ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಹಣ್ಣು ಮತ್ತು ತರಕಾರಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತೆ. ಅದೇ ರೀತಿ ಕೆಲವು ಹಣ್ಣುಗಳು ಕೇವಲ ಪೋಷಕಾಂಶ ಮಾತ್ರವಲ್ಲದೇ ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತೆ ಅನ್ನೋದು ಅಧ್ಯಯನ ಒಂದರಿಂದ ಧೃಡ ಪಟ್ಟಿದೆ. ವಿಟಮೀನ್ ಪ್ರೋಟೀನ್ ಶುಗರ್ ಕಂಟೆಂಟ್ ಜೊತೆ ಜೊತೆಗೆ ಹಣ್ಣುಗಳು ಮುಖದ ಸೌಂದರ್ಯಕ್ಕೂ ಸಹಕಾರಿಯಾಗುತ್ತೆ.. ಅಂತಹ ಹಣ್ಣುಗಳಲ್ಲಿ ಪ್ರತಿ ನಿತ್ಯ ನಾವು ಸೇವಿಸೋ ಬಾಳೆ ಹಣ್ಣು ಕೂಡ ಒಂದು.. ಹಾಗಾದ್ರೆ ಬಾಳೆ ಹಣ್ಣು ಹೇಗೆ ತ್ವಚೆಯ ಕೋಮಲತೆಯನ್ನು ಕಾಪಾಡುವಲ್ಲಿ ತನ್ನ ಪಾತ್ರ ವಹಿಸುತ್ತೆ ಅನ್ನೋದನ್ನ ನೋಡೋಣ..

ಮಾಗಿದ ಅರ್ಧ ಬಾಳೆ ಹಣ್ಣು:
ಮಾಗಿದ ಅರ್ಧ ಬಾಳೆಯನ್ನು ತೆಗೆದುಕೊಂಡು ಅದನ್ನು ನುಣ್ಣಗೆ ಕಲಸಿಕೊಂಡು ಮುಖ ಮತ್ತು ಕುತ್ತಿಗೆಯ ಜಾಗಕ್ಕೆ ಸಂಪೂರ್ಣವಾಗಿ ಲೇಪಿಸಿಕೊಂಡು ಸುಮಾರು 20-25 ನಿಮಿಷಗಳ ಕಾಲ ಹಾಗೆ ಬಿಡಿ. ಆನಂತರ ಉಗುರುಬೆಚ್ಚಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ. ಈ ವಿಧಾನದಿಂದ ಚರ್ಮಕ್ಕೆ ನೈಸರ್ಗಿಕ ತೇವಾಂಶವನ್ನು ನೀಡುವುದಲ್ಲದೇ ಕಪ್ಪು ಕಲೆಗಳನ್ನು ತೆಗೆಯುತ್ತದೆ. ಇನ್ನು ಚರ್ಮ ಒಣ ಅಥವಾ ಪೇಲವಗೊಂಡಿದ್ದರೆ ಜೇನುತುಪ್ಪ ಸೇರಿಸಿ ಹಚ್ಚಿಕೊಳ್ಳಿ.
ಪೂರ್ಣ ಪ್ರಮಾಣ ಹಣ್ಣಾದ ಬಾಳೆಹಣ್ಣು:
ತುಂಬಾ ಚನ್ನಾಗಿ ಹಣ್ಣಾಗಿರುವ ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕಿವುಚಿಟ್ಟುಕೊಳ್ಳಿ. ಅದಕ್ಕೆ ಎರಡು ಚಮಚ ನಿಂಬೆ ರಸ ಮಿಶ್ರಣ ಮಾಡಿ ಮುಖ ಹಾಗೂ ಕುತ್ತಿಗೆಯ ಬಳಿ ಲೇಪಿಸಿಕೊಳ್ಳಿ 20 ನಿಮಿಷಗಳ ನಂತರ ಉಗುರು ಬೆಚ್ಚಿ ನೀರಿನಿಂದ ಮುಖ ತೊಳೆದುಕೊಳ್ಳಿ. ಈ ವಿಧಾನದ ಮೂಲಕ ಕಾಂತಿಯುತ ಮುಖ ನಿಮ್ಮದಾಗುವ ಜೊತೆಗೆ ಮುಖದ ಕಲೆ ನಿವಾರಣೆಯಾಗುತ್ತದೆ.
ಅವಕಾಡೋ ಮತ್ತು ಬಾಳೆಹಣ್ಣು:
ಅವಕಾಡೋ ಅಥವಾ ಬೆಣ್ಣೆಹಣ್ಣು ಮತ್ತು ಬಾಳೆಹಣ್ಣು ಎರಡನ್ನೂ ಚನ್ನಾಗಿ ಕಲಸಿಟ್ಟುಕೊಂಡು ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ಬಿಸಿನೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ಮುಖ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ.
ಅರ್ಧ ಬಾಳೆಹಣ್ಣು:
ಕಣ್ಣು ಬಾಹು ಅಥವಾ ಊದಿಕೊಂಡ ಭಾಗಕ್ಕೆ ಅರ್ಧ ಬಾಳೆಹಣ್ಣನ್ನು ಹಚ್ಚಿಕೊಂಡರೆ ಊದು ನಿವಾರಣೆಯಾಗುತ್ತದೆ.
ಬಾಳೆಹಣ್ಣು ಮತ್ತು ಸಕ್ಕರೆ:
ಚೆನ್ನಾಗಿ ಕಲಸಿಟ್ಟುಕೊಂಡ ಬಾಳೆ ಹಣ್ಣಿನ ಮಿಶ್ರಣಕ್ಕೆ ಸಕ್ಕರೆ ಹಾಕಿ ಕಲಸಿಕೊಂಡು ಮುಖಕ್ಕೆ ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಂಡು ಮುಖ ತೊಳೆದುಕೊಳ್ಳಿ. ಈ ವಿಧಾನದ ಮೂಲಕ ನೈಸರ್ಗಿಕ ಸ್ಕ್ರಬ್ ಹಾಗೂ ಮೋಯಿಶ್ಚರ್‍ನಂತೆ ಕೆಲಸ ಮಾಡುತ್ತದೆ. ಅಲ್ಲದೇ ಸಕ್ಕರೆ, ಸತ್ತ ಕೋಶವನ್ನು ಹೊರಹಾಕುತ್ತದೆ.






