ನೋಟ್ ನಿಷೇಧ ಆದ ನವೆಂಬರ್ 8ರಿಂದ ಡಿಸೆಂಬರ್ 31ರವರೆಗೆ ತಮ್ಮ ಬ್ಯಾಂಕ್ ಖಾತೆಗಳ ಎಲ್ಲ ವಹಿವಾಟಿನ ವಿವರ ನೀಡಬೇಕೆಂದು ಬಿಜೆಪಿಯ ಎಲ್ಲ ಸಂಸದರು ಹಾಗೂ ಶಾಸಕರಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಜನವರಿ 2ರಷ್ಟರಲ್ಲಿ ಅಮಿತ್ ಶಾ ಬಳಿ ಈ ವಿವರ ಸಲ್ಲಿಸಬೇಕೆಂದು ಮೋದಿ ಆದೇಶಿಸಿದ್ದಾರೆ.
ನವೆಂಬರ್ 8ರಂದು ಪ್ರಧಾನಿ ಮೋದಿಯವರು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ನಿರ್ಧಾರ ಘೋಷಣೆ ಮಾಡಿದ್ದರು. ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆಯೇ ದಿಢೀರ್ ನೋಟ್ ನಿಷೇಧಿಸಿ ಜನಸಾಮಾನ್ಯರಿಗೆ ತೊಂದರೆ ನೀಡಲಾಗುತ್ತಿದೆ ಎಂಬುದು ವಿಪಕ್ಷಗಳ ಆಪಾದನೆಯಾಗಿದೆ. ಜೊತೆಗೆ, ನೋಟ್ ಬ್ಯಾನ್ ಕ್ರಮ ಘೋಷಣೆ ಮಾಡುವ ಸಾಕಷ್ಟು ಮುಂಚಿತವಾಗಿ ಬಿಜೆಪಿ ಹಾಗೂ ಆಪ್ತರಿಗೆ ಕಪ್ಪು ಹಣ ಬಿಳಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು ಎಂಬುದೂ ವಿರೋಧಿಗಳ ಆರೋಪವಾಗಿದೆ.
Like us on Facebook The New India Times
POPULAR STORIES :
ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮುಧುರೈ ದಂಪತಿ ಕೊರ್ಟ್‍ಗೆ ದೂರು..!
500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ
ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