ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರು ಜವಾಬ್ದಾರಿ ನೀಡಿದ್ದಾರೆ. ಇಂದು ಬೆಳಗ್ಗೆ ಆರ್. ಅಶೋಕ್ ಅವರು ಅಮಿತ್ ಶಾರನ್ನು ಭೇಟಿಯಾಗಿದ್ದರು. ಈ ವೇಳೆ ಅಶೋಕ್ಗೆ BBMP ಎಲೆಕ್ಷನ್ ಹೊಣೆ ನಿಮ್ಮ ಮೇಲಿದೆ. ನೀವು ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡುತ್ತೀರಿ. BBMP ಎಲೆಕ್ಷನ್ನಲ್ಲಿ ಕಮಲ ಅರಳಲೇಬೇಕು. ನಿಮ್ಮ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಅಮಿತ್ ಶಾ ತಿಳಿಸಿದ್ಧಾರೆ. ನೀವು ಬೇರೆ ನಾಯಕರ ರೀತಿ 2-3 ಬಾರಿ ಹೇಳಿಸಿಕೊಳ್ಳುವವರಲ್ಲ. ಒಮ್ಮೆ ಹೇಳಿದ್ರೆ ಫಟ್ ಅಂತಾ ಮಾಡಿ ತೋರಿಸ್ತೀರ. ನಿಮಗೆ ಏನ್ ಸಪೋರ್ಟ್ ಬೇಕು ಕೇಳಿ. ನಾವು ಕೊಡ್ತೀವಿ. ಬಿಬಿಎಂಪಿ ಚುನಾವಣೆ ನಿಮ್ಮ ಹೆಗಲ ಮೇಲಿದೆ. ಬೆಂಗಳೂರು ಬಿಜೆಪಿಯ ವಶದಲ್ಲೇ ಇರಬೇಕು. MLC ಎಲೆಕ್ಷನ್ನಲ್ಲಿ ಕೊಟ್ಟ ಜವಾಬ್ದಾರಿ ಅಚ್ಚುಕಟ್ಟಾಗಿ ಮಾಡಿದ್ದೀರಿ. BBMP ಎಲೆಕ್ಷನ್ ಗೆಲ್ಲಿಸೋ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಅಮಿತ್ ಶಾ ತಿಳಿಸಿದ್ಧಾರೆ.