ಅಮೃತ ಬಳ್ಳಿ ಅಮೃತಕ್ಕೆ ಸಮಾನವೇ???

Date:

ಗುಡುಚಿ ಎಂದು ಆಯುರ್ವೇದದಲ್ಲಿ ಕರೆಯಲಾಗುವ ಅಮೃತ ಬಳ್ಳಿಯು ಪ್ರಕೃತಿಯು ಮಾನವನಿಗಿತ್ತ ಒಂದು ಅಮೂಲ್ಯ ಅಮೃತವೇ ಸರಿ! ಇದನ್ನು ಜೀವಂತಿ ಅಂತಲೂ ಕರೆಯುತ್ತಾರೆ. ಯಾಕೆಂದರೆ ಇದು ಎಷ್ಟೋ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಿ ನಮ್ಮ ಜೀವವನ್ನು ಕಾಪಾಡುತ್ತದೆ. ಹೃದಯದಾಕಾರದಲ್ಲಿ ಇದರ ಎಲೆಗಳಿದ್ದು, ಇದು ಸುತ್ತಲೂ ಎತ್ತರೆತ್ತರಕ್ಕೆ ಬಳ್ಳಿಯಂತೆ ಹಬ್ಬುತ್ತದೆ, ಬೆಳೆಯುತ್ತದೆ, ಇದರ ಬಟಾನಿಕಲ್ ಹೆಸರು ತಿನೋಸ್ಪೋರಾ ಕೋರ್ಡಿಫ಼ೋಲಿಯಾ ಎಂಬುದಾಗಿದ್ದು ಇದನ್ನು ಹಿಂದಿಯಲ್ಲಿ ಗಿಲೋಯ್ ಎಂಬುದಾಗಿಯೂ ಕರೆಯಲಾಗುತ್ತದೆ. ಹಲವು ಕಾಯಿಲೆಗಳಿಂದ ನಮ್ಮನ್ನು ಕಾಪಾಡುವ ಗುಣ ಉಳ್ಳದ್ದಕ್ಕೇ ಇದಕ್ಕೆ ಅಮೃತ ಎಂಬ ಹೆಸರು ನೀಡಲಾಗಿದೆ.
ಹಲವು ಸಸ್ಯ ಜನ್ಯ ವಸ್ತುಗಳಾದ ಡೈಟರ್ಪೆನೈಡ್, ಕೋರ್ಡಿಪೋಲ್, ಟೈನೋಸ್ಪೋರಿನ್, ಕಾರ್ಡಿಫೋಲೈಡ್, ಹೆಪ್ಟಾಕೋಸಫ಼್ಲೋಲ್, ಗ್ಲೈಕೋಸೈಡ್ಸ್, ಐಸೋಕೊಲಂಬಿನ್ ಮೊದಲಾದವುಗಳು ಇದರಲ್ಲಿದೆ. ಆಯುರ್ವೇದದಲ್ಲಿ ಇದನ್ನು ನವ ತಾರುಣ್ಯವನ್ನು ನೀಡುವ ಔಷಧಿಯೆಂದು ಕರೆಯಲಾಗುತ್ತದೆ. ಇದಲ್ಲದೆ ಅನೇಕ ಸಂಪತ್ತಾದ ಆಂಟಿ ಆಕ್ಸಿಡೆಂಟ್ಸ್, ಆಂಟಿಟ್ಯೂಮರ್, ಹೈಪೋಗ್ಲೈಸೆಮಿಕ್, ಆಂಟಿ ಮೈಕ್ರೋಬಯಲ್, ಡ್ಯೂರೆಟಿಕ್, ಹೆಪಟೋಪ್ರೋಟೆಕ್ಟಿವ್ ಹಾಗೂ ಆಂಟಿಪೈರೆಟಿಕ್ ಗಳನ್ನೊಳಗೊಂಡಿದೆ.
1.ಚರ್ಮದ ರಕ್ಷಣೆಯಲ್ಲಿ ಸಹಕಾರಿ
ಚರ್ಮಕ್ಕೆ ರಕ್ಷಣೆಯನ್ನು ನೀಡಿ ಅನೇಕ ತರಹದ ಸಮಸ್ಯೆಯನ್ನು ನಿವಾರಿಸುತ್ತದೆ, ಚರ್ಮಕ್ಕೆ ಗಾಯವಾದಲ್ಲಿ ಅದನ್ನು ಗುದ್ದಿ ಹುಡಿ ಮಾಡಿ ಕಹಿಬೇವಿನ ಎಣ್ಣೆಯೊಂದಿಗೆ ಹುರಿದು ಗಾಯದ ಮೇಲೆ ಪಟ್ಟಿ ಹಾಕಬೇಕು. ಗುಡುಚಿ ಎಲೆಗಳನ್ನು ಹರಳೆಣ್ಣೆಯಲ್ಲಿ ಹುರಿದು ಆರ್ಥ್ರೈಟಿಸ್ ಹಾಗೂ ಸಂಧಿವಾತದ ರೋಗಿಗಳಿಗೆ ಹಚ್ಚಬಹುದು. ಸೋರಿಯಾಸಿಸ್ ನ ನಿವಾರಣೆಯಲ್ಲೂ ಇದು ಉತ್ತಮ ಪಾತ್ರ ವಹಿಸುತ್ತದೆ.
