ಪ್ರವಾಹದ ಮಧ್ಯೆಯೂ ರಾಜಕೀಯ ಬೇಕಿತ್ತಾ..? ಆಹಾರ ಪೊಟ್ಟಣಗಳ ಮೇಲೆ ಅಮ್ಮ ಸ್ಟಿಕ್ಕರ್ಸ್..!

0
152

ತಮಿಳುನಾಡಿನಲ್ಲಿ ಎಲ್ಲೇ ಹೋದರೂ ಅಮ್ಮನ ಫೋಸ್ಟರ್ ಗಳು ಕಾಣಸಿಗುತ್ತವೆ. ಅಲ್ಲದೇ ಅಮ್ಮ ಸಿಮೆಂಟ್, ಅಮ್ಮ ಟೂತ್ ಪೇಸ್ಟ್, ಅಮ್ಮ ವಾಶಿಂಗ್ ಪೌಡರ್, ಅಮ್ಮ ಶಾಂಪೂ, ಅಮ್ಮ ಸೋಪು, ಅಮ್ಮ ಕ್ಯಾಂಟೀನ್, ಅಮ್ಮ ವಾಟರ್, ಅಮ್ಮ ಟೀ, ಅಮ್ಮ ಉಪ್ಪು, ಅಮ್ಮ ಮೆಡಿಕಲ್ ಗಳನ್ನು ಗಮನಿಸಿದರೆ ತಮಿಳುನಾಡಿನಲ್ಲಿ ಜಯಲಲಿತಾರ ಜನಪ್ರೀಯತೆ ಹೇಗಿದೆ ಎಂಬುದು ಅರ್ಥವಾಗುತ್ತದೆ. ಈ ಎಲ್ಲಾ ವಸ್ತುಗಳು ಭಾರೀ ಜನ ಪ್ರೀಯತೆಯನ್ನೂ ಗಳಿಸಿಕೊಂಡಿದ್ದವು. ಆದರೆ ಇದೀಗ ಇದೇ ಅಮ್ಮ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಪ್ರವಾಹ ಪೀಡಿತರಿಗೆ ಹಂಚುತ್ತಿರುವ ಆಹಾರ ಪೊಟ್ಟಣಗಳ ಮೇಲೆಯೂ ಜಯಲಲಿತಾರ ಭಾವಚಿತ್ರಗಳನ್ನು ಅಂಟಿಸುವ ಮೂಲಕ ಶೋಕ ಸಾಗರದ ಮಧ್ಯೆಯೂ ರಾಜಕೀಯ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ವಿಶೇಷವೆಂದರೆ ಅಮ್ಮ ಪ್ರಾಡಕ್ಟ್ ಗಳ ಮೇಲೆ ಫೋಟೋ ಅಂಟಿಸಿದರೆ ಯಾವುದೇ ವಿವಾದ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ದೇಶದ ವಿವಿಧೆಡೆಗಳಿಂದ ಬರುತ್ತಿರುವ ಆಹಾರ ಪೊಟ್ಟಣ ಹಾಗೂ ದಿನಬಳಕೆ ವಸ್ತುಗಳ ಮೇಲೆಯೂ ಜಯಲಲಿತಾರವರ ಭಾವ ಚಿತ್ರಗಳನ್ನು ಬಲವಂತವಾಗಿ ಅಂಟಿಸಲಾಗುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದು ವೇಳೆ ಸ್ಟಿಕ್ಕರ್ ಗಳನ್ನು ಅಂಟಿಸಲು ಅವಕಾಶ ನೀಡದೇ ಹೋದಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ಹಂಚಲು ಬಿಡುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಅಮ್ಮನ ಸ್ಟಿಕ್ಕರ್ ಅಂಟಿಸಲು ಅವಕಾಶ ನೀಡಲಾಗುತ್ತಿದೆ.
`ಇತ್ತೀಚೆಗೆ 6 ಟ್ರಕ್ ಗಳಲ್ಲಿ ಕೋಯಂಬತ್ತೂರಿಗೆ ಆಹಾರ ಪೊಟ್ಟಣಗಳನ್ನು ತೆಗೆದುಕೊಂಡು ಹೋಗಿದ್ದೆವು. ಆಗ ಕೆಲವರು ಬಂದು ಜಯಲಲಿತಾರವರ ಚಿತ್ರವಿರುವ ಸ್ಟಿಕ್ಕರ್ ಗಳನ್ನು ಅಂಟಿಸಿ ಹೋದರು. ಇದು ನಮಗೆ ತೀವ್ರ ದುಃಖ ತಂದಿತ್ತು. ಕಡಲಿನಂತಾಗಿದ್ದ ಊರಿಗೆ ನೆರವಿನ ಹಸ್ತ ಚಾಚಿದ್ದ ನಾವು ಕೆಲ ಗೂಂಡಾಗಳಿಗೆ ಬೆದರಿ ಅಮ್ಮ ಸ್ಟಿಕ್ಕರ್ಸ್ ಅಂಟಿಸಲು ಅವಕಾಶ ಮಾಡಿಕೊಟ್ಟೆವು. ಅವರು ಪ್ರತಿಯೊಂದನ್ನೂ ಬಿಡದೇ ಎಲ್ಲಾ ವಸ್ತುಗಳಿಗೂ ಸ್ಟಿಕ್ಕರ್ಸ್ ಅಂಟಿಸಿದರು. ಇದು ಎಂತಹ ಅನಾಗರಿಕತೆಯನ್ನು ಎತ್ತಿ ತೋರಿಸಿತ್ತೆಂದರೆ ನಮ್ಮ ಮನಸ್ಸಿಗೆ ತೀವ್ರವಾಗಿ ನೋವುಂಟಾಗಿತ್ತು’ ಎಂದು ವಿನೋದ್ ದ್ವಾರ್ಕನಿ ಎಂಬುವವರು ಫೇಸ್ ಬುಕ್ ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾರೆ.
ನೋವಿನ ಮನೆಯಾಗಿರುವ ತಮಿಳುನಾಡಿನಲ್ಲಿ ಕೆಲವರು ನಡೆಸುತ್ತಿರುವ ಈ ಕೆಲಸಗಳು ತೀರಾ ಅನಾಗರಿಕವಾದವು. ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ವಿನೋದ್ ಹೇಳಿದ್ದಾರೆ. ಇಷ್ಟಕ್ಕೂ ಅಮ್ಮನ ಬೆಂಬಲಿಗರಿಗೆ ಇದು ಬೇಕಿತ್ತಾ..?

  • ರಾಜಶೇಖರ ಜೆ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ..!

`ಗ್ರಾಮೀಣ ಜನರಿಗಾಗಿ’ ಕೆಲಸ ಬಿಟ್ಟುಬಂದ ಇಂಜಿನಿಯರ್ಸ್..!

`ಕೊಹಿನೂರು ವಜ್ರ’ ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ’ದ ಮೇಲೂ ಬಿತ್ತು ಪಾಕ್ ಕಣ್ಣು..!

ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!

LEAVE A REPLY

Please enter your comment!
Please enter your name here