No menu items!
18 C
Munich
Wednesday, August 19, 2026

ಕಾಮುಕರ ಕಾಟಕ್ಕೆ ಬಲಿಯಾದಳು ಬಾಲಕಿ…!

Must read

ಬಾಲಕಿಯೊಬ್ಬಳು ಕಾಮುಕರ ಕಾಟದಿಂದ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಯಾದಗಿರಿಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ನಡೆದಿದೆ.

m

ಸುಪ್ರಿಯ ಮೃತ ದುರ್ದೈವಿ. ಮೌನೇಶ್ ಮತ್ತು ನಿಂಗಪ್ಪ ಆರೋಪಿಗಳು.
ಮಾರ್ಚ್ 19 ರಂದು ಬೆಳಗ್ಗೆ ಸುಪ್ರಿಯ ಬಟ್ಟೆ ತೊಳೆದು ಮನೆಗೆ ವಾಪಸ್ಸಾಗುವಾಗ ಮೌನೇಶ್ ಮತ್ತು ನಿಂಗಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಆಕೆ ಮನೆಗೆ ಬಂದು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.


ತಕ್ಷಣ ಸುಪ್ರಿಯಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ಆದರೆ, ಚಿಕಿತ್ಸೆ ಫಲಿಸದೆ ನಿನ್ನೆ ಕೊನೆಯುಸಿರೆಳೆದಿದ್ದಾಳೆ‌.
ಸುರಪುರ ಪೊಲೀಸರು ಆರೋಪಗಳನ್ನು ಬಂಧಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article