2.ಅಲರ್ಜಿಗೆ ಉತ್ತಮ ಪರಿಹಾರ
ಗುಡುಚಿಯ ಮಾತ್ರೆಗಳ ಸೇವನೆಯಿಂದ ಅನೇಕ ತರಹದ ಅಲರ್ಜಿಗಳಾದ ಸೀನುವಿಕೆ, ಕಣ್ಣಿನಿಂದ ನೀರು ಬರುವುದು, ಕಣ್ಣು ಹಾಗೂ ಕಿವಿಯ ತುರಿಕೆ ಗಂತಹ ಸಮಸ್ಯೆಗಳು ಪರಿಹಾರವಾಗುತ್ತದೆ.
3.ಉತ್ತಮ ಲಿವರ್ ಟಾನಿಕ್
ಅಮೃತ ಬಳ್ಳಿಯ ಕಾಂಡವನ್ನು ಸ್ವಲ್ಪ ನೀರಿನೊಂದಿಕೆ ಕುದಿಸಿ ಕಷಾಯದಂತೆ ಕುಡಿದಲ್ಲಿ ಅನೇಕ ತರಹದ ಉದರ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ.
4.ಡಯಾಬಿಟಿಸ್ ನಿವಾರಣೆ
ಇದರ ಸೇವನೆಯಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಅಲ್ಲದೆ ಡಯಾಬಿಟಿಸ್ ಮೆಲ್ಲಿಟಸ್ ನ ದೀರ್ಘಾವಧಿ ತೊಂದರೆಯಿಂದ ಬಳಲುತ್ತಿರುವವರಿಗೆ ಉಂಟಾಗುವ ಪೆರಿಫೆರಲ್ ನ್ಯೂರೋಪತಿ ರೋಗ( ಕೈ ಕಾಲುಗಳಿಗೆ ಸ್ಪರ್ಶ ಜ್ಝಾನ ವಿಲ್ಲವಾಗುವಿಕೆ)ಕ್ಕೆ ಇದರ ಎಣ್ಣೆಯನ್ನು ಸ್ಪರ್ಷ ಜ್ಝಾನವಿಲ್ಲದ ಕಾಲು ಕೈಗಳಿಗೆ ಹಚ್ಚಿದಲ್ಲಿ ಮತ್ತೆ ಅಲ್ಲಿ ಶಕ್ತಿ ಸಂಚಲನವಾಗುತ್ತದೆ.
5.ಗುಡುಚಿ ಚಹಾ
ಇದನ್ನು ತಯಾರಿಸಲು ತೀರಾ ಸುಲಭ, ಇದು ಎಳ್ಳಷ್ಟೂ ಕಹಿಯನ್ನೊಳಗೊಂಡಿರಲ್ಲ ಬದಲಾಗಿ ಕುಡಿಯಲು ಹಿತವಾಗಿರುತ್ತದೆ. ಇದನ್ನು ತಯಾರಿಸಲು ಎಲೆಗಳನ್ನು ಕಾಂಡದಿಂದ ಬೇರ್ಪಡಿಸಬೇಕು. ಒಂದು ಕಪ್ ಚಹಾಕ್ಕೆ 1.5 ಇಂಚು ಉದ್ದದ 5-6 ತುಂಡು ಕಡ್ಡಿಯು ಸಾಕಾಗುತ್ತದೆ.ಇದಕ್ಕೆ ೫ ಕಾಳು ಮೆಣಸಿನ ಬೀಜ,೨ ಚಮಚ ಬೆಲ್ಲ ಹಾಗೂ ಅರ್ಧ ಚಮಚ ಜೀರಿಗೆ ಸೇರಿಸಿ ಕುಟ್ಟಿ ಪುಡಿ ಮಾಡಿ, ಗುಡುಚಿಯನ್ನು ಸಣ್ಣ ಸಣ್ಣ ಚೂರು ಮಾಡಿಟ್ಟು ಕೊಂಡು, ಕುದಿಯುತ್ತಿರುವ ಒಂದು ಕಪ್ ನೀರಿಗೆ ಸೇರಿಸಿ ಅದನ್ನು ಅರ್ಧ ಕಪ್ ಆಗುವ ತನಕ ಕುದಿಸಿ ಮತ್ತೆ ಕುಡಿಯಬೇಕು.ಇದು ಜ್ವರಕ್ಕೆ ರಾಮಬಾಣ ಹಾಗು ಉದರ ಸಂಬಂಧಿ ಎಲ್ಲಾ ಕಾಯಿಲೆಗಳಿಗೂ ಹೇಳಿ ಮಾಡಿಸಿದ ಮದ್ದು ಜೊತೆಗೆ ಕ್ಯಾನ್ಸರ್ ನಿವಾರಕ ಅಂತಲೂ ಹೇಳಲಾಗುತ್ತದೆ.
ಇಷ್ಟೆಲ್ಲಾ ಪ್ರಯೋಜನಕಾರಿ ಸಂಪತ್ತಾದ ಅಮೃತಬಳ್ಳಿ ಅರ್ಥಾತ್ ಗುಡುಚಿ ನಿಜಕ್ಕೂ ಅಮೃತವೇ ಸರಿ ತಾನೇ.?!

