನಲ್ಲಿ ಮೂರು ‘ಸಿ’ಗಳು: ಕಂಟಿನ್ಯೂಯಿಟಿ, ಕ್ರೆಡಿಬಿಲಿಟಿ, ಕಮಿಟ್ಮೆಂಟ್ – ಛಲವಾದಿ...