ಇದೇನಾ ಸಂಸ್ಕತಿ, ಇದೇನಾ ಸಭ್ಯತೆ….ಇವೆಂಥಾ ಶೈಕ್ಷಣಿಕ ಸಂಸ್ಥೆಗಳು…?

0
149

ಭಾರತೀಯ ಸಂಸ್ಕೃತಿ ಪ್ರತಿಪಾದಕರೇ ಇಂಥಾ ಕಾರ್ಯಕ್ರಮಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ…? ಪಬ್ ಗಳಿಗೆ,ಬಾರ್ ಗಳಿಗೆ ನುಗ್ಗಿ ದಾಂದಲೆ ಮಾಡಿ ಹುಡುಗಿಯರ ಮಾನ ರಕ್ಷಣೆ , ಸಂಸ್ಕತಿ ರಕ್ಷಣೆ ಅಂತ ಆರ್ಭಟಿಸುವ ಮಂದಿ ಇಂಥಾ ಕಾರ್ಯಕ್ರಮಗಳಲ್ಲಿ ಎಲ್ಲಿದ್ದೀರಿ…?

ದೊಡ್ಡ ದೊಡ್ಡ ಕಾಲೇಜುಗಳು ಇಂದು ಕೇವಲ ಉತ್ತಮ ಶಿಕ್ಷಣಕ್ಕೆ ಮಾತ್ರವಲ್ಲ . ಮನರಂಜನಾ ತಾಣವಾಗಿ ಮಾರ್ಪಟ್ಟಿವೆ. ಕಾಲೇಜಿಗೆ ಹೋಗೋದು ಅಂದ್ರೆ ಎಂಜಾಯ್ ಮಾಡೋಕೆ ಅಂತಾನೆ ಎಂಬುವಷ್ಟರ ಮಟ್ಟಿಗೆ ಹದಗೆಟ್ಟಿವೆ.
ನಿನ್ನೆ ಆಚಾರ್ಯ ಕಾಲೇಜಿನಲ್ಲಿ ಮಧ್ಯರಾತ್ರಿಯಾದರೂ ಡ್ಯಾನ್ಸ್ ,‌ಮೋಜು, ಮಸ್ತಿ ಮುಗಿದಿರಲಿಲ್ಲ…! ಡಿಜೆ ಸದ್ದಿನಲ್ಲಿ ಸ್ಟೂಡೆಂಟ್ಸ್ ಕಳೆದೋಗಿದ್ರು. ಸಾವಿರಾರು ಜನ ಸೇರಿದ್ದ ಆ ಜಾಗ ಸಭ್ಯರಿಗೆ ಸೂಕ್ತ ಎನ್ನುವಂತಿರ್ಲಿಲ್ಲ.‌ ಅಲ್ಲಿ ಅಹಿತಕರ ಘಟನೆಗಳು ನಡೆಯುವ ಎಲ್ಲಾ ಸಾಧ್ಯತೆಗಳು ಇದ್ದಂತಿದ್ದವು ಎಂಬುದಕ್ಕೆ ನೀವಿಲ್ಲಿ ನೋಡಲಿರುವ ವೀಡಿಯೋವೇ ಸಾಕ್ಷಿ…!

ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಜಾ ಬೇಕೇ ಬೇಕು. ಆದರೆ ಯಾವದಕ್ಕೂ ಒಂದು‌ ಮಿತಿ ಇರುತ್ತೆ ಅಲ್ವಾ? ಈ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಸೇರಿದಂತೆ ಬೋಧಕ ವರ್ಗಕ್ಕೆ ಸಾಮಾನ್ಯ ಅರಿವೂ ಇಲ್ಲದಾಯಿತೇ? ಪೊಲೀಸ್ ಇಲಾಖೆಯಾದರೂ ಅಷ್ಟೊತ್ತು ಕಾರ್ಯಕ್ರಮ ಮಾಡಲು ಅನುಮತಿ ಕೊಟ್ಟಿದ್ದೇಕೆ…? ಮದ್ಯದ ಅಮಲೋ, ಇನ್ಯಾವೋದೋ ಗುಂಗಲ್ಲಿ ಏನಾದರೂ ನಡೆಯಬಾರದ ಘಟನೆಗಳು‌ ನಡೆದಿದ್ದರೆ ಯಾರು ಹೊಣೆ?


ಇದು ಕೇವಲ ಆಚಾರ್ಯ ಕಾಲೇಜಿಗೇ ಮಾತ್ರ ಮೀಸಲಲ್ಲ. ಆಧುನಿಕತೆ, ಫಾಸ್ಟ್ ಲೈಫ್ ಹೆಸರಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಅತಿರೇಕ ಶೋಭೆಯಲ್ಲ.‌‌ ಈ ಬಗ್ಗೆ ನಿಮ್ಮ ಅಭಿಪ್ರಾಯ?

 

LEAVE A REPLY

Please enter your comment!
Please enter your name here