ಭಾರತದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಾ ಇರುವ ವಿರುದ್ದವಾಗಿ ಧನಿ ಎತ್ತಿ ಹೋರಾಟ ನಡೆಸಿದ್ದ ಗಾಂಧಿವಾದಿ ಪರಿಪಾಲಕರು, ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆ ಮತ್ತೆ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.. ಆದ್ರೆ ಕಾರಣ ಮಾತ್ರ ಸ್ವಲ್ಪ ವ್ಯತಿರಿಕ್ತವಾದದ್ದು. ಈ ಬಾರಿ ಅಣ್ಣಾ ಅವರು ಹೋರಾಟಕ್ಕಿಳಿಯಲು ಮುಖ್ಯ ಉದ್ದೇಶವೇ ಭಾರತದಲ್ಲಿ ಮದ್ಯ ನಿಷೇಧ ಮಾಡುವ ಕುರಿತು..! ಹೌದು.. ದೇಶದಲ್ಲಿ ಮಧ್ಯ ವ್ಯಸನಿಗಳ ಹಾವಳಿ ದಿನೇ ದಿನೆ ಹೆಚ್ಚಿಗೆ ಕಾಣ್ತಾ ಇರೋ ಹಿನ್ನಲೆಯಲ್ಲಿ ಮದ್ಯ ಹಾವಳಿ ತಡೆಗೆ ಕಠಿಣ ಕಾನೂನು ಜಾರಿಯಾಗಬೇಕು ಎಂದು ತಮ್ಮ ಮುಂದಿನ ಚಳುವಳಿಯನ್ನು ನಡೆಸಲಿದ್ದಾರೆ. ಭಾನುವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮಯೊಂದರಲ್ಲಿ ಮಾತನಾಡಿದ ಅವರು ಮದ್ಯದಿಂದ ಅದೆಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಅದರಲ್ಲೂ ಮಹಿಳೆಯರು ಸಾಕಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕಾಗಿ ನಾನು ಮುಂದಿನ ಹೋರಾಟ ನಡೆಸಲಿದ್ದೇನೆ ಎಂದು ಅಣ್ಣಾ ಘೋಷಿಸಿಕೊಂಡಿದ್ದಾರೆ.
Like us on Facebook The New India Times
POPULAR STORIES :
ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!
12 ವರ್ಷದ ಅಪ್ರಾಪ್ತ ಬಾಲಕನಿಂದ 18 ವರ್ಷದ ಯುವತಿ ತಾಯಿಯಾದ್ಲು..!
ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?
ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ
ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!