  • ಸ್ವರ್ಣಲತ ಭಟ್

Like us on Facebook  The New India Times

POPULAR  STORIES :

ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

Share post:

Subscribe

spot_imgspot_img

Popular

More like this
Related

ಬೆಂಗಳೂರು–ಕರಾವಳಿ–ಗೋವಾ ನಡುವೆ ವಂದೇ ಭಾರತ್‌ ರೈಲು ಸೇವೆಗೆ ಹೆಚ್‌.ಡಿ. ಕುಮಾರಸ್ವಾಮಿ ಮನವಿ

ಬೆಂಗಳೂರು–ಕರಾವಳಿ–ಗೋವಾ ನಡುವೆ ವಂದೇ ಭಾರತ್‌ ರೈಲು ಸೇವೆಗೆ ಹೆಚ್‌.ಡಿ. ಕುಮಾರಸ್ವಾಮಿ ಮನವಿ ನವದೆಹಲಿ:...

ಬ್ರೆಡ್ ಒಳಗೆ ಕೊಕೇನ್ ಸಾಗಾಟ: ನೈಜೀರಿಯಾ ಮೂಲದ ಮಹಿಳೆ ಅರೆಸ್ಟ್

ಬ್ರೆಡ್ ಒಳಗೆ ಕೊಕೇನ್ ಸಾಗಾಟ: ನೈಜೀರಿಯಾ ಮೂಲದ ಮಹಿಳೆ ಅರೆಸ್ಟ್ ಬೆಂಗಳೂರು: ತಿನ್ನುವ...

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಪಂದ್ಯಕ್ಕೆ ನಿರಾಕರಣೆ

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಪಂದ್ಯಕ್ಕೆ ನಿರಾಕರಣೆ ಬೆಂಗಳೂರು: ವಿಜಯ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ; ಬೆಂಗಳೂರಿನ AQI ಆತಂಕಕಾರಿ ಮಟ್ಟಕ್ಕೆ ಕುಸಿತ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ; ಬೆಂಗಳೂರಿನ AQI ಆತಂಕಕಾರಿ...