No menu items!
14.8 C
Munich
Tuesday, June 16, 2026

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ರಾಹುಲ್ ದ್ರಾವಿಡ್

Must read

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭೆಯ ಮಲ್ಲೇಶ್ವರಂ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಆರ್ ಎಂ ವಿ ಕ್ಲಬ್ ನ ಮತಗಟ್ಟೆಯಲ್ಲಿ ಹಾಲಿ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಬಂದು ಬೆಳಗ್ಗೆಯೇ ಅವರು ತಮ್ಮ ಮತ ಚಲಾಯಿಸಿದರು. ಟೀ ಶರ್ಟ್ ಮತ್ತು ಶಾರ್ಟ್ ತೊಟ್ಟು ಬಹಳ ಸರಳವಾಗಿ ಮತಗಟ್ಟೆಗೆ ಬಂದ ಅವರು ಜನ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಆ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ವೆಗಳಿಗೆ ಶುದ್ಧವಾದ ಮತ್ತು ಸ್ಪಷ್ಟವಾದ ಕನ್ನಡದಲ್ಲಿಯೇ ಉತ್ತರಿಸಿದರು. ಮತದಾನ ಮಾಡಲು ಎಲ್ಲ ಬನ್ನಿ.ಇದೊಂದು ಒಳ್ಳೆಯ ಅವಕಾಶ. ಪ್ರಜಾಪ್ರಭುತ್ವ‌ ಮುಂದೆ ತರುವ ಅವಕಾಶವಾಗಿದ್ದು ಬೆಂಗಳೂರು ಸೇರಿದಂತೆ ಎಲ್ಲಡೆ ದೊಡ್ಡ ಪ್ರಮಾಣದಲ್ಲಿ ಮತದಾನ ಆಗಬೇಕು ಇದು ಎಂದು ಅಭಿಪ್ರಾಯಪಟ್ಟರು.

- Advertisement -spot_img

More articles

- Advertisement -spot_img

Latest article