No menu items!
12.5 C
Munich
Monday, May 4, 2026

​ಪಂಚರಾಜ್ಯ ಸಮರ: ಯಾರಿಗೆ ಪಟ್ಟ? ಯಾರಿಗೆ ಸಂಕಷ್ಟ?

Must read

​ಪಂಚರಾಜ್ಯ ಸಮರ: ಯಾರಿಗೆ ಪಟ್ಟ? ಯಾರಿಗೆ ಸಂಕಷ್ಟ?

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದೆ. ಒಟ್ಟು 823 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ಮಧ್ಯಾಹ್ನದ ವೇಳೆಗೆ ಬಹುತೇಕ ಸ್ಪಷ್ಟವಾಗುವ ನಿರೀಕ್ಷೆಯಿದೆ.
ದೇಶದ ರಾಜಕೀಯ ದಿಕ್ಕು ನಿರ್ಧರಿಸುವ ಪ್ರಮುಖ ರಾಜ್ಯಗಳ ಫಲಿತಾಂಶಗಳಿಗೆ ದೇಶದಾದ್ಯಂತ ಕುತೂಹಲ ಹೆಚ್ಚಾಗಿದೆ. ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
ರಾಜ್ಯವಾರು ಕುತೂಹಲ
ಪಶ್ಚಿಮ ಬಂಗಾಳ:
294 ಸ್ಥಾನಗಳಿದ್ದು, ಬಹುಮತಕ್ಕೆ 148 ಸ್ಥಾನಗಳು ಅಗತ್ಯ. ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಬಿಜೆಪಿ ಭೇದಿಸುತ್ತದೆಯೇ ಎಂಬುದು ಮುಖ್ಯ ಪ್ರಶ್ನೆ.
ತಮಿಳುನಾಡು:
234 ಸ್ಥಾನಗಳಲ್ಲಿ 118 ಸ್ಥಾನಗಳು ಬಹುಮತಕ್ಕೆ ಅಗತ್ಯ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿ ಮತ್ತು ಎಐಎಡಿಎಂಕೆ ನಡುವೆ ಪೈಪೋಟಿ.
ಕೇರಳ:
140 ಸ್ಥಾನಗಳಲ್ಲಿ 71 ಸ್ಥಾನಗಳು ಬಹುಮತಕ್ಕೆ ಅಗತ್ಯ. ಎಲ್‌ಡಿಎಫ್, ಯುಡಿಎಫ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ.
ಅಸ್ಸಾಂ:
126 ಸ್ಥಾನಗಳಲ್ಲಿ 64 ಸ್ಥಾನಗಳು ಬಹುಮತಕ್ಕೆ ಅಗತ್ಯ. ಬಿಜೆಪಿ ಮೂರನೇ ಬಾರಿ ಗೆಲುವಿನತ್ತ ಕಣ್ಣಿಟ್ಟಿದ್ದು, ಕಾಂಗ್ರೆಸ್ ಪೈಪೋಟಿ ನೀಡುತ್ತಿದೆ.
ಪುದುಚೇರಿ:
30 ಸ್ಥಾನಗಳಲ್ಲಿ 16 ಸ್ಥಾನಗಳು ಬಹುಮತಕ್ಕೆ ಅಗತ್ಯ. ರಂಗಸ್ವಾಮಿ ನೇತೃತ್ವದ ಮೈತ್ರಿಕೂಟ ಮತ್ತು ಇಂಡಿಯಾ ಮೈತ್ರಿಕೂಟ ನಡುವೆ ಹಣಾಹಣಿ.
ಉಪಚುನಾವಣೆ ಮತ ಎಣಿಕೆ
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಮತ ಎಣಿಕೆಯೂ ಇಂದು ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದೆ. ಮಧ್ಯಾಹ್ನ ವೇಳೆಗೆ ಫಲಿತಾಂಶ ನಿರೀಕ್ಷಿಸಲಾಗಿದೆ.
ಎಣಿಕಾ ಕೇಂದ್ರಗಳು:
ದಾವಣಗೆರೆ – ಡಿ.ಆರ್.ಆರ್. ವಿದ್ಯಾಸಂಸ್ಥೆ
ಬಾಗಲಕೋಟೆ – ತೋಟಗಾರಿಕೆ ವಿಶ್ವವಿದ್ಯಾಲಯ
ಭದ್ರತೆ
ಮತ ಎಣಿಕಾ ಕೇಂದ್ರಗಳ ಸುತ್ತ 100 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವಾಗಿ ಘೋಷಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

- Advertisement -spot_img

More articles

- Advertisement -spot_img

Latest article