ಶಿಕ್ಷಣವೂ ಉದ್ಯಮವಾಗಿ ಬದಲಾಗ್ತಾ ಇದೆ ಅನ್ನೋದು ಮತ್ತೆ ಮತ್ತೆ ಸಾಭೀತಾಗ್ತಾ ಇದೆ..! ಈ ಶಿಕ್ಷಣ ವ್ಯಾಪರೀಕರಣದ ಕರ್ಮಕಾಂಡದ ಸರದಿ ಈಗ ಆಗ್ರಾದ ಬಿ.ಆರ್ ಅಂಬೇಡ್ಕರ್ ವಿಶ್ವವಿದ್ಯಾಲಯದ್ದು..! ಈ ವಿಶ್ವವಿದ್ಯಾಲಯದಲ್ಲಿ ದುಡ್ಡುಕೊಟ್ಟರೆ ವಿದ್ಯಾರ್ಹತಾ ಪ್ರಮಾಣ ಪತ್ರ ಕೊಡ್ತಾರೆ..! ಇವರ ಖಜಾನೆ ತುಂಬಿಸಿಕೊಳ್ಳೋ ಹಪಹಪಿಗೆ ಶಿಕ್ಷಣವನ್ನು ಮಾರಾಟದ ವಸ್ತುವನ್ನಾಗಿ ಮಾಡಿಕೊಂಡು ಬಿಟ್ಟಿದ್ದಾರೆ..! ಈ ವಿಶ್ವವಿದ್ಯಾಲಯಕ್ಕೆ ಬಿಇಡ್ ಪದವಿಗೆ ಸೇರಿ, ದಿನನಿತ್ಯ ತರಗತಿಗೆ ಬಂದುಹೋಗ್ತಾ ಇದ್ದ ಭಾವಿ ಶಿಕ್ಷಕರು 12800. ಆದರೆ ಈ ವಿವಿಯಿಂದ ಬಿಇಡ್ ಪದವಿ ದಯಪಾಲಿಸಿದ್ದು 20,000ರ ಜನರಿಗೆ..! ಅಂದರೆ ಬರೊಬ್ಬರಿ 7000 ಜನ ದುಡ್ಡು ಕೊಟ್ಟು ಬಿಇಡ್ ಪದವಿ ಪಡೆದವರು..!
ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 191 ಬಿಇಡ್ ಕಾಲೇಜುಗಳು ಬರುತ್ತವೆ. ಯಾವ ಯಾವ ಕಾಲೇಜುಗಳು ಎಷ್ಟೆಷ್ಟು ಹಣ ತಗೊಂಡು ಈ ವ್ಯಾಪಾರ ಮಾಡ್ತಾ ಇವೆ ಅನ್ನೋದನ್ನು ಪತ್ತೆಹಚ್ಚಿ ಕಾನೂನು ಕ್ರಮಜರುಗಿಸ ಬೇಕಾದ ಜರೂರತ್ತೂ ಇದೆ..!
ಈ ರೀತಿ ಶಿಕ್ಷಣವನ್ನು ಮಾರಾಟದ ಸರಕನ್ನಾಗಿ ಮಾರ್ಪಡಿಸ್ತಾ ಇರೋಂದ್ರಿಂದ ಶಿಕ್ಷಣ ಸಂಸ್ಥೆಗಳಿಗೆ ಮೋಟೆಯಲ್ಲೇ ದುಡ್ಡು ಸಿಗಬಹುದು. ಮಾನ ಮಯರ್ಾದೆ, ನೈತಿಕತೆ ಬಿಟ್ಟು ಶಿಕ್ಷಣವನ್ನೂ ಕೊಡುಕೊಳ್ಳುವಿಕೆಯ ವ್ಯಪಾರವನ್ನಾಗಿಸ್ತಾ ಇರೋರಿಗೆ ನಾಚಿಕೆ ಆಗಲ್ವಾ..?! ಶಿಕ್ಷಣ ಮಾರಾಟ ಆಗ್ತಾ ಇದ್ರೆ ನಿಜವಾದ ವಿದ್ಯಾವಂತರು ರೂಪು ತಳೆಯುವುದಾದರೂ ಹೇಗೆ..? ಶಿಕ್ಷಣ ವ್ಯಾಪಾರಿಗಳಿಗೆ ನಾಚಿಕೆ ಆಗ್ಬೇಕೆ.. ಥೂ…
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!
ಸಲ್ಮಾನ್ ಖಾನ್ ನಿರಪರಾಧಿ..! ಹಾಗಾದರೆ ನಿಜವಾದ ಆಪರಾಧಿ ಯಾರು..?
ಇವರಿಗೆ 25 ವರ್ಷಗಳ ನಂತರ ಅಮ್ಮ ಸಿಕ್ಕಳು..! ಗೂಗಲ್ ಅರ್ಥ್ ಸಹಾಯದಿಂದ ತಾಯಿಯನ್ನು ಹುಡುಕಿದ ಮಗ..!
ಕೈ ಇಲ್ಲದ ಈ ಕ್ರಿಕೆಟಿರ್ ಗೂಗ್ಲೀ ಎಸೆಯುತ್ತಾನೆ..! ಸಿಕ್ಸರ್ ಸಿಡಿಸಿ ಮನೋರಂಜನೆ ಒದಗಿಸುತ್ತಾನೆ..!
ಬರೀ ಪೈರಸಿ ಸಿನಿಮಾಗಳನ್ನು ನೋಡ್ಕೊಂಡು ಕನ್ನಡ ಸಿನಿಮಾಗಳ ವಿರುದ್ಧವೇ ಮಾತಾಡಿದ್ರೆ ಹೇಗೆ ಸ್ವಾಮಿ..
ಇವರು ಎಂಬಿಬಿಎಸ್ ಸ್ಟೂಡೆಂಟ್, ಆಟೋ ಡ್ರೈವರ್..! ಇವರು ಉಚಿತ ಆಟೋ ಸೇವೆ ಕೊಡ್ತಾರೆ ಯಾಕೆ ಗೊತ್ತಾ..?